ʻಪವರ್ ಸ್ಟಾರ್ʼ ಪುನೀತ್ ರಾಜ್‌ಕುಮಾರ್ ಅಭಿನಯದ ʻಆಕಾಶ್ʼ ಚಿತ್ರವು 21 ವರ್ಷಗಳ ಬಳಿಕ ಇಂದು (ಮಾ.13) ರೀ-ರಿಲೀಸ್ ಆಗಿದೆ. ಮಾ.17ರಂದು ಪುನೀತ್ ಹುಟ್ಟುಹಬ್ಬ ಇರುವುದರಿಂದ ʻಆಕಾಶ್ʼ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪ್ರತಿ ಅಪ್ಪು ಹುಟ್ಟುಹಬ್ಬಕ್ಕೆ ಒಂದೊಂದು ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಈಗ ಆಕಾಶ್ ಸಿನಿಮಾವನ್ನು ರಿಲೀಸ್ ಮಾಡಿದ್ದಾರೆ. ಅಭಿಮಾನಿಗಳು ಸಂತೋಷದಿಂದ ಸಿನಿಮಾವನ್ನು ಮತ್ತೊಮ್ಮೆ ವೀಕ್ಷಣೆ ಮಾಡಿದ್ದಾರೆ. ಸೆಲೆಬ್ರಿಟಿಗಳು ಕೂಡ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಹಾಗಾದರೆ, ಯಾರೆಲ್ಲಾ ಏನ್ ಹೇಳಿದರು? ಮುಂದೆ ಓದಿ.
Puneeth Rajkumar: ಅಪ್ಪು ಅಜರಾಮರ! ಪುನೀತ್ ರಾಜ್ ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ!
ಆಕಾಶ್ ಸಿನಿಮಾ ನೋಡಿ ಖುಷಿಪಟ್ಟ ನಮ್ರತಾ ಗೌಡ
"ನಾನು ಈ ಸಿನಿಮಾವನ್ನು ಸ್ಕೂಲ್‌ನಲ್ಲಿ ಇದ್ದಾಗ ನೋಡಿದ ನೆನಪು. ಕಳೆದ ವರ್ಷ ನಾನು ಅಪ್ಪು ಸಿನಿಮಾ ನೋಡಿದ್ದೆ. ಈ ವರ್ಷ ಆಕಾಶ್ ಸಿನಿಮಾ ನೋಡುತ್ತಿದ್ದೇನೆ. ನನಗಂತೂ ಮತ್ತೊಮ್ಮೆ ಪುನೀತ್ ಅವರನ್ನು ನೋಡುವುದಕ್ಕೆ ಥ್ರಿಲ್ ಆಗುತ್ತೇನೆ. ನನಗೆ ನೀನೆ ನೀನೆ ಸಾಂಗ್ ತುಂಬಾ ಇಷ್ಟ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಮಾತ್ರವಲ್ಲ, ಟಿವಿಯಲ್ಲೂ ನೋಡಿದ್ದೇನೆ. ಈಗ ಮತ್ತೊಮ್ಮೆ ದೊಡ್ಡ ಮೇಲೆ ನೋಡುವುದಕ್ಕೆ ಖುಷಿ ಆಗುತ್ತದೆ" ಎಂದು ನಮ್ರತಾ ಗೌಡ ಹೇಳಿದ್ದಾರೆ.
ನಾನು ಅಪ್ಪು ಅವರ ಜೊತೆ ಮಿಲನದಲ್ಲಿ ನಟಿಸಿದ್ದೇನೆ
"ನಾವು ಇಂದುನ ಬೇರೆಯವರಿಗೆ ಸಲಹೆ ಕೊಡ್ತಿವೋ, ಅದನ್ನು ಅಂದೇ ತಮ್ಮ ಸಿನಿಮಾಗಳ ಮೂಲಕ ಅಪ್ಪು ಅವರು ಕೊಟ್ಟಿದ್ದರು. ಇಂತಹ ಸಿನಿಮಾಗಳನ್ನು ಮಾಡಿರುವುದಕ್ಕೆ ನಾನು ಅವರ ಫ್ಯಾನ್ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. 21 ವರ್ಷ ಆದರೂ ಈ ಸಿನಿಮಾಗಳ ಜನಪ್ರಿಯತೆ ಕಮ್ಮಿ ಆಗಿಲ್ಲ. ಅಂದಹಾಗೆ, ನಾನು ಮಿಲನ ಸಿನಿಮಾದಲ್ಲಿ ನಟಿಸಿದ್ದೇನೆ. ಆ ಸಿನಿಮಾ ರಿಲೀಸ್ ಆಗಲಿ ಎಂದು ಕಾಯುತ್ತಿದ್ದೇನೆ" ಅಂತ ಹೇಳಿದ್ದಾರೆ ನಮ್ರತಾ ಗೌಡ.
ನಮ್ರತಾ ಗೌಡ ಪ್ರತಿಕ್ರಿಯೆ
ʻಬಿಗ್ ಬಾಸ್ʼ ಖ್ಯಾತಿಯ ಪವಿ ಪೂವಪ್ಪ ಏನಂದ್ರು ನೋಡಿ
"ಈ ಸಿನಿಮಾ ಬಂದು 21 ವರ್ಷ ಆಯ್ತಾ ಅಂತ ನೆನೆಸಿಕೊಂಡರೆ ಅಚ್ಚರಿ ಆಗತ್ತೆ. ನಾನು ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿರಲಿಲ್ಲ. ಈಗ ನೋಡುವುದಕ್ಕೆ ಅವಕಾಶ ಸಿಕ್ಕಿದೆ" ಎಂದು ಪವಿ ಪೂವಪ್ಪ ಹೇಳಿದ್ದಾರೆ. ಹಾಗೇ, ನಟಿ ಸುಕೃತಾ ನಾಗ್ ಅವರು, "ನನಗೆ ಈ ಸಿನಿಮಾದ ಸಾಂಗ್ಸ್ ತುಂಬಾ ಇಷ್ಟ. ಪುನೀತ್ ಮತ್ತು ರಮ್ಯಾ ಅವರ ಕಾಂಬಿನೇಷನ್ ನೋಡುವುದೇ ಹಬ್ಬ" ಎಂದು ಹೇಳಿದ್ದಾರೆ.