Puneeth Rajkumar: ಅಪ್ಪು ನಟಿಸಬೇಕಿದ್ದ ದ್ವಿತ್ವ ಸಿನಿಮಾ ಸ್ಕ್ರಿಪ್ಟ್ ಏನಾಯ್ತು? ನಿರ್ದೇಶಕ ಪವನ್ ಕುಮಾರ್ ಹೇಳಿದ್ದೇನು?
Puneeth Rajkumar Dvitva Movie: ಪುನೀತ್ ರಾಜ್‌ಕುಮಾರ್‌ಗೆ ಅವರೊಂದಿಗೆ ಒಂದು ಸಿನಿಮಾ ಮಾಡಬೇಕು ಎಂಬುದು ನಿರ್ದೇಶಕ ಪವನ್ ಕುಮಾರ್ ಅವರ ಮನದಾಸೆಯಾಗಿತ್ತು. ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ಸಿದ್ಧ ಪಡಿಸಿ ಅದಕ್ಕೆ ದ್ವಿತ್ವ ಎಂಬ ಹೆಸರಿಟ್ಟರು. ಥೈಲ್ಯಾಂಡ್‌ನಲ್ಲಿ ಇದ್ದ ವೇಳೆ ಈ ಕಥೆಯನ್ನು ಮಾಡಿದ್ದು, ಅಲ್ಲಿಂದಲೇ ಸ್ಕ್ರಿಪ್ಟ್ ಅನ್ನು ಅಪ್ಪುಗೆ ಕಳಿಸಿದ್ದರಂತೆ. ಅದನ್ನು ನೋಡಿ ಅಪ್ಪು ಕೂಡ ಬಹಳ ಇಷ್ಟಪಟ್ಟರಂತೆ. ಆದರೆ ಅಷ್ಟರಲ್ಲಿ ಅಪ್ಪು ಅಕಾಲಿಕ ಮರಣ ಹೊಂದಿದ್ದರು. ಹಾಗಾದರೆ ಈ ಸಿನಿಮಾ ಸ್ಕ್ರಿಪ್ಟ್ ಏನಾಯ್ತು? ಎಂಬ ಅನೇಕ ಪ್ರಶ್ನೆಗೆ ಸ್ವತಃ ಪವನ್ ಅವರೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್

ನವದೆಹಲಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಹಲವಾರು ವಿಭಿನ್ನ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಮೆಚ್ಚಿದ ಸ್ಟಾರ್ ಆಗಿದ್ದಾರೆ. 'ಅಪ್ಪು', 'ಅಭಿ', 'ಮೌರ್ಯ', 'ಆಕಾಶ್', 'ನಮ್ಮ ಬಸವ', 'ಮಿಲನ', 'ರಾಮ್', 'ಜಾಕಿ' ಹೀಗೆ ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದ ಪುನೀತ್ ರಾಜ್ ಕುಮಾರ್ ಅವರು ತಮ್ಮ ಅದ್ಭುತ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲವಾದರೂ ಅವರು ನಟಿಸಿದ್ದ ಸಿನಿಮಾ ಮೂಲಕ ಅಭಿಮಾನಿಗಳ ಮನದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ.
ಬಹುಶಃ ಅವರು ಬದುಕಿದ್ದರೆ ಇನ್ನಷ್ಟು ವಿಭಿನ್ನತರನಾಗಿ ಸಿನಿಮಾ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಗಂಧದ ಗುಡಿ ಡಾಕ್ಯೂಮೆಂಟರಿ ಸಿನಿಮಾದ ಬಳಿಕ ಅವರು ಲೂಸಿಯಾ ಪವನ್ ಕುಮಾರ್ ನಿರ್ದೇಶನ್ ದ್ವಿತ್ವ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಈ ಹಿಂದೆ ಪುನೀತ್ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡ ಲಾಗಿತ್ತು. ಆದರೆ ನಟ ಪುನೀತ್ ಅಕಾಲಿಕ ಮರಣದಿಂದ ಈ ಸಿನಿಮಾ ಕನಸ್ಸಾಗೆ ಉಳಿಯುವಂತಾಯಿತು. ಆದರೆ ಈ ದ್ವಿತ್ವ ಸಿನಿಮಾ ಈಗಾಗಲೇ ರಿಲೀಸ್ ಆಗಿ ಹೋಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಚಾರ ಹರಿದಾಡಿದ್ದು ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಅವರೊಂದಿಗೆ ಒಂದು ಸಿನಿಮಾ ಮಾಡಬೇಕು ಎಂಬುದು ನಿರ್ದೇಶಕ ಪವನ್ ಕುಮಾರ್ ಅವರ ಮನದಾಸೆಯಾಗಿತ್ತು. ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ಸಿದ್ಧ ಪಡಿಸಿ ಅದಕ್ಕೆ ದ್ವಿತ್ವ ಎಂಬ ಹೆಸರಿಟ್ಟರು. ಥೈಲ್ಯಾಂಡ್‌ನಲ್ಲಿ ಇದ್ದ ವೇಳೆ ಈ ಕಥೆಯನ್ನು ಮಾಡಿದ್ದು, ಅಲ್ಲಿಂದಲೇ ಸ್ಕ್ರಿಪ್ಟ್ ಅನ್ನು ಅಪ್ಪುಗೆ ಕಳಿಸಿದ್ದರಂತೆ. ಅದನ್ನು ನೋಡಿ ಅಪ್ಪು ಕೂಡ ಬಹಳ ಇಷ್ಟಪಟ್ಟರಂತೆ. ಆದರೆ ಅಷ್ಟರಲ್ಲಿ ಅಪ್ಪು ಅಕಾಲಿಕ ಮರಣ ಹೊಂದಿದ್ದರು. ಹಾಗಾದರೆ ಈ ಸಿನಿಮಾ ಸ್ಕ್ರಿಪ್ಟ್ ಏನಾಯ್ತು? ಎಂಬ ಅನೇಕ ಪ್ರಶ್ನೆಗೆ ಸ್ವತಃ ಪವನ್ ಅವರೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Coolie Movie: ರಿಲೀಸ್‌ಗೂ ಮುನ್ನ ರಜನಿಕಾಂತ್ ನಟನೆಯ ಕೂಲಿಗೆ ಭರ್ಜರಿ ಕಲೆಕ್ಷನ್!
ಇತ್ತೀಚೆಗಷ್ಟೆ ದ್ವಿತ್ವ ಹೆಸರಿನ ಶಾರ್ಟ್ ಫಿಲಂ ಒಂದು ರಿಲೀಸ್ ಆಗಿದ್ದು ಅದನ್ನು ಕಂಡು ಅಭಿ ಮಾನಿಗಳು ಪುನೀತ್ ಸಿನಿಮಾದ ಕಥೆ ಎಂದೆ ಅಂದುಕೊಳ್ಳುತ್ತಿದ್ದಾರೆ. ಹೀಗಾಗಿ ನಟ, ನಿರ್ದೇಶಕ ಪವನ್ ಕುಮಾರ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಟೈಟಲ್ ಇನ್ನೂ ನನ್ನ ಬಳಿಯೇ ಇದೆ. ಅದೇ ಹೆಸರನ್ನು ಶಾರ್ಟ್ ಫಿಲಂ ಮಾಡಿದ್ದರು ಎಂದು ತಿಳಿಯಿತು ಆದರೆ ಇದಕ್ಕೆ ನನ್ನ ತಕರಾರು ಇಲ್ಲ. ದ್ವಿತ್ವ ಇನ್ನೂ ಬಂದಿಲ್ಲ. ಸದ್ಯಕ್ಕಂತೂ ಈ ಸಿನಿಮಾ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ. ಮುಂದಕ್ಕೆ ಏನಾಗುತ್ತೋ ನೋಡೋಣ ಎಂದು ಅವರು ಹೇಳಿದರು.
ಬಳಿಕ ಮಾತನಾಡಿ, ದ್ವಿತ್ವ ಸಿನಿಮಾ ಬಗ್ಗೆ ನನಗೆ 50 ವರ್ಷ ಆದರೂ ಜನರು ಕೇಳುತ್ತಲೇ ಇರುತ್ತಾರೆ ಅನಿಸುತ್ತದೆ. ಅದು ಬೇರೆ ಫಾರ್ಮೆಟ್‌ನಲ್ಲಿ ಬರಬಹುದೇನೋ? ಈಗಾಗಲೇ ಬಂದಿರಬೇಕು ಎಂದೆಲ್ಲ ಜನರು ಊಹಿಸುತ್ತಿದ್ದಾರೆ. ಆದರೆ ಅದೆಲ್ಲ ಸುಳ್ಳು. ದ್ವಿತ್ವ ಸಿನಿಮಾದ ಸ್ಟೋರಿ ಸ್ಕ್ರೀನ್ ಪ್ಲೇ ಎಲ್ಲಾ ರೆಡಿಯಿದೆ. ಸಾಧ್ಯವಾದರೆ ಅದನ್ನು ಸೀರಿಸ್ ತರಾನೂ ಮಾಡಬಹುದು. ಅದಕ್ಕೂ ಚರ್ಚೆಗಳನ್ನು ಮಾಡಿದ್ದೀವಿ. ಏನಾಗುತ್ತೆ ಎಂದು ನೋಡಬೇಕು ಎಂದು ಅವರು ಹೇಳಿದ್ದಾರೆ.
ದ್ವಿತ್ವ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದ್ದರು. 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಅವರು ದ್ವಿತ್ವಕ್ಕೆ ನಿರ್ದೇಶನ ಮಾಡಬೇಕಿತ್ತು. ಪುನೀತ್ ನಟನೆಯ ಜೇಮ್ಸ್ ಸಿನಿಮಾ ಮುಗಿಯುತ್ತಿದ್ದಂತೆ ದ್ವಿತ್ವ ಸೆಟ್ಟೇರಲು ರೆಡಿಯಾಗಿತ್ತು. ಆದರೆ ಅಪ್ಪು ಅಕಾಲಿಕ ಮರಣವು ಎಲ್ಲ ಯೋಜನೆಯೂ ಬುಡಮೇಲಾಗುವಂತಾಯಿತು. ಎಲ್ಲವೂ ಸರಿಯಾಗಿದ್ದಿದ್ದರೆ, ಒಂದು ಅಪರೂಪದ ಕಾಂಬಿನೇಷನ್‌ನಲ್ಲಿ ವಿಭಿನ್ನ ಕಥೆಯಾದ 'ದ್ವಿತ್ವ' ಸಿನಿಮಾವನ್ನು ಪ್ರೇಕ್ಷಕರು ಕೂಡ ನೋಡಬಹುದಾಗಿತ್ತು.