ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mamata Banerjee: ಸಿನಿಮಾಕ್ಕೆ ಕೂಡ ಹರಕೆ ಹೊತ್ತಿರಲಿಲ್ಲ, ಆದ್ರೆ ಮಮತಾ ಬ್ಯಾನರ್ಜಿ ಸೋಲಬೇಕು; ಒಳ್ಳೆ ಹುಡುಗ ಪ್ರಥಮ್

olle huduga pratham: ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (May 4) ರಂದು ಪ್ರಕಟಗೊಳ್ಳಲಿದೆ. ಸೋಮವಾರ ಸಂಜೆಯ ವೇಳೆಗೆ ಸಂಪೂರ್ಣ ಫಲಿತಾಂಶದ ನಿರೀಕ್ಷೆಯಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗುತ್ತದೆ. ಹೀಗಿರುವಾಗ‌ ಮಮತಾ ಬ್ಯಾನರ್ಜಿ ಸೋಲಲಿ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 4 ವಿಜೇತ, ನಟ ಒಳ್ಳೆ ಹುಡುಗ ಪ್ರಥಮ್ ಬಯಸುತ್ತಿದ್ದಾರೆ.

ಒಳ್ಳೆ ಹುಡಗ ಪ್ರಥಮ್‌

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (May 4) ರಂದು ಪ್ರಕಟಗೊಳ್ಳಲಿದೆ. ಸೋಮವಾರ ಸಂಜೆಯ ವೇಳೆಗೆ ಸಂಪೂರ್ಣ ಫಲಿತಾಂಶದ ನಿರೀಕ್ಷೆಯಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗುತ್ತದೆ. ಹೀಗಿರುವಾಗ‌ ಮಮತಾ ಬ್ಯಾನರ್ಜಿ ಸೋಲಲಿ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 4 ವಿಜೇತ, ನಟ ಒಳ್ಳೆ ಹುಡುಗ ಪ್ರಥಮ್ ಬಯಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏನಾದ್ರೂ ಮಮತಾ ಬ್ಯಾನರ್ಜಿ ಪಕ್ಷ ಸೋತ್ರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ. ಸಮಾಜದಲ್ಲಿ ನನ್ನ ಗುರುತಿಗೆ ಸಿಗುವವರು ಕಷ್ಟದಲ್ಲಿದ್ದವರ ಶಕ್ತಿಮೀರಿ ಜೊತೆ ನಿಲ್ತೀನಿ ಅಂತ ಈಶ್ವರನಲ್ಲಿ ಪ್ರಾರ್ಥಿಸುವೆ ಎಂದು ನೇರವಾಗಿ ಬರೆದುಕೊಂಡಿದ್ದಾರೆ ಪ್ರಥಮ್‌.

ಪ್ರಥಮ್‌ ಪೋಸ್ಟ್‌ ಏನು?

ನನಗೆ ಇಂತಹ ಮಕ್ಕಳಾಗ್ಬೇಕು, ನನ್ನ ಸಿನಿಮಾ ಗೆಲ್ಲಬೇಕು ಅಂತ ಯಾವತ್ತು ಹರಕೆ ಹೊತ್ತವನಲ್ಲ!ಪಶ್ಚಿಮಬಂಗಾಳ ದಲ್ಲಿ ಏನಾದ್ರೂ ಮಮತಾಬ್ಯಾನರ್ಜಿ ಪಕ್ಷ ಸೋತ್ರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ! ಸಮಾಜದಲ್ಲಿ ನನ್ನ ಗುರುತಿಗೆ ಸಿಗುವವರು ಕಷ್ಟದಲ್ಲಿದ್ದವರ ಶಕ್ತಿಮೀರಿ ಜೊತೆ ನಿಲ್ತೀನಿ ಅಂತ ಈಶ್ವರನಲ್ಲಿ ಪ್ರಾರ್ಥಿಸುವೆ!

ನಾನು ರಾಜಕೀಯದಿಂದ ದೂರ!

ನನ್ನ ದೇಶ ಬಾಂಗ್ಲಾ ವಲಸಿಗರಿಂದ ಮುಕ್ತರಾಗಬೇಕು!

ನನ್ನ ದೇಶ ಚೆನ್ನಾಗಿರಬೇಕು!

ಇದೊಂದೇ ಈಶ್ವರನಲ್ಲಿ ಬೇಡಿಕೆ!

ಈ ಬಾರಿ west Bengal ಮಮತಾ ಬ್ಯಾನರ್ಜಿ ಪಕ್ಷ ಸೋಲಲಿ..! ನಮ್ಮವರು ಚೆನ್ನಾಗಿರ್ಲಿ...!

ಖಂಡಿತಾ ಕಷ್ಟದಲ್ಲಿದ್ದವರ ಶಕ್ತಿ ಮೀರಿ ಸಹಾಯ ಮಾಡ್ತೀನಿ! ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Katrina Kaif: ತಾಯಿಯಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕತ್ರಿನಾ!



ರಾಜಕೀಯ ಕುತೂಹಲದ ಕೇಂದ್ರ ಪಶ್ಚಿಮ ಬಂಗಾಳದ 294 ವಿಧಾನಸಭೆಗಳಿಗೆ ಏ.23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಒಟ್ಟು 2,926 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಹಂತದ ಚುನಾವಣೆಗೆ 152 ಸ್ಥಾನಗಳಲ್ಲಿ 1,487 ಹಾಗೂ ಎರಡನೇ ಹಂತದ ಚುನಾವಣೆಗೆ 142 ಕ್ಷೇತ್ರಗಳಲ್ಲಿ ಒಟ್ಟು 1,448 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 93.19% ಹಾಗೂ ಎರಡನೇ ಹಂತದಲ್ಲಿ 92.47% ಮತದಾನ ನಡೆಯಿತು. ಈ ರಾಜ್ಯ ಎಸ್‌ಐಆರ್‌ ಬಳಿಕ ಚುನಾವಣೆ ಎದುರಿಸಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 148 ಸೀಟ್‌ಗಳ ಬಹುಮತ ಬೇಕಿತ್ತು. ಈ ಬಾರಿ 385 ಮಹಿಳೆಯರು ಸ್ಪರ್ಧಿಸಿದ್ದರು.

ಇದನ್ನೂ ಓದಿ: Trisha Krishnan: ತಿರುಪತಿ ಮೊರೆ ಹೋದ ನಟಿ ತ್ರಿಶಾ; ವಿಜಯ್ ಗೆಲುವಿಗೆ ಪ್ರಾರ್ಥಿಸಿದ್ರಾ?

ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಬಲ ಪೈಪೋಟಿ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದ್ದವು. ರಾಜ್ಯದಲ್ಲಿ ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ನಿಯೋಜಿಸಿತ್ತು.

Yashaswi Devadiga

View all posts by this author