ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು; ರಿಸಲ್ಟ್‌ ಎಲ್ಲಿ, ಹೇಗೆ ನೋಡೋದು?

ಕೇರಳಂ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿಯ ವಿಧಾನ ಸಭಾ ಚುನಾವಣಾ ಫಲಿತಾಂಶ ಇಂದು ಘೋಷಣೆಯಾಗಲಿದೆ. ಮತ ಎಣಿಕೆ ಕಾರ್ಯ ಬೆಳಗ್ಗೆಯೇ ಆರಂಭಗೊಳ್ಳಲಿದೆ. 4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಯಾವಾಗ, ಎಲ್ಲಿ ಆರಂಭವಾಗುತ್ತದೆ, ಫಲಿತಾಂಶ ಎಲ್ಲಿ ವೀಕ್ಷಿಸಬೇಕು ಎಂಬುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಇಂದು ಪಂಚ ರಾಜ್ಯಗಳ ಮತ ಎಣಿಕೆ

ಸಂಗ್ರಹ ಚಿತ್ರ -

ದೆಹಲಿ, ಮೇ 4: ಇತ್ತೀಚೆಗೆ ನಡೆದ 4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ ವಿಧಾನ ಸಭಾ ಚುನಾವಣೆಯ ಮತ ಎಣಿಕೆ (Assembly election results) ಕಾರ್ಯ ಸೋಮವಾರ ಬೆಳಗ್ಗೆ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ. ಕೇರಳಂ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿಯ ವಿಧಾನ ಸಭಾ ಚುನಾವಣೆ (Assembly election) 2026ರ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಖರ ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗದ (Election Commission of India) ಮೇಲ್ವಿಚಾರಣೆಯಲ್ಲಿ ಮತ ಎಣಿಕೆ ಕಾರ್ಯಗಳನ್ನು ನಡೆಸಲಾಗುತ್ತದೆ.

ನಿರ್ದಿಷ್ಟ ಪಡಿಸಿದ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ. ಇದಾದ ಮೇಲೆ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಫಲಿತಾಂಶವನ್ನು ಎಣಿಕೆ ಮಾಡಲಾಗುತ್ತದೆ.

ಬಿಜೆಪಿ ಸಚಿವರ ರ‍್ಯಾಲಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಮುಂಬೈ ಮಹಿಳೆ ಯು ಟರ್ನ್; ಈಗ ಹೇಳಿದ್ದೇನು?

ಪಶ್ಚಿಮ ಬಂಗಾಳದ ಒಂದು ವಿಧಾನ ಸಭಾ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳ ಫಲಿತಾಂಶ ಇಂದು ಹೊರಬೀಳಲಿದೆ. ಒಟ್ಟು 294 ವಿಧಾನ ಸಭಾ ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಭಾರಿ ಭದ್ರತೆಯೊಂದಿಗೆ 77 ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣಾ ಅಪರಾಧಗಳ ಕಾರಣದಿಂದ ದಕ್ಷಿಣ 24 ಪರಗಣ ಜಿಲ್ಲೆಯ ಸಂಪೂರ್ಣ ಫಾಲ್ಟಾ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗವು ರದ್ದುಗೊಳಿಸಿದೆ. ಈ ಕ್ಷೇತ್ರಕ್ಕೆ ಮೇ 21ರಂದು ಮತದಾನ ನಡೆದು ಮೇ 24ರಂದು ಮತ ಎಣಿಕೆ ಕಾರ್ಯ ನಡೆಸುವುದಾಗಿ ಘೋಷಿಸಿದೆ.

ಕೋಲ್ಕತ್ತಾದಲ್ಲಿ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಬ್ಯಾಲಿಗಂಜ್ ಸರ್ಕಾರಿ ಪ್ರೌಢಶಾಲೆ, ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ವಿಶ್ವವಿದ್ಯಾಲಯ, ಶಖಾವತ್ ಸ್ಮಾರಕ ಶಾಲೆ, ನೇತಾಜಿ ಒಳಾಂಗಣ ಕ್ರೀಡಾಂಗಣ ಮತ್ತು ಸೇಂಟ್ ಥಾಮಸ್ ಬಾಲಕರ ಶಾಲೆಯಲ್ಲಿ ನಡೆಸಲಾಗುತ್ತದೆ.

ಮಮತಾ ಬ್ಯಾನರ್ಜಿ ಅವರ ತವರು, ಹಿರಿಯ ಬಿಜೆಪಿ ನಾಯಕಿ ಸುವೇಂದು ಅಧಿಕಾರಿ ಅವರ ಕ್ಷೇತ್ರ ಭಬಾನಿಪುರ ಸ್ಥಾನದ ಮತ ಎಣಿಕೆಯು ಸಖಾವತ್ ಸ್ಮಾರಕ ಕೇಂದ್ರದಲ್ಲಿ ನಡೆಯಲಿದೆ.

ಅಸ್ಸಾಂನ ಎಲ್ಲಾ 126 ಸ್ಥಾನಗಳಿಗೆ ಎಣಿಕೆಯು ಬಿಗಿ ಭದ್ರತೆಯ ನಡುವೆ ಎಲ್ಲ 35 ಜಿಲ್ಲೆಗಳ 40 ಎಣಿಕೆ ಕೇಂದ್ರಗಳಲ್ಲಿ ನಡೆಯಲಿದೆ. 59 ಮಹಿಳೆಯರು ಸೇರಿದಂತೆ 722 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ನಿರ್ಧರಿಸಲಾಗುವುದು. ತಮಿಳುನಾಡಿನಲ್ಲಿ ಒಟ್ಟು 10,545 ಎಣಿಕೆ ಸಿಬ್ಬಂದಿಯನ್ನು ಮತ ಎಣಿಕೆ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಪುದುಚೇರಿ ಮತ್ತು ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದ್ದು, ಬೆಳಗ್ಗಿನಿಂದಲೇ ಮತ ಎಣಿಕೆ ಆರಂಭವಾಗಲಿದೆ.

ಕೇರಳಂನಲ್ಲಿ ದೇಶದ ಕೊನೆಯ ಎಡರಂಗ ಸರ್ಕಾರವೂ ಪತನ? ನಾಳೆ ಹೊರ ಬೀಳಲಿದೆ ಫಲಿತಾಂಶ

ಫಲಿತಾಂಶ

ಪಂಚ ರಾಜ್ಯಗಳ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ eci.gov.inನಲ್ಲಿ ನೋಡಬಹುದು. ಇನ್ನು ವಿವರವಾದ ವರದಿ ಮತ್ತು ವಿಶ್ಲೇಷಣೆಯನ್ನು ʼವಿಶ್ವವಾಣಿ ಟಿವಿʼ ಯುಟ್ಯೂಬ್‌ ಚಾನೆಲ್‌ ನಲ್ಲಿ ವೀಕ್ಷಿಸಬಹುದಾಗಿದೆ.