ಕಿಚ್ಚ ಸುದೀಪ್ ಸಿನಿ ಜರ್ನಿಯ (Cini journey) 30 ವರ್ಷದ ಸಂಭ್ರಮ ಜೋರಾಗಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಗಂಗೂಲಿ, ಮೋಹನ್ ಲಾಲ್, ಸಲ್ಮಾನ್ ಸೇರಿದಂತೆ ಅನೇಕ ಖ್ಯಾತ ನಟರು ವಿಶ್ ಮಾಡಿದ್ದಾರೆ. ತಾಯವ್ವ ಚಿತ್ರದಿಂದಲೇ ಸುದೀಪ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಸುದೀಪ್ ಸಿನಿಮಾ (Sudeep Movie) ಪಯಣ ಸಾಗ್ತಾನೇ ಇದೆ. ಈ 30 ವರ್ಷದಲ್ಲಿ ಸುದೀಪ್ ಜನರ ಪ್ರೀತಿಯ ಕಿಚ್ಚ ಆಗಿದ್ದಾರೆ.
ಸೌರವ್ ಗಂಗೂಲಿ, ಮೋಹನ್ಲಾಲ್, ಸಲ್ಮಾನ್ ಖಾನ್ ಅವರು ವಿಶ್ ಮಾಡಿದ್ದಾರೆ. ಈ ಸರ್ಪ್ರೈಸ್ ನೋಡಿ ಸುದೀಪ್ ಅವರು ಖುಷಿ ಆಗಿದ್ದಾರೆ. ಸುದೀಪ್ ತಂದೆ ಸಂಜೀವ್ ಅವರು ಮಾತನಾಡಿದ ಆಡಿಯೋ ಕ್ಲಿಪ್ ಪ್ಲೇ ಮಾಡಲಾಗಿದೆ. ಅದನ್ನು ಕೇಳಿಸಿಕೊಂಡ ಸುದೀಪ್ ಅವರು ಕಣ್ಣೀರು ಸುರಿಸುತ್ತ, ‘ಐ ಲವ್ ಯೂ ಅಪ್ಪ’ ಎಂದಿದ್ದಾರೆ.
ಸದ್ಯ ಚಿತ್ರರಂಗದಲ್ಲಿ 30 ವರ್ಷಗಳನ್ನ ಪೂರೈಸಿದ್ದಾರೆ. ಈ ಸುದೀರ್ಘ ಜರ್ನಿಯಲ್ಲಿ ತಮ್ಮನ್ನ ತಾವು ಸಿನಿಮಾ ಕ್ಷೇತ್ರ, ಸ್ಪೋರ್ಟ್ಸ್, ಕಿರುತೆರೆ ಧಾರಾವಾಹಿಗಳ ನಿರ್ಮಾಣ, ‘ಬಿಗ್ ಬಾಸ್’ ಶೋ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 13: 5 ಜನ 'ವೈಲ್ಡ್ ಕಾರ್ಡ್' ಎಂಟ್ರಿ? ಏನಿದು ಟ್ವಿಸ್ಟ್?
: ಸುದೀಪ್ ಅವರು 1996ರ ಸುಮಾರಿಗೆ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರು. 'ತಾಯವ್ವ' (1997) ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. 'ಪ್ರತ್ಯರ್ಥ' ಚಿತ್ರದ ಮೂಲಕ ಗಮನ ಸೆಳೆದರು. ಬಳಿಕ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' (2000) ಚಿತ್ರದಲ್ಲಿ ನಾಯಕನಾಗಿ ನಟಿಸಿ ಭಾರಿ ಮೆಚ್ಚುಗೆ ಪಡೆದರು. 2001ರಲ್ಲಿ ತೆರೆಕಂಡ 'ಹುಚ್ಚ' ಸಿನಿಮಾ ಸುದೀಪ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಈ ಚಿತ್ರದ ಯಶಸ್ಸಿನ ಬಳಿಕ ಅವರನ್ನು ಎಲ್ಲರೂ ಪ್ರೀತಿಯಿಂದ 'ಕಿಚ್ಚ' ಸುದೀಪ್ ಎಂದು ಕರೆಯಲಾರಂಭಿಸಿದರು.
: 'ನಂದಿ', 'ಸ್ವಾತಿ ಮುತ್ತು', 'ಮೈ ಆಟೋಗ್ರಾಫ್', 'ವಿಷ್ಣುಸೇನ', 'ಹುಚ್ಚ', 'ಮಾಣಿಕ್ಯ', 'ವಿಕ್ರಾಂತ್ ರೋಣ' ಮುಂತಾದ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. : ನಟನೆಯಷ್ಟೇ ಅಲ್ಲದೆ, 'ಮೈ ಆಟೋಗ್ರಾಫ್', 'ನಂ. 73 ಶಾಂತಿನಿವಾಸ', 'ಮಾಣಿಕ್ಯ' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಈ ವಾರ ಈ ಇಬ್ಬರು ಎಲಿಮಿನೇಟ್; ಎಂಟ್ರಿ ಕೊಡೋ ಆ ಮೂವರು ಯಾರು?
ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಾದ 'ಈಗ', 'ಬಿಲ್ಲಾ ರಂಗು ಬಾಷಾ', 'ದಬಾಂಗ್ 3' ಸಿನಿಮಾಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.