Bigg Boss Kannada 13: ಈ ವಾರ ಈ ಇಬ್ಬರು ಎಲಿಮಿನೇಟ್; ಎಂಟ್ರಿ ಕೊಡೋ ಆ ಮೂವರು ಯಾರು?
Bigg Boss Kannada 13: ಕಿಚ್ಚನ ಪಂಚಾಯ್ತಿಯಲ್ಲಿ ಮೊದಲಿಗೆ ಅನೌನ್ಸ್ ಮಾಡಿದ್ದೇ ಎಲಿಮಿನೇಶನ್ ಬಗ್ಗೆ. ಶನಿವಾರದ ಎಪಿಸೋಡಿನಲ್ಲೂ ಸಹ ಒಟ್ಟಿಗೆ ಇಬ್ಬರನ್ನು ಸುದೀಪ್ ಅವರು ಎವಿಕ್ಟ್ ಮಾಡಿದರು. ಮಂಜ, ಲಿಖಿತ್, ಯಶಸ್ ಅವರುಗಳು ಸೇವ್ ಆದರು. ಆದರೆ ಅವಿನಾಶ್ ಅವರು ಹೊಡೆದ ತೆಂಗಿನ ಕಾಯಿಯಲ್ಲಿ ಏನೂ ಇರಲಿಲ್ಲ. ಆ ಮೂಲಕ ಅವರು ಎವಿಕ್ಟ್ ಆದಂತಾಯ್ತು. ವೈಷ್ಣವಿ ಹಾಕಿದ ದ್ರಾವಣದಿಂದ ನೊರೆ ಬಂತು. ಅಲ್ಲಿಗೆ ಅವರು ಎವಿಕ್ಟ್ ಆದರು ಎಂದಾಯ್ತು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕಿಚ್ಚನ ಪಂಚಾಯ್ತಿಯಲ್ಲಿ (Sudeep) ಮೊದಲಿಗೆ ಅನೌನ್ಸ್ ಮಾಡಿದ್ದೇ ಎಲಿಮಿನೇಶನ್ (Elimination) ಬಗ್ಗೆ. ಶನಿವಾರದ ಎಪಿಸೋಡಿನಲ್ಲೂ ಸಹ ಒಟ್ಟಿಗೆ ಇಬ್ಬರನ್ನು ಸುದೀಪ್ ಅವರು ಎವಿಕ್ಟ್ ಮಾಡಿದರು. ಈ ವಾರ ಸಂಗೀತಾ ಬಿಟ್ಟು ಇಡೀ ಮನೆಯವರೇ ನಾಮಿನೇಟ್ (Nominate) ಆಗಿತ್ತು ಈ ಎವಿಕ್ಷನ್ ಮತಗಳ ಆಧಾರದಲ್ಲಿ ನಡೆಯಿತು.
ತೆಂಗಿನ ಕಾಯಿ ಒಳಗೆ ಕಣ್ಣಿನ ಆಕಾರ ದೊರೆತವರು ಸೇವ್ ಎನ್ನಲಾಯ್ತು. ಮಂಜ, ಲಿಖಿತ್, ಯಶಸ್ ಅವರುಗಳು ಸೇವ್ ಆದರು. ಆದರೆ ಅವಿನಾಶ್ ಅವರು ಹೊಡೆದ ತೆಂಗಿನ ಕಾಯಿಯಲ್ಲಿ ಏನೂ ಇರಲಿಲ್ಲ. ಆ ಮೂಲಕ ಅವರು ಎವಿಕ್ಟ್ ಆದರು. ಆಸಿಯಾ, ಧನುಶ್ ಮತ್ತು ವೈಷ್ಣವಿ ಅವರುಗಳು ಉಳಿದುಕೊಂಡರು. ಟಾಸ್ಕ್ ರೂಮಿನಲ್ಲಿ ಮೂವರನ್ನೂ ಸೇರಿಸಿ, ಅವರಿಗೆ ವಿಶೇಷ ದ್ರಾವಣ ನೀಡಲಾಯ್ತು. ಆ ದ್ರಾವಣನವನ್ನು ಹುತ್ತದ ಮಾದರಿಯಲ್ಲಿ ರಚನೆಯಲ್ಲಿ ಹಾಕಬೇಕಿತ್ತು. ವೈಷ್ಣವಿ ಹಾಕಿದ ದ್ರಾವಣದಿಂದ ನೊರೆ ಬಂತು. ಅಲ್ಲಿಗೆ ಅವರು ಎವಿಕ್ಟ್ ಆದರು ಎಂದಾಯ್ತು.
ಆದರೆ ತಾಂಡವ್ ರಾಮ್ ಈಗ ಮನೆಯೊಳಗೆ ಬರೋದು ಕನ್‌ಫರ್ಮ್ ಮಾಡಿದ್ದಾರೆ ಕಿಚ್ಚ. ಅಷ್ಟೇ ಅಲ್ಲ ಮನೆಗೆ ಮೂವರು ಎಂಟ್ರಿ ಕೊಡಲಿದ್ದಾರೆ ಎಂದೂ ಅನೌನ್ಸ್ ಮಾಡಿದ್ದಾರೆ. ಅದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ವೈಲ್ಡ್ ಕಾರ್ಡ್ ಎಂಟ್ರಿ!
ವೈರಲ್ ವೈಲ್ಡ್ ಕಾರ್ಡ್ ಎಂಟ್ರಿಯ ಪಟ್ಟಿಯಲ್ಲಿ ಮೂವರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಇಬ್ಬರು ಹೊಸ ಮುಖಗಳ ಹೆಸರುಗಳು ಕೇಳಿಬರುತ್ತಿವೆ. ತೇಜಸ್ವಿನಿ ಪ್ರಕಾಶ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ. ಸೀಸನ್ 7ರ ಸ್ಪರ್ಧಿ ಹಾಗೂ ಖ್ಯಾತ ಡ್ಯಾನ್ಸರ್ ಕಿಶನ್ ಬಿಳಗಲಿ ಅವರ ಹೆಸರು ಕೂಡ ವೈಲ್ಡ್ ಕಾರ್ಡ್ ಪಟ್ಟಿಯಲ್ಲಿ ಇದೆ ಎನ್ನಲಾಗುತ್ತಿದೆ. ಹಾಸ್ಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾಗಿರುವ ಕಾಮಿಡಿ ಕಲಾವಿದ ಪ್ರಶಾಂತ್ ಗೌಡ ಅವರ ಹೆಸರೂ ಕೇಳಿಬರುತ್ತಿದೆ. ಕನ್ನಡದ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಹಿರಿಯ ನಟಿ ವಿಜಯಲಕ್ಷ್ಮಿ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ನಟನೆಯ ʻಪ್ರೇಮಕಾವ್ಯʼ ಧಾರಾವಾಹಿ ಮುಕ್ತಾಯಗೊಂಡಿದ್ದು, ಈ ಬೆನ್ನಲ್ಲೇ ʻಬಿಗ್ ಬಾಸ್ʼಗೆ ಎಂಟ್ರಿ ಕೊಟ್ಟಿದ್ದರು.
ಇತ್ತೀಚೆಗೆ ವೈಷ್ಣವಿ ಅವರ ವಿಡಿಯೋವೊಂದು ವೈರಲ್ ಆಗಿತ್ತು. ಈವೆಂಟ್‌ವೊಂದರಲ್ಲಿ ಮಾಡ್ರನ್ ಆಗಿ ಎಂಟ್ರಿ ಕೊಟ್ಟಿದ್ದರು ವೈಷ್ಣವಿ. ಅದನ್ನ "ಬೇರೆ ಆಂಗಲ್‌ನಿಂದ ವಿಡಿಯೋ ಮಾಡಿ ವೈರಲ್ ಮಾಡಲಾಗಿತ್ತು. ಅದಕ್ಕೆ ಕೆಟ್ಟ ಕಾಮೆಂಟ್ಸ್ ಬಂತು. ಎರಡು ದಿನ ಮನೆಯಿಂದ ಹೊರ ಬರೋದಕ್ಕೆ ಆಗಲಿಲ್ಲ" ಎಂದು ʻಬಿಗ್ ಬಾಸ್ʼ ಸ್ಟೇಜ್‌ನಲ್ಲಿ ನೋವು ತೋಡಿಕೊಂಡಿದ್ದರು.
ನನಗೆ ಮದುವೆಯಾಗಲು ಹುಡುಗ ಸಿಕ್ಕರೆ ಮದ್ವೆಯಾಗುತ್ತೇನೆ ಎಂದಿರೋ ವೈಷ್ಣವಿ, ತಮಗೆ ಎಂಥ ಹುಡುಗ ಬೇಕು ಎನ್ನೋದನ್ನು ಹೇಳಿದ್ದರು. ನನ್ನನ್ನು ಮಹಾರಾಣಿ ಥರ ನೋಡಿಕೊಳ್ಳಬೇಕು. ಹೃದಯದಲ್ಲಿ ಶ್ರೀಮಂತ ಆಗಿರಬೇಕು. ಗಂಡಸು ಎನ್ನುವ ಅಹಂಕಾರ ಇರಬಾರದು ಎಂದಿದ್ದರು.
ಇದನ್ನೂ ಓದಿ: Bigg Boss Kannada 13: ಕಿರಣ್ ಚೀಟಿಂಗ್ ಆಟ; ಸತ್ಯ ಬಿಚ್ಚಿಟ್ಟು ಬೆಂಡೆತ್ತಿದ ಸುದೀಪ್
ನಟಿ ವೈಷ್ಣವಿ ಅವರು ʻಬಿಗ್ ಬಾಸ್ʼ ವೇದಿಕೆಯಲ್ಲಿ ತಮ್ಮ ಜೀವನದ ಕಷ್ಟದ ದಿನಗಳನ್ನ ನೆನೆಸಿಕೊಂಡಿದ್ದು, “ನನ್ನ ಬಾಲ್ಯ, ಹಿನ್ನೆಲೆ ಬಗ್ಗೆ ಹೇಳಬೇಕೆಂದರೆ ನಾನು ನಮ್ಮ ಪೋಷಕರಿಗೆ ಒಬ್ಬಳೇ ಮಗಳು. ನಮ್ಮ ಮನೆಯಲ್ಲಿ ನಾನು, ಅಮ್ಮ ಹಾಗೂ ಅಜ್ಜಿ ಮಾತ್ರ ಇದ್ದೇವೆ. ನನ್ನ ಅಪ್ಪ-ಅಮ್ಮ ಡಿವೋರ್ಸ್ ಪಡೆದುಕೊಂಡಿದ್ದಾರೆ. ನಾನು ಇದುವರೆಗೆ ನನ್ನ ತಂದೆಯ ಮುಖವನ್ನೇ ನೋಡಿಲ್ಲ" ಎಂದು ತಮ್ಮ ನೋವು ಹಂಚಿಕೊಂಡಿದ್ದರು.
ವೈಷ್ಣವಿ ಕೌಂಡಿನ್ಯ ತಮ್ಮ 16ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಇಂದು ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ʻಶಾಂತಂ ಪಾಪಂʼ ಸರಣಿಯ ಸಣ್ಣ ಪಾತ್ರದ ಮೂಲಕ ತಮ್ಮ ನಟನಾ ಪ್ರಯಾಣ ಆರಂಭಿಸಿದರು.
ಇದನ್ನೂ ಓದಿ: Bigg Boss Kannada 13: 5 ಜನ 'ವೈಲ್ಡ್ ಕಾರ್ಡ್' ಎಂಟ್ರಿ? ಏನಿದು ಟ್ವಿಸ್ಟ್?
ಇವರ ಪ್ರತಿಭೆಯನ್ನ ಗುರುತಿಸಿದ ವಾಹಿನಿಯು ʻಮಿಥುನ ರಾಶಿʼ ಧಾರಾವಾಹಿಗೆ ನಾಯಕಿಯಾಗಿ ಆಯ್ಕೆ ಮಾಡಿತು.ಕಲರ್ಸ್ ತಮಿಳು, ಮಲಯಾಳಂ, ತೆಲುಗು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.