ಮುಂಬೈ: ಬಾಲಿವುಡ್ (Bollywood) ಸೆಲೆಬ್ರಿಟಿಗಳು ಹುಚ್ಚಾಟಗಳು ಒಂದೆರಡಲ್ಲ. ಏನಾದರೊಂದು ಎಡವಟ್ಟು ಮಾಡುತ್ತಲೇ ಇರುತ್ತಾರೆ. ಆಗಾಗ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿರುತ್ತಾರೆ. ಅವರ ವಿಚಿತ್ರ ಹೇಳಿಕೆಗೆ ಸಾರ್ವಜನಿಕರು ಕೂಡ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರೂ ಕೂಡ ಅವರು ಅಂತಹ ಮಾತನ್ನು ನಿಲ್ಲಿಸುವುದೇ ಇಲ್ಲ. ಇದೀಗ ನಟ ಅಕ್ಷಯ್‌ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ (Twinkle Khanna) ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ, ಈ ವಿಡಿಯೊ ವೈರಲ್ (Viral Video) ಆಗಿದೆ.
ಹೌದು, ಶೃಂಗಾರದ ಬಗ್ಗೆ ಮಾತನಾಡಿ ಟ್ವಿಂಕಲ್ ಈಗ ಗಮನ ಸೆಳೆದಿದ್ದಾರೆ. ಶೋ ಒಂದರಲ್ಲಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹಾಗೂ ನಟಿ ಕಾಜೋಲ್ ಕೂಡ ಟ್ವಿಂಕಲ್ ಜೊತೆ ಸೇರಿ ದೈಹಿಕ ಸಂಬಂಧದ ಬಗ್ಗೆ ಮಾತನಾಡಿರುವ ವಿಡಿಯೊ ವೈರಲ್ ಆಗಿದೆ. ಬೇರೆಯವರೊಂದಿಗೆ ಶಾರೀರಿಕ ಸಂಬಂಧ ತಪ್ಪೇ ಅಲ್ಲ ಎನ್ನುವಂತೆ ಅವರು ಮಾತನಾಡಿರುವುದು ತೀವ್ರ ಚರ್ಚೆ ಹುಟ್ಟು ಹಾಕಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜಕ್ಕೆ ಎಂತಹ ಸಂದೇಶ ನೀಡುತ್ತಿದ್ದೀರಾ ಎಂದು ಹಲವರು ಅಸಮಾಧಾನ ಹೊರಹಾಕುತ್ತಿದ್ದಾರೆ.
ವಿಡಿಯೊ ವೀಕ್ಷಿಸಿ:
ಪ್ರೈಂ ನಲ್ಲಿ 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಎಂಬ ಟಾಕ್ ಶೋ ಪ್ರಸಾರವಾಗುತ್ತದೆ. ಇದರಲ್ಲಿ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹರ್ ಹಾಗೂ ನಟಿ ಜಾನ್ವಿ ಕಪೂರ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಸಾಕಷ್ಟು ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ದೈಹಿಕ ಸಂಬಂಧ (physical relation) ಹಾಗೂ ಭಾವನಾತ್ಮಕ ಸಂಬಂಧ (emotional relation)ದ ಬಗ್ಗೆ ಚರ್ಚೆ ನಡೆದಿದೆ.
ಇದನ್ನೂ ಓದಿ: Viral News: ಗಲ್ಲಾ ಪೆಟ್ಟಿಗೆಗೇ ಕೈ ಇಟ್ಟ ಪೊಲೀಸರು... ಸಾಲದಕ್ಕೆ ಕಪಾಳಮೋಕ್ಷ ಮಾಡಿ ದರ್ಪ- ವಿಡಿಯೊ ನೋಡಿ
ಕಾಜೋಲ್, ಕರಣ್ ಹಾಗೂ ಟ್ವಿಂಕಲ್ ಎಮೋಷನಲ್ ಚೀಟಿಂಗ್ ತಪ್ಪು ಎಂದಿದ್ದಾರೆ. ದೈಹಿಕ ಸಂಬಂಧದ ಮೋಸ (ಫಿಸಿಕಲ್ ಚೀಟಿಂಗ್) ದೊಡ್ಡ ವಿಷಯ ಅಲ್ಲವೇ ಅಲ್ಲ. ಆದದ್ದು ಆಗಿ ಹೋಯ್ತು ಎನ್ನುವಂತೆ ಮಾತನಾಡಿದ್ದಾರೆ. ಆದರೆ ಇದಕ್ಕೆ ಜಾನ್ವಿ ಒಪ್ಪಲಿಲ್ಲ. ಎಮೋಷನಲ್ ಚೀಟಿಂಗ್ ಹಾಗೂ ಫಿಸಿಕಲ್ ಚೀಟಿಂಗ್ ಎರಡೂ ತಪ್ಪು ಎಂದು ನಟಿ ಜಾನ್ವಿ ಹೇಳಿದ್ದಾರೆ.
ಕೆಲವೊಮ್ಮೆ ಚಳಿ ಆಗುತ್ತದೆ ಎಂದು ಕರಣ್ ಹೇಳಿದಾಗ, ಅದಕ್ಕೆ ಬ್ಲಾಂಕೆಟ್ ತಗೋಬಹುದು ಎಂದು ಜಾನ್ವಿ ಪ್ರತಿಕ್ರಿಯಿಸಿದ್ದಾರೆ. 20ರ ಹರೆಯದಲ್ಲಿ ಎಲ್ಲರಿಗೂ ಇದೇ ರೀತಿಯ ಮನೋಭಾವನೆ ಇರುತ್ತದೆ. ಆದರೆ, 50 ವರ್ಷ ವಯಸ್ಸಾದಾಗ ನಾವು ಹೇಳುವುದನ್ನೇ ಜಾನ್ವಿ ಒಪ್ಪುತ್ತಾಳೆ ಎಂದು ಟ್ವಿಂಕಲ್ ಖನ್ನಾ ಹೇಳಿದ್ದಾರೆ.
ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಇನ್ನು ಈ ವೇಳೆ ಕರಣ್ ಜೋಹರ್ ತಮ್ಮ ವೇಯ್ಟ್ ಲಾಸ್ ಬಗ್ಗೆಯೂ ಮಾತನಾಡಿದ್ದಾರೆ. ಇತ್ತೀಚೆಗೆ ಕರಣ್ ದೇಹದ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ. ಅವರು ಸಿಕ್ಕಾಪಟ್ಟೆ ತೆಳ್ಳಗಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಮಾತ್ರೆ, ಇಂಜೆಕ್ಷನ್ ಸಹಾಯದಿಂದ ಹೀಗೆ ದೇಹದ ತೂಕ ಇಳಿಸಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದರು.