ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shiva Rajkumar: ಶಿವಣ್ಣನ ಆರೋಗ್ಯದ ಬಗ್ಗೆ ಅಮಿತಾಭ್​ ಬಚ್ಚನ್‌ಗೆ​ ವಿಶೇಷ ಕಾಳಜಿ

ಬಾಲಿವುಡ್‌ ಮೇರು ನಟ ಅಮಿತಾಭ್ ಬಚ್ಚನ್ ಅವರು ಮೆಸೇಜ್ ಮೂಲಕ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್‌ ಅವರಿಗೆ ಮೇಸೇಜ್ ಮಾಡುವ ಮೂಲಕ ಬಿಗ್‌ ಬಿ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಶಿವಣ್ಣ ಹೇಗಿದ್ದಾರೆ, ಚೇತರಿಸಿಕೊಂಡ್ರಾ ಎಂದು ಮಾಹಿತಿ ಪಡೆಯುತ್ತಲೇ ಇದ್ದಾರೆ. ಇವರ ಜತೆ ಟಾಲಿವುಡ್ ನಟ ಬಾಲಕೃಷ್ಣ ಅವರು ಸಹ ಶಿವಣ್ಣನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಅಮಿತಾಭ್‌ ಬಚ್ಚನ್‌ ಮತ್ತು ಶಿವ ರಾಜ್‌ಕುಮಾರ್‌.

ನವದೆಹಲಿ: ಅನಾರೋಗ್ಯ ಹಿನ್ನೆಲೆಯಲ್ಲಿ ‌ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ಯಾಂಡಲ್‌ವುಡ್ ನಟ ಶಿವರಾಜ್​ಕುಮಾರ್ (Shivarajkumar) ಸದ್ಯ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಶಿವಣ್ಣ ಅವರಿಗೆ ಕ್ಯಾನ್ಸರ್ ಇದೆ ಎಂಬ ವಿಚಾರವೇ ಚಿತ್ರರಂಗ ಸೇರಿದಂತೆ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತ್ತು. ಇದೀಗ ನಟ ಶಿವರಾಜ್ ಕ್ಯಾನ್ಸರ್‌ನಿಂದ ಚೇತರಿಕೆ ಕಂಡಿದ್ದು ‌ ಚಿತ್ರ ರಂಗದ ಅನೇಕ ಗಣ್ಯರು‌ ಯೋಗ ಕ್ಷೇಮ ವಿಚಾರಿಸುತ್ತಿದ್ದಾರೆ. ಇದೀಗ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರು ಶಿವರಾಜ್​ಕುಮಾರ್ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಾರೆ.

ಕನ್ನಡದಲ್ಲಿ ವರನಟ ಡಾ.ರಾಜ್ ಕುಮಾರ್ ಅವರಂತೆ ಬಾಲಿವುಡ್ ನಲ್ಲಿ ಛಾಪು ಮೂಡಿಸಿದ್ದ ಕೀರ್ತಿ ಅಮಿತಾಭ್ ಬಚ್ಚನ್ ಅವರಿಗೆ ಇದೆ. ಇಂತಹ ಮೇರು ನಟನೊಂದಿಗೆ ಶಿವಣ್ಣನ ಒಡನಾಟ ಬಿಂಬಿಸುವಂತಹ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದ ಬಳಿಕ ಅಮಿತಾ ಬಚ್ಚನ್ ಅವರು ಶಿವಣ್ಣನ ಆರೋಗ್ಯದ ಬಗ್ಗೆ ನಿತ್ಯ ಕಾಳಜಿ ವಹಿಸುತ್ತಿದ್ದಾರೆ.

ಅಮಿತಾಭ್ ಬಚ್ಚನ್ ಅವರು ಮೆಸೇಜ್ ಮೂಲಕ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್‌ ಅವರಿಗೆ ಮೇಸೇಜ್ ಮಾಡುವ ಮೂಲಕ ಅರೋಗ್ಯ ಮಾಹಿತಿ ಪಡೆದು ಕೊಳ್ತಿರುವ ಬಿಗ್ ಬಿ ಅವರು, ಶಿವಣ್ಣ ಹೇಗಿದ್ದಾರೆ, ಚೇತರಿಸಿಕೊಂಡ್ರಾ ಎನ್ನುವ ಮಾಹಿತಿ ಪಡೆಯುತ್ತಲೇ ಇದ್ದಾರಂತೆ. ಇವರ ಜತೆ ಟಾಲಿವುಡ್ ನಟ ಬಾಲಕೃಷ್ಣ ಅವರು ಸಹ ಶಿವಣ್ಣನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಮೊದಲಿಂದಲೂ ಶಿವಣ್ಣ ವಿವಿಧ ಸಿನಿಮಾ ರಂಗದ ಗಣ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ದ್ದಾರೆ. ಕನ್ನಡ ಮಾತ್ರವಲ್ಲದೆ ಶಿವಣ್ಣನಿಗೆ ಪರಭಾಷೆಯ ನಟ ನಟಿಯರೂ ಅವರಿಗೆ ಚಿರಪರಿಚಿತರಾಗಿದ್ದಾರೆ. ಅದರಲ್ಲಿಯೂ ಬಾಲಿವುಡ್‌ ಮೇರುನಟ ಅಮಿತಾಭ್ ಬಚ್ಚನ್ ಅವರೊಂದಿಗಿನ ಶಿವಣ್ಣನ ಒಡನಾಟ ಬಹಳ ಹಿಂದಿನದ್ದು. ಅಮಿತಾಭ್ ಬಚ್ಚನ್ ಹಾಗೂ ಶಿವಣ್ಣ ಜಾಹೀರಾತು ಒಂದರಲ್ಲಿ ಜತೆಯಾಗಿ ನಟಿಸಿದ್ದರು. ಚಿನ್ನದ ಮಳಿಗೆಯ ಈ ಜಾಹೀರಾತಿನ ಅನೇಕ ಪ್ರಚಾರ ಕಾರ್ಯಕ್ರಮದಲ್ಲಿ ಕೂಡ ಜತೆಯಾಗಿ ಇವರು ಕಾಣಿಸಿಕೊಂಡಿದ್ದರು.

ಇದನ್ನು ಓದಿ: Pilipanja Cinema: ‘ಪಿಲಿ ಪಂಜ’ ಶೂಟಿಂಗ್‌ ಫಿನಿಶ್‌– ತೆರೆಗೆ ಯಾವಾಗ ಬರಲಿದೆ ಗೊತ್ತಾ?

ಇದರ ಜತೆ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ನಿರ್ದೇಶಕ ಪುರಿ ಜಗನ್ನಾಥ್, ರಾಮ್ ಗೋಪಾಲ್ ವರ್ಮ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಶಿವಣ್ಣನ ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದಾರೆ. ಇತ್ತೀಚೆಗಷ್ಟೇ ರಿಯಾಲಿಟಿ ಶೋ ಒಂದರಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು ಅವರು ಶೀಘ್ರವೇ ಕಂ ಬ್ಯಾಕ್ ಆಗಬೇಕು ಮತ್ತೆ ಸಿನಿ ಪರದೆ ಮೇಲೆ ಮಿಂಚಬೇಕು ಎಂದು ಅಭಿಮಾನಿಗಳು ಹಾರೈಸಿದ್ದಾರೆ.