ಕೊಯಮತ್ತೂರಿನಲ್ಲಿ ನಡೆದ ಫೈನಲ್‌ನಲ್ಲಿ (Final) ಬಂಗಾಳ ತಂಡವನ್ನು ಎದುರಿಸಿದ ಸುದೀಪ್ (Sudeep) ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ( Karnataka Bulldozers Team) ತಂಡ ಆಲ್ರೌಂಡ್ ಪ್ರದರ್ಶನ ತೋರಿ ಫೈನಲ್ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. 12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ (Champinion) ಎನಿಸಿಕೊಂಡಿದೆ. 16ನೇ ಓವರ್‌ನಲ್ಲಿ 7 ರನ್‌ಗಳನ್ನು ಬುಲ್ದೋಜರ್ಸ್ ಗಳಿಸಿತು. ಕೊನೆಯ 24 ಬಾಲ್‌ಗಳಲ್ಲಿ ಗೆಲುವಿಗೆ 10 ರನ್‌ಗಳು ಬೇಕಿದ್ದವು. ಅಂತಿಮವಾಗಿ ಮಂಜುನಾಥ್ (Manjunath) ಎರಡು ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವಿನ ದಡಕ್ಕೆ ತಲುಪಿಸಿದರು.
ಆರು ಬಾರಿ ರನ್ನರ್ ಅಪ್ ಎನಿಸಿಕೊಂಡಿದ್ದ ಕರ್ನಾಟಕ ಬುಲ್ಡೋಜರ್ಸ
ಕರ್ನಾಟಕ ಬುಲ್ಡೋಜರ್ಸ್ ಈಗಾಗಲೆ ಎರಡು ಬಾರಿ ಚಾಂಪಿಯನ್ ಆಗಿತ್ತು. ಇದಕ್ಕೂ ಮುಂಚೆ ಬರೋಬ್ಬರಿ ಆರು ಬಾರಿ ಫೈನಲ್ ವರೆಗೂ ತಲುಪಿ ರನ್ನರ್ ಅಪ್ ಎನಿಸಿಕೊಂಡಿದ್ದರು. 2013 ಮತ್ತು 2014 ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಚಾಂಪಿಯನ್ ಆಗಿತ್ತು, ಇದೀಗ ಮೂರನೇ ಬಾರಿ ಗೆದ್ದಿದೆ.
ಇದನ್ನೂ ಓದಿ: Sreeleela: ಧನುಷ್ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್
ಬೆಂಗಾಲ್ ಟೈಗರ್ಸ್ ತಂಡ 20 ಓವರ್ಗಳಲ್ಲಿ ಗಳಿಸಿದ್ದು ಕೇವಲ 129 ರನ್ನುಗಳನ್ನಷ್ಟೆ. ಕರ್ನಾಟಕದ ಪರ ಉತ್ತಮ ಬೌಲಿಂಗ್ ಮಾಡಿದ ಪ್ರತಾಪ್ ಮೂರು ವಿಕೆಟ್ ಪಡೆದರೆ, ಸುನೀಲ್ ಎರಡು ವಿಕೆಟ್ ಗಳಿಸಿದರು.
130ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ರಾಹುಲ್ ಮಜುಮ್ದಾರ್ ಆರಂಭಿಕ ಆಘಾತ ನೀಡಿದರು. ಮೊದಲನೇ ಓವರ್‌ನಲ್ಲಿ ಎಲ್‍ಬಿಡಬ್ಲೂ ಬಲೆಗೆ ಸಿಲುಕಿ ನಿರೂಪ್ ಭಂಡಾರಿ ಪೆವಿಲಿಯನ್ ಸೇರಿದರು. ನಿರೂಪ್ ನಿರ್ಗಮನದ ನಂತರ ರಾಜೀವ್ ಹನು ಅಬ್ಬರಿಸಲು ಶುರು ಮಾಡಿದರು.
23 ಎಸೆತದಲ್ಲಿ ರಾಜೀವ್ ಹನು ಅರ್ಧ ಶತಕ ಸಿಡಿಸಿದರು. 35 ಎಸೆತದಲ್ಲಿ 69 ರನ್‌ಗಳಿಸಿ ರಾಜೀವ್ ರತ್ನದೀಪ್ ಅವರಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಕರನ್ ಆರ್ಯನ್ ಬೇಗನೇ ವಿಕೆಟ್ ಒಪ್ಪಿಸಿದರು.
ಡಾರ್ಲಿಂಗ್ ಕೃಷ್ಣ - ಕಾರ್ತಿಕ್ ಅವರ ಜತೆಯಾಟ ಕರ್ನಾಟಕಕ್ಕೆ ಆಸರೆ ಆಯಿತು. ಆದರೆ ಡಾರ್ಲಿಂಗ್ ಕೃಷ್ಣ ಅವರ ತಾಳ್ಮೆ ಆಟ ಹೆಚ್ಚು ಸಮಯ ಬರಲಿಲ್ಲ. ರತ್ನದೀಪ್ ಅವರ ಎಸೆತಕ್ಕೆ ಕೃಷ್ಣ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಅಂತಿಮ ಹಂತದಲ್ಲಿ ಜೆಕೆ - ಮಂಜುನಾಥ್ ತಾಳ್ಮೆಯಿಂದ ಆಟ ಆಡಿ ತಂಡದ ಗೆಲುವಿಗೆ ನೆರವಾದರು.
ಮೂರು ಬಾರಿ ಟ್ರೋಫಿ
ಇದುವರೆಗೆ ಸಿಸಿಎಲ್ 12 ಸೀಸನ್ ನಡೆದಿದೆ. ಈ ಸಲದ ಟ್ರೋಫಿ ಗೆಲ್ಲುವ ಮೂಲಕ ಒಟ್ಟು ಕರ್ನಾಟಕ ಮೂರು ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್ ಚರಣ್; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ
ಈ ಸಲ ಕರ್ನಾಟಕ ಆರಂಭದಲ್ಲಿ ಪಂಜಾಬ್ ದೆ ಶೇರ್ ತಂಡದ ವಿರುದ್ಧ ಗೆಲುವು ಸಾಧಿಸಿತ್ತು. ಆ ಬಳಿಕ ತೆಲುಗು ವಾರಿಯರ್ಸ್, ಭೋಜ್‌ಪುರಿ ದಬಾಂಗ್ ವಿರುದ್ಧ ಗೆದ್ದು ಚೆನ್ನೈ ಕಿಂಗ್ಸ್ ವಿರುದ್ಧ ರೋಚಕ ಸೆಮಿ ಫೈನಲ್‌ನಲ್ಲಿ ಗೆಲುವು ಕಂಡಿತ್ತು.