Rajath Kishan, BBK 11: ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್
ಎರಡನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ ರಜತ್ ಕಿಶನ್ಗೆ ಈಗ ಎಲ್ಲಿ ಹೋದರೂ ಅಭಿಮಾನಿಗಳಿದ್ದಾರೆ. ಆದರೆ, ಇವರು ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಯಂತೆ. ಸಂದರ್ಶನವೊಂದರಲ್ಲಿ ಇವರಿಬ್ಬರ ಬಗ್ಗೆ ಮಾತನಾಡಿದ ರಜತ್ ಏನು ಹೇಳಿದ್ದಾರೆ ನೋಡಿ.
![ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್](https://cdn-vishwavani-prod.hindverse.com/media/original_images/Rajath_Kishan_Sudeep_Darshan.jpg)
Rajath Kishan Sudeep Darshan
![Profile](https://vishwavani.news/static/img/user.png)
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದು ಎರಡು ವಾರಗಳಾದರೂ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿ ಆಗಿಲ್ಲ. ಪ್ರತಿ ದಿನ ಒಬ್ಬಲ್ಲ ಒಬ್ಬ ಸ್ಪರ್ಧಿಗಳು ಸುದ್ದಿಯಲ್ಲಿದ್ದಾರೆ. ಬಿಬಿಕೆ 11 ಮುಗಿದ ಬಳಿಕ ಕೆಲ ಸ್ಪರ್ಧಿಗಳು ಹೊಸ ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ಸ್ನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವು ಫ್ಯಾಮಿಲಿ ಜೊತೆ ಹಾಗೂ ಫ್ರೆಂಡ್ಸ್ ಜೊತೆ ದೇವಸ್ಥಾನಕ್ಕೆ ತೆರಳಿ ಸುತ್ತಾಡುತ್ತಿದ್ದಾರೆ. ಹೀಗಿರುವಾಘ ಇದೀಗ ಈ ಬಾರಿಯ ಬಿಗ್ ಬಾಸ್ಗೆ ವೈಲ್ಡ್‌ಕಾರ್ಡ್ ಮೂಲಕ ದಿಢೀರ್ ಎಂಟ್ರಿ ಕೊಟ್ಟ ರಜತ್ ಕಿಶನ್ ದೊಡ್ಡ ಹೇಳಿಕೆ ನೀಡಿದ್ದಾರೆ. ತಮ್ಮ ನೇರ ಮಾತು ಹಾಗೂ ಫಿಲ್ಟರ್ ಇಲ್ಲದೆ ಕೊಡುವಂತಹ ಕೌಂಟರ್ಗಳಿಗೆ ಹೆಸರುವಾಸಿಯಾದ ಇವರು ದರ್ಶನ್-ಸುದೀಪ್ ವಿಚಾರವಾಗಿ ಮಾತನಾಡಿದ್ದಾರೆ.
ಎರಡನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ ರಜತ್ ಕಿಶನ್ಗೆ ಈಗ ಎಲ್ಲಿ ಹೋದರೂ ಅಭಿಮಾನಿಗಳಿದ್ದಾರೆ. ಆದರೆ, ಇವರು ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಯಂತೆ. ಸಂದರ್ಶನವೊಂದರಲ್ಲಿ ಇವರಿಬ್ಬರ ಬಗ್ಗೆ ಮಾತನಾಡಿದ ರಜತ್, ದರ್ಶನ್ ಸರ್ ಯಾವತ್ತಿದ್ರೂ ದೊಡ್ಡವರೆ.. ಎಲ್ಲ ಫ್ಯಾನ್ಸ್ಗೆ ಆಸೆ ಇರೋ ಹಾಗೆ ನನಗೂ ದರ್ಶನ್ ಸರ್ ಮತ್ತು ಸುದೀಪ್ ಸರ್ನ ಜೊತೆಗೆ ನೋಡಬೇಕು ಅಂತಾ ತುಂಬಾ ದೊಡ್ಡ ಆಸೆ ಇದೆ ಎಂದು ಹೇಳಿದ್ದಾರೆ.
ದರ್ಶನ್ ಸರ್ ಮತ್ತು ಸುದೀಪ್ ಸರ್ ಒಂದಾಗ್ತಾರೆ.. ಅದು ಆದಾಗ ನನ್ನಷ್ಟು ಖುಷಿ ಪಡೋನು ಯಾರೂ ಇಲ್ಲ. ನಾನು ತಿರುಪತಿಗೆ ಹೋಗಿ ಗುಂಡೋಡಿಸಿಕೊಂಡು ಬರ್ತೇನೆ ಅಂತ ತುಂಬಾ ಸಲ ಹೇಳಿದ್ದೆ. ಅಷ್ಟು ಪ್ರೀತಿ ಇದೆ ಅವರಿಬ್ಬರ ಮೇಲೆ ಇದೆ ಎಂದಿದ್ದಾರೆ. ದರ್ಶನ್ ಅವರ ಈಗಿನ ವಿಚಾರವಾಗಿ ಮಾತನಾಡಿದ ರಜತ್, ದರ್ಶನ್ ಸರ್ ಜೊತೆಗೆ ನನಗೆ ತುಂಬಾ ಒಡನಾಟ ಇಲ್ಲ. ಆದರೆ ತುಂಬಾ ಟೈಮ್ ಮಾತಾಡಿದ್ದೀನಿ. ಅವರು ನನ್ನ ಫೇವರೆಟ್ ನಟರಲ್ಲಿ ಒಬ್ಬರು. ತಪ್ಪುಗಳನ್ನು ಮಾಡದೇ ಇರುವವರು ಯಾರಿದ್ದಾರೆ? ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡಿಯೇ ಇರುತ್ತಾರೆ. ಅದು ಅವರವರ ವೈಯಕ್ತಿಕ ಜೀವನ.. ಅದರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ.. ನಾನು ಯಾರ ಪರ್ಸನಲ್ ಲೈಫ್ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ರಜತ್ ಅವರು ಟಾಪ್ 6ರಲ್ಲಿ ಒಬ್ಬರಾಗಿದ್ದರು. ಅವರು 50 ದಿನಗಳ ಬಳಿಕ ದೊಡ್ಮನೆಗೆ ಎಂಟ್ರಿ ಕೊಟ್ಟರೂ ಮನರಂಜನೆಯಲ್ಲಿ, ಟಾಸ್ಕ್ನಲ್ಲಿ ಕಡಿಮೆ ಇರಲಿಲ್ಲ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಗಮನ ಸೆಳೆಯೋದು ಅಂದರೆ ಅದು ಸಣ್ಣ ಮಾತಲ್ಲ. ಅದರಲ್ಲೂ ಟಾಪ್ 6ರಲ್ಲಿ ಒಬ್ಬರಾಗೋದು ಎಂದರಂತೂ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ಈ ಸಾಧನೆಯನ್ನು ರಜತ್ ಮಾಡಿ ತೋರಿಸಿದ್ದಾರೆ. ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ. ಅವರು ಮಾತಿನಲ್ಲೂ ಎಲ್ಲಿಯೋ ಸೋತಿಲ್ಲ. ಯಾರೇ ಮಾತಿಗೆ ನಿಂತರೂ ಅವರನ್ನು ಸೋಲಿಸಿದ್ದಾರೆ.
Hanumantha, BBK 11: ಇನ್ನೂ 50 ಲಕ್ಷ ಸಿಕ್ಕಿಲ್ಲ: ವೇದಿಕೆ ಮೇಲೆ ಶಾಕಿಂಗ್ ಹೇಳಿಕೆ ನೀಡಿದ ಹನುಮಂತ