ನವದೆಹಲಿ: ಇತ್ತೀಚಿನ ದಿನದಲ್ಲಿ ಸಿನಿಮಾ ರಿಲೀಸ್ ಆಗಿ ಒಂದೆರೆಡು ವಾರಕ್ಕೆಲ್ಲ ಒಟಿಟಿಗೆ ಲಗ್ಗೆ ಇಡುತ್ತೀವೆ. ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾದಿಂದ ಹಿಡಿದು ಸಾಮಾನ್ಯ ಸಿನಿಮಾದ ತನಕವು ಒಟಿಟಿಯಲ್ಲಿ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿರುತ್ತವೆ. ಅದರಲ್ಲೂ ಸಿನಿಮಾ ಮಂದಿರದಲ್ಲಿ ಸಿನಿಮಾ ನೋಡಲು ಅನಿವಾರ್ಯ ಕಾರಣದಿಂದ ಸಾಧ್ಯವಾಗದೇ ಇರುವವರಿಗೆ ಒಟಿಟಿ ಎನ್ನುವುದು ಬೆಸ್ಟ್ ಫ್ಲ್ಯಾಟ್ ಫಾರ್ಮ್ ಎನ್ನಬಹುದು. ಪ್ರತಿ ತಿಂಗಳಿಗೂ ಒಟಿಟಿಯಲ್ಲಿ ಹೊಸ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದ್ದು ಈ ಬಾರಿ ಒಟ್ಟೊಟ್ಟಿಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಲಗ್ಗೆ ಇಡಲಿದೆ. ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಹಿಟ್ ಆದ ಕಾಂತಾರ ಚಾಪ್ಟರ್ 1 (Kantara: Chapter-1) ಸಿನಿಮಾ ಕೂಡ ಸ್ಟ್ರೀಮಿಂಗ್ ಆಗಲಿದೆ. ಸಿನಿಮಾ ಬಿಡುಗಡೆಯಾಗಿ ತಿಂಗಳಿಗೂ ಮುನ್ನ ಈ ಸಿನಿಮಾ ಓಟಿಟಿಗೆ ಬರುತ್ತಿದ್ದು ಅದರ ಜೊತೆ ಜೊತೆಗೆ ಬೇರೆ ಇತರ ಸಿನಿಮಾ ಕೂಡ ಆನ್ಲೈನ್ ನಲ್ಲಿ ತೆರೆ ಕಾಣುತ್ತಿದೆ.
ಅಮೇಜಾನ್ ಪ್ರೈಮ್: (Amazon Prime)
ರಿಷಭ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿರುವ 'ಕಾಂತಾರ'-1 ಸಿನಿಮಾ ಅಕ್ಟೋಬರ್ 2ಕ್ಕೆ ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ರಿಲೀಸ್ ಆಗಿತ್ತು. ಆದರೆ ರಿಲೀಸ್ ಆಗಿ ಒಂದು ತಿಂಗಳಿಗೆ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ. ಇತ್ತೀಚೆಗೆ ಸಿನಿಮಾ 25 ದಿನ ಪೂರೈಸಿದ್ದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ 800 ಕೋಟಿ ರೂ. ಗಳಿಕೆ ಮಾಡಿದೆ. ಇದೀಗ ಡಿಜಿಟಲ್ ಸ್ಟ್ರೀಮಿಂಗ್‌ಗೆ ಲಗ್ಗೆ ಇಡಲು ಮುಂದಾಗಿದೆ. 120 ಕೋಟಿ ರೂ.ಗೆ ಪ್ರೈಂ ವೀಡಿಯೋ ರೈಟ್ಸ್ ಖರೀದಿ ಮಾಡಿದ್ದು ಇದೇ ಅಕ್ಟೋಬರ್ 31ರಂದು ಈ ಸಿನಿಮಾ ಒಟಿಟಿಯ ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದು. ಅಂತೆಯೇ ಈ ಬಾರಿ ಅಮೇಜಾನ್ ಪ್ರೈಮ್ ನಲ್ಲಿ ಹಜ್ಬಿನ್ ಹೋಟೆಲ್- ಸೀಸನ್ 2 (ಆನಿಮೇಟೆಡ್ ಸೀರಿಸ್)- ಅಕ್ಟೋಬರ್ 29 ತೆರೆಕಾಣಲಿದೆ. ಅದರ ಜೊತೆಗೆ ಹೆಡ್ಡಾ(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 29 ಕ್ಕೆ ಸ್ಟ್ರೀಮಿಂಗ್ ಆಗಲಿದೆ.
ನೆಟ್ ಫ್ಲಿಕ್ಸ್: (Netflix)
ತಮಿಳು ಸ್ಟಾರ್ ನಟ ಧನುಷ್ ಅವರು ನಟಿಸಿ, ನಿರ್ದೇಶಿಸಿರುವ 'ಇಡ್ಲಿ ಕಡೈ' ಚಿತ್ರವು ಕೂಡ ಒಟಿಟಿಗೆ ಸ್ಟ್ರೀಮಿಂಗ್ ಆಗುತ್ತಿದೆ. ಅಕ್ಟೋಬರ್ 1ರಂದು ರಿಲೀಸ್ ಆದ ಈ ಸಿನಿಮಾ 'ಕಾಂತಾರ- 1' ನಂತಹ ಪ್ಯಾನ್ ವರ್ಲ್ಡ್ ಸಿನಿಮಾಕ್ಕೆ ಪೈಪೋಟಿ ಕೊಡಲು ವಿಫಲವಾಯಿತು. ಸಿನಿಮಾ ಸಿಂಪಲ್ ಥೀಂ ನಲ್ಲಿ ಮೇಲ್ನೋಟಕ್ಕೆ ಚೆನ್ನಾಗಿದೆ ಎಂದು ಅನಿಸಿದರು ಅಭಿಮಾನಿಗಳ ಮನ ಸೆಳೆಯಲು ಮಾತ್ರ ಸಾಧ್ಯ ವಾಗಿಲ್ಲ. ಹಾಗಿದ್ದರೂ ತಮಿಳುನಾಡಿನಲ್ಲಿ ಮಾತ್ರ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿದೆ. ಅಕ್ಟೋಬರ್ 29ರಂದು ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಂತೆಯೆ ಇದರ ಜೊತೆಗೆ ದಿ ಅಸ್ಸೆಟ್ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 27 ಕ್ಕೆ ತೆರೆ ಕಾಣಲಿದೆ. ಸ್ಟಿಚ್ ಹೆಡ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 29ಕ್ಕೆ , ಐಲಿನ್: ಕ್ವೀನ್ ಆಫ್ ಸೀರಿಯಲ್ ಕಿಲ್ಲರ್ಸ್ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 30ಕ್ಕೆ ಮತ್ತು ದಿ ವೈಟ್ ಹೌಸ್ ಎಫೆಕ್ಟ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 31 ರಂದು ಸ್ಟ್ರೀಮಿಂಗ್ ಆಗಲಿದೆ.
ಜಿಯೋ ಹಾಟ್ ಸ್ಟಾರ್: (Jio Hot star)
ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾವಾದ 'ಲೋಕ' ಅಭಿ ಮಾನಿಗಳ ಮನಗೆದ್ದಿತ್ತು. ಸೂಪರ್ ಪವರ್ ವಿಷಯ ಆಧರಿತ ಈ ಸಿನಿಮಾದಲ್ಲಿ ನಟಿ ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಡೊಮಿಕ್ ಅರುಣ್ ನಿರ್ದೇಶನದ ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ಸಕ್ಸಸ್ ಪಡೆದಿದ್ದು 300 ಕೋಟಿ ರೂ. ನಷ್ಟು ಕಲೆಕ್ಷನ್ ಮಾಡಿದೆ. ಆಗಸ್ಟ್ ನಂದು ಸಿನಿಮಾ ರಿಲೀಸ್ ಆಗಿದ್ದು ಸಿನಿಮಾ ತೆರೆ ಕಂಡ ಎರಡೇ ತಿಂಗಳಿಗೆ ಒಟಿಟಿಗೆ ಲಗ್ಗೆ ಇಟ್ಟಿದೆ. ಅಕ್ಟೋಬರ್ 31ರಂದು ಜಿಯೋ ಹಾಟ್‌ಸ್ಟಾರ್ ನಲ್ಲಿ ಈ ಸಿನಿಮಾ ಬಿಡುಗಡೆ ಆಗ್ತಿದೆ. ಅಂತೆಯೆ ಹಾಟ್ ಸ್ಟಾರ್ ನಲ್ಲಿ ಇದರೊಂದಿಗೆ ಮೆಗಾ 2.0(ಇಂಗ್ಲೀಷ್ ಸಿನಿಮಾ) ಹಾಗೂ ಐಟಿ ವೆಲ್ಕಮ್ ಟು ಡೆರ್ರಿ(ಇಂಗ್ಲೀಷ್ ಸೀರಿಸ್) ಅಕ್ಟೋಬರ್ 27 ಸ್ಟ್ರೀಮಿಂಗ್ ಆಗಲಿದೆ. ಮಾನಾ ಕಿ ಹಮ್ ಯಾರ್ ನಹೀನ್(ಹಿಂದಿ ಸೀರಿಸ್) ಅಕ್ಟೋಬರ್ 29 ತೆರೆ ಕಾಣಲಿದೆ.
ಜೀ 5: (Zee5)
ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿದ್ದ ಮಾರಿಗಲ್ಲು' ವೆಬ್ ಸೀರಿಸ್' ಅಕ್ಟೋಬರ್ 31ರಂದು ಜೀ-5ನಲ್ಲಿ ರಿಲೀಸ್ ಆಗ್ತಿದೆ. ರಂಗಾಯಣ ರಘು, ಪ್ರವೀಣ್ ತೇಜ್, ನಿಧಿ ಹೆಗಡೆ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು ಈ ವೆಬ್ ಸೀರಿಸ್ ನಲ್ಲಿ ನಟಿಸಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ಕೂಡ ಈ ವೆಬ್ ಸೀರಿಸ್ ಮೂಲಕ ತರಲಾಗಿದೆ. ಹೀಗಾಗಿ ಅಪ್ಪು ಅಭಿಮಾನಿಗಳಿಗೆ ಈ ವೆಬ್ ಸೀರಿಸ್ ಬಹಳ ಇಷ್ಟವಾಗಲಿದೆ.