ಹೈದರಾಬಾದ್: ತೆಲುಗು(Telugu) ಚಿತ್ರರಂಗದ ಪ್ರಸಿದ್ಧ ನಟ ಮೆಗಾಸ್ಟಾರ್(Mega Star) ಚಿರಂಜೀವಿ(Chiranjeevi) ಮಹಿಳೆಯರ ಬಗ್ಗೆ ಕಾಮೆಂಟ್‌ವೊಂದನ್ನು ಮಾಡಿದ್ದು, ಇದೀಗ ಅವರು ನೀಡಿದ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನಟ ವಿವಾದಕ್ಕೆ ಈಡಾಗಿದ್ದಾರೆ. ನೆಟ್ಟಿಗರು ನಟನ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಟ ʼನಮ್ಮ ಕುಟುಂಬದಲ್ಲಿ ಎಲ್ಲರು ಮಹಿಳೆಯರಿದ್ದು, ಮನೆಯಲ್ಲಿ ಮಹಿಳೆಯರ ಹಾಸ್ಟೆಲ್ ವಾರ್ಡನ್‌ನಂತೆ ಫೀಲ್ ಆಗ್ತಿದೆʼ ಎಂಬ ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಬ್ರಹ್ಮ ಆನಂದಂ' ಚಿತ್ರದ ಫ್ರಿ-ಇವೆಂಟ್ ಕಾರ್ಯಕ್ರಮಕ್ಕೆ ನಟ ಚಿರಂಜೀವಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೆಗಾಸ್ಟಾರ್, ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುವ ಕಾರಣ ಮನೆಯಲ್ಲಿ ಮಹಿಳೆಯರ ಹಾಸ್ಟೆಲ್ ವಾರ್ಡನ್‌ನಂತೆ ನನಗೆ ಭಾಸವಾಗುತ್ತಿದೆ. ಹೀಗಾಗಿ, ನಮ್ಮ ವಂಶ ಪರಂಪರೆ ಮುಂದುವರೆಯಲು ರಾಮ್ ಚರಣ್‌ಗೆ ಗಂಡು ಮಗುವಾಗಲೆಂದು ನಾನು ಹಾರೈಸುತ್ತೇನೆ, ಹಾರೈಸುತ್ತಲೇ ಇದ್ದೇನೆ. ಆದರೆ ಸೊಸೆ ಉಪಾಸನ ಮತ್ತೊಮ್ಮೆ ಹೆಣ್ಣಿಗೆ ಜನ್ಮ ನೀಡುತ್ತಾಳೆನೋ ಎಂಬ ಭಯ ನನಗಿದೆ ಎಂದು ಹೇಳಿದ್ದಾರೆ. ಇದೀಗ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದ ಭುಗಿಲೆದ್ದಿದೆ. ನೆಟ್ಟಿಗರು ನಟ ಲಿಂಗಬೇಧ ಮಾಡುತ್ತಿದ್ದಾರೆ. ಮಹಿಳೆಯ ಬಗ್ಗೆ ಗೌರವವಿಲ್ಲ ಎಂದು ಟೀಕಿಸುತ್ತಿದ್ದಾರೆ.
ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಶ್ರೀಜಾ ಕೊನಿಡೇಲಾ ಮತ್ತು ಸುಶ್ಮಿತಾ ಕೊನಿಡೇಲಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀಜಾ ಅವರಿಗೆ ನವಿಷ್ಕಾ ಮತ್ತು ನಿವ್ರತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಶ್ಮಿತಾ ಅವರಿಗೆ ಸಮರ ಮತ್ತು ಸಂಹಿತಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಅವರ ಮಗ ರಾಮ್ ಚರಣ್ ಮತ್ತು ಸೊಸೆ ಉಪಾಸನಾ 2023ರ ಜೂನ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Pawan Kalyan: ಪವನ್ ಕಲ್ಯಾಣ್ ಟೆಂಪಲ್ ರನ್- ಕೇರಳ,ತಮಿಳುನಾಡು ದೇವಸ್ಥಾನಗಳಿಗೆ ಭೇಟಿ
ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಚಿರಂಜೀವಿ
ವರ್ಡ್ ಆಡಿಯೋ ವಿಶ್ಯುವಲ್ಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಶೃಂಗಸಭೆ (WAVES)ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖೇಶ್ ಅಂಬಾನಿ ಮತ್ತು ಅಮಿತಾಭ್ ಬಚ್ಚನ್ ಅವರೊಂದಿಗೆ ಚರ್ಚಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ದಕ್ಷಿಣ ಭಾರತದ ನಟ ಚಿರಂಜೀವಿ ಅವರನ್ನು ಸಲಹಾ ಮಂಡಳಿಗೆ ನೇಮಿಸಲಾಗಿದೆ. ಇಬ್ಬರೂ ನಟರು ಪ್ರಧಾನಿಯವರಿಗೆ ಧನ್ಯವಾದ ಹೇಳಿದ್ದಾರೆ.