#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Pawan Kalyan: ಪವನ್‌ ಕಲ್ಯಾಣ್‌ ಟೆಂಪಲ್‌ ರನ್- ಕೇರಳ,ತಮಿಳುನಾಡು ದೇವಸ್ಥಾನಗಳಿಗೆ ಭೇಟಿ

ಜನ ಸೇನಾ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂದಿನಿಂದ(ಫೆ.12) ಮೂರು ದಿನಗಳ ಕಾಲ ಕೇರಳ ಮತ್ತು ತಮಿಳುನಾಡಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ವೈರಲ್‌ ಜ್ವರದಿಂದ ಬಳಲುತ್ತಿದ್ದ ಪವನ್‌ ಕಲ್ಯಾಣ್‌ ಸದ್ಯ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆ.

ಪವನ್‌ ಕಲ್ಯಾಣ್‌ ಮೂರು ದಿನಗಳ ಟೆಂಪಲ್‌ ರನ್!

ಪವನ್‌ ಕಲ್ಯಾಣ್‌

Profile Deekshith Nair Feb 12, 2025 11:18 AM

ಅಮರಾವತಿ: ಜನ ಸೇನಾ ಪಕ್ಷದ(Jana Sena Party) ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ(Deputy Chief Minister) ಪವನ್ ಕಲ್ಯಾಣ್(Pawan Kalyan) ಇಂದಿನಿಂದ(ಫೆ.12) ಮೂರು ದಿನಗಳ ಕಾಲ ಕೇರಳ(Kerala) ಮತ್ತು ತಮಿಳುನಾಡಿನ ಪ್ರಮುಖ (Tamilnadu) ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ವೈರಲ್‌ ಜ್ವರದಿಂದ ಬಳಲುತ್ತಿದ್ದ ಪವನ್‌ ಕಲ್ಯಾಣ್‌ ಸದ್ಯ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಪವನ್‌ ದಕ್ಷಿಣ ಭಾರತದಾದ್ಯಂತ ಐದು ದಿನಗಳ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದರು. ಆದರೆ ಅವರ ಆರೋಗ್ಯ ಸ್ಥಿತಿಯಿಂದಾಗಿ ಪ್ರವಾಸವನ್ನು ಮೂರು ದಿನಗಳಿಗೆ ಸೀಮಿತಗೊಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ತೀವ್ರ ಜ್ವರ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ್‌ ಇದೀಗ ದಕ್ಷಿಣ ಭಾರತದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು(ಫೆ.12) ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಅವರು ತಮ್ಮ ಪ್ರಯಾಣವನ್ನು ಆರಂಭಿಸಲಿದ್ದಾರೆ. ಅಲ್ಲಿಂದ ಅವರು ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನಕ್ಕೆ ತೆರಳಲಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಪವನ್ ತಮಿಳುನಾಡಿನ ವಿವಿಧ ಭಾಗಗಳಲ್ಲಿರುವ ಶ್ರೀ ಪರಶುರಾಮ ಸ್ವಾಮಿ ದೇವಸ್ಥಾನ, ಅಗಸ್ತ್ಯ ಜೀವಂತ ಸಮಾಧಿ, ಕುಂಬೇಶ್ವರ ದೇವಸ್ಥಾನ, ಸ್ವಾಮಿಮಲೈ ಮತ್ತು ತಿರುತ್ತಣಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹೀಗೆ ಹತ್ತು ಹಲವು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.



ಪವನ್‌ ಕಲ್ಯಾಣ್‌ ಇತ್ತೀಚೆಗಷ್ಟೇ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ್ದರು, ಇದು ತಮಿಳುನಾಡಿನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪವನ್‌ ತಮಿಳುನಾಡಿನ ದೇವಸ್ಥಾನಗಳಿಗೆ ನೀಡುತ್ತಿದ್ದು, ಮತ್ತಷ್ಟು ಚರ್ಚೆಗಳು ತಮಿಳುನಾಡಿನ ರಾಜಕೀಯ ಪಡಸಾಲೆಯಲ್ಲಿ ನಡೆಯುವ ಸಾಧ್ಯತೆಯಿದೆ.

ಈ ಸುದ್ದಿಯನ್ನೂ ಓದಿ:Modi in Paris: ಮರ್ಸೆಲ್ಲೆ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ; ವೀರ್‌ ಸಾವರ್ಕರ್‌ಗೆ ಸ್ಮರಣೆ

ತಮಿಳುಮಾಡಿನ ಬಿಜೆಪಿ ಪಕ್ಷದ ಮುಖ್ಯಸ್ಥ ಅಣ್ಣಾಮಲೈ ಸೇರಿದಂತೆ ಹಲವು ನಾಯಕರು ಪವನ್ ಕಲ್ಯಾಣ್ ಅವರ ದೇವಸ್ಥಾನ ಭೇಟಿಗಳಲ್ಲಿ ಭಾಗವಹಿಸಬಹುದು ಎನ್ನಲಾಗಿದೆ. ಪವನ್‌ ಕಲ್ಯಾಣ್ ಫೆಬ್ರವರಿ 15 ರಂದು ವಿಜಯವಾಡಕ್ಕೆ ಹಿಂತಿರುಗಲಿದ್ದಾರೆ ಎಂದು ಜನ ಸೇನಾ ಪಕ್ಷದ ಮೂಲಗಳು ತಿಳಿಸಿವೆ.