ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mana Shankara Vara Prasad Garu: ʻಕಿಚ್ಚʼ ಸುದೀಪ್ ರೀತಿಯಲ್ಲೇ ತಂತ್ರ ಮಾಡಿ ಗೆದ್ದುಬಿಟ್ಟ ʻಮೆಗಾ ಸ್ಟಾರ್‌ʼ ಚಿರಂಜೀವಿ! ಅದು ಹೇಗೆ?

Mana Shankara Vara Prasad Garu: ನಟ ಚಿರಂಜೀವಿ ಅವರು ಈ ಬಾರಿ ಸಂಕ್ರಾಂತಿಗೆ ಕಿಚ್ಚ ಸುದೀಪ್ ಅವರ ತಂತ್ರವನ್ನೇ ಬಳಸಿ ಗೆದ್ದಿದ್ದಾರೆ. ಸುದೀಪ್ ಹೇಗೆ 'ಬಿಲ್ಲಾ ರಂಗ ಬಾಷಾ' ತಡವಾಗಿದ್ದಕ್ಕೆ 'ಮಾರ್ಕ್' ಚಿತ್ರವನ್ನು ವೇಗವಾಗಿ ಮುಗಿಸಿ ಗೆದ್ದರೋ, ಅದೇ ರೀತಿ ಚಿರಂಜೀವಿ ಕೂಡ 'ವಿಶ್ವಂಭರ' ತಡವಾಗಿದ್ದಕ್ಕೆ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರವನ್ನು ಕೈಗೆತ್ತಿಕೊಂಡು ಬ್ಲಾಕ್‌ಬಸ್ಟರ್ ನೀಡಿದ್ದಾರೆ.

ʻಮೆಗಾ ಸ್ಟಾರ್‌ʼ ಚಿರಂಜೀವಿ ಅವರು ಈ ವರ್ಷದ ಆರಂಭದಲ್ಲೇ ದೊಡ್ಡ ಗೆಲುವನ್ನು ತಮ್ಮದಾಗಿಸಿಕೊಳ್ಳುವತ್ತ ಮುನ್ನಡೆದಿದ್ದಾರೆ. ಅವರ ʻಮನ ಶಂಕರ ವರ ಪ್ರಸಾದ್‌ ಗಾರುʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಹವಾ ಮಾಡುತ್ತಿದೆ. ಗಳಿಕೆಯಲ್ಲಿ ದಾಖಲೆ ಬರೆಯುತ್ತಿದೆ. ಅಂದಹಾಗೆ, ಇದನ್ನು ಕಂಡವರು ಕಿಚ್ಚ ಸುದೀಪ್‌ ತಂತ್ರಗಾರಿಕೆಗೆ ʻಮನ ಶಂಕರ ವರ ಪ್ರಸಾದ್‌ ಗಾರುʼ ಸಿನಿಮಾವನ್ನು ಹೋಲಿಸುತ್ತಿದ್ದಾರೆ. ಅದು ಹೇಗೆ? ಈ ಸ್ಟೋರಿ ಓದಿ.

ಸುದೀಪ್‌ ʻಮಾರ್ಕ್‌ʼ ಮಾಡಿದ್ದೇಕೆ?

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸುದೀಪ್‌ ಅವರು ಕಳೆದ ವರ್ಷ ಬಿಲ್ಲಾ ರಂಗ ಬಾಷಾ ಸಿನಿಮಾವನ್ನು ಮುಗಿಸಬೇಕಿತ್ತು. ಶೂಟಿಂಗ್‌ ಕೂಡ ಆರಂಭವಾಗಿತ್ತು. ಆದರೆ ಅದ್ಯಾಕೋ ಈ ಸಿನಿಮಾ ಅಂದುಕೊಂಡಷ್ಟು ಬೇಗ ಮುಗಿಯೋದಿಲ್ಲ ಎಂಬುದು ಸುದೀಪ್‌ಗೆ ಗೊತ್ತಾಗಿತ್ತು. ಕೂಡಲೇ ಅವರು ಮಾರ್ಕ್‌ ಸಿನಿಮಾವನ್ನು ಕೈಗೆತ್ತಿಕೊಂಡರು. ಏಪ್ರಿಲ್‌ನಲ್ಲಿ ನಿರ್ದೇಶಕ ವಿಜಯ್‌ ಕಾರ್ತಿಕೇಯ ಜೊತೆ ಕಥೆ ಡಿಸ್ಕಷನ್‌ ಶುರುವಾಯಿತು. ಜುಲೈನಲ್ಲಿ ಶೂಟಿಂಗ್‌ ಆರಂಭವಾದರೆ, ಡಿಸೆಂಬರ್‌ 25ಕ್ಕೆ ಸಿನಿಮಾ ತೆರೆಕಂಡಿತ್ತು. ವೇಗವಾಗಿ ಸಿನಿಮಾವನ್ನು ಕಂಪ್ಲೀಟ್‌ ಮಾಡಿ, ಒಂದು ಗೆಲುವನ್ನು ಸುದೀಪ್‌ ಪಡೆದುಕೊಂಡರು.

Mark: ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾದ ಸುದೀಪ್;‌ ಹೊಸ ವರ್ಷಕ್ಕೆ ಕಿಚ್ಚ ಕೊಡ್ತಿರುವ ಗಿಫ್ಟ್‌ ಏನು ಗೊತ್ತಾ?

ಇದೀಗ ಅದೇ ಮಾದರಿಯ ಗೆಲುವನ್ನು ಚಿರಂಜೀವಿ ಕೂಡ ಪಡೆದುಕೊಳ್ಳುತ್ತಿದ್ದಾರೆ. ಅದು ಹೇಗೆ ಅಂತೀರಾ? ಮುಂದೆ ಓದಿ. ಕಳೆದ ವರ್ಷದ ಜನವರಿಯಲ್ಲಿಯೇ ಚಿರು ನಟನೆಯ ವಿಶ್ವಂಭರ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆಮೇಲೆ ಅದು ಏಪ್ರಿಲ್‌ಗೆ ಪೋಸ್ಟ್‌ಪೋನ್‌ ಆಯ್ತು. ಆಗಲೂ ಅದು ತೆರೆಗೆ ಬರಲಿಲ್ಲ. ಅಷ್ಟರಲ್ಲಿ ನಿರ್ದೇಶಕ ಅನಿಲ್‌ ರವಿಪುಡಿ ಜೊತೆ ಮಾತುಕತೆ ಆರಂಭವಾಗಿತ್ತು. ಸದ್ದಿಲ್ಲದೇ ʻಮನ ಶಂಕರ ವರ ಪ್ರಸಾದ್‌ ಗಾರುʼಸಿನಿಮಾ ಘೋಷಣೆ ಆಗಿಯೇ ಬಿಟ್ಟಿತು.

Mark Review: ಮ್ಯಾಕ್ಸಿಮಮ್‌ ಮಾಸ್‌ನೊಂದಿಗೆ ʻಮಾರ್ಕ್‌ʼ ಮಾರಾಮಾರಿ; ಸುದೀಪ್‌ ಅಭಿಮಾನಿಗಳಿಗೆ ಇದು ಹಬ್ಬ ಕಣ್ರೀ!

2025ರ ಮೇ ಅಂತ್ಯದಲ್ಲಿ ಶೂಟಿಂಗ್‌ ಆರಂಭವಾಯಿತು. ಸುದೀಪ್‌ ಹೇಗೆ ಮುಹೂರ್ತದ ದಿನವೇ ತಮ್ಮ ಮಾರ್ಕ್‌ ಸಿನಿಮಾವನ್ನು ಡಿಸೆಂಬರ್‌ನಲ್ಲಿ ರಿಲೀಸ್‌ ಮಾಡಬೇಕು ಎಂದು ತೀರ್ಮಾನ ಮಾಡಿದರೋ, ಅದೇ ರೀತಿ ʻಮನ ಶಂಕರ ವರ ಪ್ರಸಾದ್‌ ಗಾರುʼ ಟೀಮ್‌ ಕೂಡ 2026ರ ಸಂಕ್ರಾಂತಿ ಹಬ್ಬಕ್ಕೆ‌ ಈ ಸಿನಿಮಾವನ್ನು ರಿಲೀಸ್‌ ಮಾಡಬೇಕು ಎಂದು ಫಿಕ್ಸ್‌ ಆಗಿದ್ದರು. ಅದಕ್ಕೆ ತಕ್ಕಂತೆ ವೇಗವಾಗಿ ಕೆಲಸಗಳನ್ನು ಮುಗಿಸಿ, ಇದೀಗ ಸಿನಿಮಾವನ್ನು ರಿಲೀಸ್‌ ಮಾಡಿದ್ದಾರೆ ಮತ್ತು ಬಾಕ್ಸ್‌ ಆಫೀಸ್‌ನಲ್ಲಿ ಬಂಪರ್‌ ಗೆಲುವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂದಹಾಗೆ, ʻಮನ ಶಂಕರ ವರ ಪ್ರಸಾದ್‌ ಗಾರುʼ ಚಿತ್ರಕ್ಕೂ ಮುಂಚೆಯೇ ಶೂಟಿಂಗ್‌ ಆರಂಭಿಸಿದ್ದ ಚಿರು ನಟನೆಯ ವಿಶ್ವಂಭರ ಸಿನಿಮಾ ಇನ್ನೂ ಕೂಡ ತೆರೆಕಂಡಿಲ್ಲ. 2026ರ ಮಧ್ಯ ಭಾಗದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ಬಿಲ್ಲಾ ರಂಗ ಬಾಷಾ ಸಿನಿಮಾವನ್ನು ಸೈಡಿಗಿಟ್ಟು ಮಾರ್ಕ್‌ ಮಾಡಿ ಸುದೀಪ್‌ ಗೆಲುವು ಕಂಡರೆ, ವಿಶ್ವಂಭರ ಚಿತ್ರವನ್ನು ಬದಿಗಿಟ್ಟು ʻಮನ ಶಂಕರ ವರ ಪ್ರಸಾದ್‌ ಗಾರುʼ ಚಿತ್ರವನ್ನು ಕೈಗೆತ್ತಿಕೊಂಡು, ಅದರಿಂದ ಗೆಲುವು ಕಂಡಿದ್ದಾರೆ ನಟ ಚಿರಂಜೀವಿ.