ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇದ್ದಕ್ಕಿದ್ದಂತೆಯೇ ಕನ್ನಡದ ಮೇಲೆ ತೆಲುಗು ಚಿತ್ರರಂಗಕ್ಕೆ ಒಲವು; ಟಾಲಿವುಡ್‌ನ ʻಸ್ಟಾರ್‌ʼ ನಟರ ಸಿನಿಮಾಗಳಲ್ಲಿ ಕರುನಾಡಿನ ಬಗ್ಗೆ ಮಾಸ್‌ ಡೈಲಾಗ್ಸ್!‌

Sankranthi 2026 Telugu Releases: ತೆಲುಗು ಚಿತ್ರರಂಗ ಇದ್ದಕ್ಕಿದ್ದಂತೆಯೇ ಕನ್ನಡದ ಮೊರೆ ಹೋಗಿದೆ. ಬಾಲಯ್ಯ, ಚಿರಂಜೀವಿ ಮತ್ತು ರವಿತೇಜ ತಮ್ಮ ಸಿನಿಮಾಗಳಲ್ಲಿ ಕನ್ನಡ ಡೈಲಾಗ್ ಮತ್ತು ಕರ್ನಾಟಕದ ರೆಫರೆನ್ಸ್ ಬಳಸುತ್ತಿದ್ದಾರೆ. ಇದು ಕರ್ನಾಟಕದ ಮಾರುಕಟ್ಟೆಯನ್ನು ಸೆಳೆಯುವ ಹೊಸ ತಂತ್ರವೇ?

ತೆಲುಗು ಚಿತ್ರಗಳಲ್ಲಿ ಕನ್ನಡದ ಹವಾ; ಬಾಕ್ಸ್‌ ಆಫೀಸ್ ತಂತ್ರವೇ?

-

Avinash GR
Avinash GR Jan 13, 2026 5:00 PM

ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕವು ಪರಭಾಷಾ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಟ್ಟು ಬಹಳ ದಿನಗಳೇ ಆಯ್ತು. ಆದರಲ್ಲೂ ತಮಿಳು ಮತ್ತು ತೆಲುಗು ಸಿನಿಮಾಗಳಂತೂ ಅಲ್ಲಿಗಿಂತ ಕರ್ನಾಟಕದ ಮೇಲೆ ಜಾಸ್ತಿ ಕಣ್ಣಿಡುತ್ತಾರೆ. ಸದ್ಯ ಟಾಲಿವುಡ್‌ನಲ್ಲಿ ಹೊಸದೊಂದು ಟ್ರೆಂಡ್‌ ಶುರುವಾಗಿದೆ. ಅದೇನಪ್ಪ ಅಂದರೆ, ತಮ್ಮ ತೆಲುಗು ಸಿನಿಮಾಗಳಲ್ಲಿ ಕನ್ನಡ ಬಳಕೆ! ಕಳೆದ ಒಂದು ತಿಂಗಳಲ್ಲಿ ಬಂದ ಮೂರು ಸ್ಟಾರ್‌ ನಟರ ಸಿನಿಮಾಗಳೇ ಇದಕ್ಕೆ ಸಾಕ್ಷಿ.

ಅಖಂಡದಲ್ಲಿ ಅಬ್ಬರಿಸಿದ್ದ ಬಾಲಯ್ಯ

ಕಳೆದ ತಿಂಗಳು ಅಖಂಡ 2 ಸಿನಿಮಾ ತೆರೆಕಂಡಿತ್ತು. ಅದರಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರು ಕನ್ನಡದಲ್ಲಿ ಪಂಚಿಂಗ್‌ ಡೈಲಾಗ್‌ ಹೇಳುವ ಪ್ರಯತ್ನ ಮಾಡಿದ್ದರು. ಖಳನೊಬ್ಬ,, "ಏಯ್.. ನಾನು ಕನ್ನಡಿಗ ಕಣೋ" ಎಂದು ಹೇಳಿದಾಗ, ಬಾಲಯ್ಯ, "ಕರ್ನಾಟಕ ಈಸ್ ಮೈ ಬ್ರದರ್ಸ್ ಹೌಸ್. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ. ಕನ್ನಡ ಎಂದರೆ ಕೃಷ್ಣದೇವರಾಯನ ಹಾಗೆ ವೀರ. ದೊಡ್ಡಮನೆ ಕಂಠೀರವ ರಾಜಕುಮಾರ ಹಾಗೆ ಧೀರ. ನೀನು ಕನ್ನಡಿಗ ಅಂತ ಹೇಳುವ ಅರ್ಹತೆ ಇಲ್ಲ" ಎಂದು ಕನ್ನಡದಲ್ಲೇ ಹೇಳಿದ್ದರು.

Chiranjeevi: ಸಿನಿಮಾ ನೋಡುವಾಗಲೇ ಚಿರಂಜೀವಿ ಅಭಿಮಾನಿ ಕುಸಿದು ಬಿದ್ದು ಸಾವು

ಚಿರು ಸಿನಿಮಾದಲ್ಲೂ ಕರುನಾಡ ಪಾತ್ರ

ಸದ್ಯ ತೆರೆಕಂಡು ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡುತ್ತಿರುವ ಚಿರಂಜೀವಿ ನಟನೆಯ ʻಮನ ಶಂಕರ ವರಪ್ರಸಾದ್‌ ಗಾರುʼ ಸಿನಿಮಾದಲ್ಲಿ ಕನ್ನಡ ಡೈಲಾಗ್‌ ಮಾತ್ರವಲ್ಲ, ಕರ್ನಾಟಕ ಮೂಲದ ಪಾತ್ರಗಳನ್ನೇ ಸೃಷ್ಟಿಸಲಾಗಿದೆ. ಈ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್‌ ಅವರು ಅತಿಥಿ ಪಾತ್ರ ಮಾಡಿದ್ದು, ಅವರ ಪಾತ್ರ ಹೆಸರು ವೆಂಕಿ ಗೌಡ. ಬಳ್ಳಾರಿಯಲ್ಲಿ ಮೈನಿಂಗ್‌ ಮಾಡುವ ದೊಡ್ಡ ಉದ್ಯಮಿ ಎಂದು ಹೇಳಿಕೊಳ್ಳುವ ಈ ಪಾತ್ರದ ಬಾಯಲ್ಲಿ ಕನ್ನಡ ಡೈಲಾಗ್‌ ಹೇಳಿಸಲಾಗಿದೆ.

Akhanda 2 OTT release: ಒಟಿಟಿಗೆ ಬರ್ತಿದೆ ಬಾಲಯ್ಯ ನಟನೆಯ ‘ಅಖಂಡ 2’; ನಾಳೆಯೇ ಸ್ಟ್ರೀಮಿಂಗ್‌, ಎಲ್ಲಿ?

ಇನ್ನು, ವೆಂಕಿ ಬಾಯಲ್ಲಿ ಕನ್ನಡದ ಕೇಳುತ್ತಿದ್ದಂತೆ ಮತ್ತೊಂದು ಲೇಡಿ ಪಾತ್ರ ಕೂಡ ಕನ್ನಡದಲ್ಲೇ ಡೈಲಾಗ್‌ ಹೇಳುತ್ತಾ, ನಾನು ದಾವಣಗೆರೆಯವಳು ಎನ್ನುತ್ತದೆ. ಆಗ ವೆಂಕಿ, "ನಮ್ಮ ಅಜ್ಜ ಅಜ್ಜಿ ಅದೇ ಊರಿನವರು" ಎನ್ನುತ್ತಾರೆ. ಇಷ್ಟೊಂದು ಡೀಪ್‌ ಆಗಿ ಕರ್ನಾಕಟದ ಕನೆಕ್ಷನ್‌ ಅನ್ನು ʻಮನ ಶಂಕರ ವರಪ್ರಸಾದ್‌ ಗಾರುʼ ಸಿನಿಮಾದಲ್ಲಿ ಹೇಳಲಾಗಿದೆ.

ರವಿ ತೇಜ ಬಾಯಲ್ಲಿ ಈ ಸಲ ಕಪ್ ನಮ್ಮದೇ

ಇನ್ನು, ಜನವರಿ 13ರಂದು ರವಿ ತೇಜ ನಟನೆಯ ʻಭರ್ತ ಮಹಾಶಯುಲಕು ವಿಜ್ಞಪ್ತಿʼ ಸಿನಿಮಾವು ಉತ್ತಮ ಓಪನಿಂಗ್‌ ಪಡೆದುಕೊಂಡಿದೆ. ಈ ಸಿನಿಮಾದಲ್ಲೂ ಕನ್ನಡದ ರೆಫರೆನ್ಸ್‌ ಇದೆ. ಹೌದು, ರವಿ ತೇಜ ಅವರೇ ಸೀನ್‌ವೊಂದರಲ್ಲಿ ರಿಷಬ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ.. ಎನ್ನುತ್ತಾ, ಕೆಜಿಎಫ್‌, ಎಂಜಿ ರೋಡ್‌ ವಿಧಾನ ಸೌಧವನ್ನು ನೆನಪು ಮಾಡಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿಗೆ ಜಪ ಮಾಡಿ, ಆರ್‌ಸಿಬಿಗೆ ಜೈ ಎಂದಿದ್ದಾರೆ. ಆನಂತರ ಈ ಸಲ ಕಪ್‌ ನಮ್ಮದೇ ಎಂಬ ಡೈಲಾಗ್‌ ಕೂಡ ಹೇಳಿದ್ದಾರೆ.

ದಿಢೀರ್‌ ಅಂತ ಕನ್ನಡದ ಮೇಲೇಕೆ ಇಷ್ಟೊಂದು ಪ್ರೀತಿ?

ಹೌದು, ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಇದ್ದಕ್ಕಿದ್ದಂತೆಯೇ ತೆಲುಗು ಚಿತ್ರರಂಗಕ್ಕೆ ಕನ್ನಡದ ಮೇಲೆ ಇಷ್ಟೊಂದು ಪ್ರೀತಿ ಬಂದಿದ್ದೇಕೆ ಎಂಬುದು. ಅದಕ್ಕೆ ಕಾರಣ, ಮಾರುಕಟ್ಟೆ ವಿಸ್ತರಣೆ ಅನ್ನೋದೇ ಪ್ರಮುಖ ಅಂಶ. ಹೌದು, ಹೇಗಿದ್ದರೂ ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ದೊಡ್ಡಮಟ್ಟದ ಗಳಿಕೆ ಮಾಡುತ್ತಿವೆ. ಹೀಗೆ ಸಿನಿಮಾದೊಳಗೆ ಕನ್ನಡದ ಬಗ್ಗೆ ಹೇಳಿದಾಗ ಕನ್ನಡ ಪ್ರೇಕ್ಷಕರನ್ನು ಸೆಳೆಯಲು ಇದು ಮತ್ತೊಂದು ಅಂಶವಾಗಬಹುದು ಎಂಬ ಉದ್ದೇಶ ಇದರಲ್ಲಿದೆ. ಹಾಗಾಗಿ, ಪರಭಾಷೆಯ ಕಲಾವಿದರ ಬಾಯಲ್ಲೂ ಈಗ ಕನ್ನಡ ನಲಿದಾಡುತ್ತಿದೆ.