ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranveer Singh: ʻಧುರಂಧರ್‌ʼ ಸಿನಿಮಾಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ರಾ ರಾಹುಲ್‌ ಗಾಂಧಿ? ನೆಟ್ಟಿಗರು ತಲೆಗೆ ಹುಳ ಬಿಟ್ಟುಕೊಂಡಿದ್ದೇಕೆ?

Dhurandhar Film: ರಣವೀರ್ ಸಿಂಗ್ ನಟನೆಯ ಸೂಪರ್‌ ಹಿಟ್‌ ಸಿನಿಮಾ 'ಧುರಂಧರ್‌' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದರೆ, ಇದರ ಪೋಸ್ಟರ್‌ನಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರೆಂಡ್ ಆಗಿದ್ದಾರೆ. ಪೋಸ್ಟರ್‌ನಲ್ಲಿ ಕಾರ್ಯಕಾರಿ ನಿರ್ಮಾಪಕರು (Executive Producer) ಎಂಬಲ್ಲಿ 'ರಾಹುಲ್‌ ಗಾಂಧಿ' ಹೆಸರು ಇರುವುದು ಗೊಂದಲಕ್ಕೆ ಕಾರಣವಾಗಿದೆ.

ರಣವೀರ್‌ ಸಿಂಗ್, ಸಾರಾ ಅರ್ಜುನ್‌, ಅಕ್ಷಯ್‌ ಖನ್ನಾ, ಸಂಜಯ್‌ ದತ್‌ ಮುಂತಾದವರು ನಟಿಸಿರುವ ʻಧುರಂಧರ್ʼ‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಈ ಮಧ್ಯೆ ʻಧುರಂಧರ್ʼ‌ ಚಿತ್ರದಿಂದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ರೆಂಡ್‌ ಆಗಿದ್ದಾರೆ. ಅಚ್ಚರಿ ಎನಿಸಿದರೂ ಇದು ನಿಜ. ಹೌದು, ಇಂಥದ್ದೊಂದು ಬೆಳವಣಿಗೆ ನಡೆಯೋದಕ್ಕೆ ʻಧುರಂಧರ್‌ʼ ಸಿನಿಮಾದ ಪೋಸ್ಟರ್‌ನಲ್ಲಿ ರಾಹುಲ್‌ ಗಾಂಧಿ ಅವರ ಹೆಸರು ಇರುವುದೇ ಇದಕ್ಕೆಲ್ಲಾ ಕಾರಣ!

ʻಧುರಂಧರ್‌ʼ ಪೋಸ್ಟರ್‌ನಲ್ಲಿ ರಾಹುಲ್‌ ಗಾಂಧಿ ಹೆಸರು

ಹೌದು, ʻಧುರಂಧರ್‌ʼ ಚಿತ್ರದ ಪೋಸ್ಟರ್‌ನಲ್ಲಿ ರಾಹುಲ್‌ ಗಾಂಧಿ ಹೆಸರಿದೆ. ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ರಾಹುಲ್‌ ಗಾಂಧಿ ಕೆಲಸ ಮಾಡಿದ್ದಾರೆ ಎಂದು ಪೋಸ್ಟರ್‌ನಲ್ಲಿ ಹಾಕಲಾಗಿದೆ. ಅರೇ, ರಾಜಕಾರಣ ಬಿಟ್ಟು ರಾಹುಲ್‌ ಗಾಂಧಿ ಸಿನಿಮಾರಂಗದಲ್ಲಿ ತೊಡಗಿಸಿಕೊಂಡರೇ? ಅವರಿಗೆ ಇರುವ ಕೆಪಾಸಿಟಿಗೆ ನಿರ್ಮಾಪಕರೇ ಆಗಬಹುದಿತ್ತು. ಆದರೆ ಕಾರ್ಯಕಾರಿ ನಿರ್ಮಾಪಕರಾಗಿದ್ದೇಕೆ ಎಂಬೆಲ್ಲ ಪ್ರಶ್ನೆಗಳು ನೆಟ್ಟಿಗರ ತಲೆ ಕೆಡಿಸಿವೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಅಲ್ಲದೆ, ಈ ಚಿತ್ರಕ್ಕೆ ಕೆಲ ಎಡಪಂಥೀಯರಿಂದ ವಿರೋಧ ವ್ಯಕ್ತವಾಗಿದೆ. ಜೊತೆಗೆ ಕಾಂಗ್ರೆಸ್‌ ಪಕ್ಷದ ಸಿದ್ಧಾಂತಗಳಿಗೆ ʻಧುರಂಧರ್‌ʼ ಚಿತ್ರ ಹೊಂದುವುದಿಲ್ಲ. ಆದರೂ ಈ ಸಿನಿಮಾಕ್ಕೆ ರಾಹುಲ್‌ ಗಾಂಧಿ ಕೆಲಸ ಮಾಡಿದ್ದೇಕೆ ಎಂಬ ಗಂಭೀರ ಪ್ರಶ್ನೆಗಳು ಕೂಡ ನೆಟ್ಟಿಗರ ತಲೆ ಕೆಡಿಸಿವೆ. ಆದರೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ, ಧುರಂಧರ್ ಸಿನಿಮಾಕ್ಕೂ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿಗೂ ಯಾವುದೇ ಸಂಬಂಧವಿಲ್ಲ!

ರಾಹುಲ್‌ ಗಾಂಧಿ ಪೋಸ್ಟರ್‌ ಕುರಿತ ಟ್ವೀಟ್‌



ಈ ರಾಹುಲ್‌ ಗಾಂಧಿಯೇ ಬೇರೆ!

ಯಾವಾಗ ಧುರಂಧರ್‌ ಪೋಸ್ಟರ್‌ನಿಂದಾಗಿ ಇಂಥದ್ದೊಂದು ಚರ್ಚೆ ಶುರುವಾಯಿತೋ, ಗೊಂದಲ ಹೆಚ್ಚಾಯಿತು. ಆದರೆ ಅಸಲಿಗೆ ಪೋಸ್ಟರ್‌ನಲ್ಲಿರುವ ರಾಹುಲ್‌ ಗಾಂಧಿಯೇ ಬೇರೆ. ಇವರು ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಫೇಮಸ್‌ ಆಗಿದ್ದಾರೆ. ಇವರು ಅಕ್ಷಯ್ ಕುಮಾರ್ ಅವರ ರುಸ್ತಂ, ದಿ ಫ್ಯಾಮಿಲಿ ಮ್ಯಾನ್, ರಾಕೆಟ್ ಬಾಯ್ಸ್, ಬ್ಲರ್, ಫರ್ಜಿ ಮತ್ತು ಲಕ್ಕಿ ಭಾಸ್ಕರ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ರಾಹುಲ್‌ ಗಾಂಧಿ ಪೋಸ್ಟರ್‌ ಕುರಿತ ಟ್ವೀಟ್‌



ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ʻಧುರಂಧರ್‌ʼ

ʻಧುರಂಧರ್‌ʼ ಸಿನಿಮಾದ ಅಬ್ಬರ ಬಾಕ್ಸ್ ಆಫೀಸ್‌ನಲ್ಲಿ ಜೋರಾಗಿದೆ. 10 ದಿನಗಳಲ್ಲಿ 554 ಕೋಟಿ ರೂ. ಗಳಿಸಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮೊದಲ ದಿನ 28 ಕೋಟಿ ರೂ. ಗಳಿಸಿದ್ದ ಈ ಸಿನಿಮಾ, 10ನೇ ದಿನ 58 ಕೋಟಿ ರೂ. ಗಳಿಸಿದೆ. ಸದ್ಯದ ಗಳಿಕೆಯ ಟ್ರೆಂಡ್ ನೋಡಿದರೆ, 'ಧುರಂಧರ್‌' ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ. ಆದಿತ್ಯ ಧರ್‌ ನಿರ್ಮಾಣ ಮಾಡಿ, ನಿರ್ದೇಶಿಸಿರುವ ಈ ಸಿನಿಮಾದ ಪಾರ್ಟ್‌ 2 ಮಾರ್ಚ್‌ 19ರಂದು ತೆರೆಗೆ ಬರುವ ಸಾಧ್ಯತೆ ಇದೆ.