Ranveer Singh: 6 ದೇಶಗಳಲ್ಲಿ 'ಧುರಂಧರ್' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್! ಈವರೆಗೂ ಆಗಿರುವ ಗಳಿಕೆ ಎಷ್ಟು?
Dhurandhar Box Office Collection: ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರುದ್ರತಾಂಡವ ಆಡಿದೆ. ಆರಂಭಿಕ ನೆಗೆಟಿವ್ ಪ್ರತಿಕ್ರಿಯೆಗಳ ನಡುವೆಯೂ ಗಳಿಕೆ ಹೆಚ್ಚಿದೆ. ಕೇವಲ ಏಳು ದಿನಗಳಲ್ಲಿ ಚಿತ್ರವು ಭಾರತ ಮತ್ತು ವಿದೇಶದ ಗಳಿಕೆ ಸೇರಿ ₹300 ಕೋಟಿ ಕ್ಲಬ್ ಸೇರಿದೆ.
-
ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ರುದ್ರತಾಂಡವ ಆಡ್ತಿದೆ. ಈ ಚಿತ್ರಕ್ಕೆ ಆರಂಭದಲ್ಲಿ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕರೂ, ನಂತರ ಆಡಿಯೆನ್ಸ್ ಸಂಖ್ಯೆ ಹೆಚ್ಚಳ ಆಗಿದೆ. ಭಾರತ-ಪಾಕಿಸ್ತಾನ ಬೇಹುಗಾರಿಕೆ ಕುರಿತ ಕಥೆಯನ್ನು ಹೊಂದಿರುವ ಈ ಸಿನಿಮಾವು ಇದೀಗ ಒಂದಷ್ಟು ದೇಶಗಳಲ್ಲಿ ಬ್ಯಾನ್ ಆಗಿದೆ. ಆದರೂ ಗಳಿಕೆಯಲ್ಲಿ ಮಾತ್ರ ಏನೂ ತಗ್ಗಿಲ್ಲ.
ಒಂದು ವಾರಕ್ಕೆ ಆಗಿರುವ ಗಳಿಕೆ ಎಷ್ಟು?
ಡಿಸೆಂಬರ್ 5ರಂದು ಈ ಸಿನಿಮಾವು ಭಾರತದಲ್ಲಿ 28.60 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ಏಳನೇ ದಿನದ ಗಳಿಕೆಯು ಅಚ್ಚರಿ ಮೂಡಿಸಿದೆ. ಏಕೆಂದರೆ, ಮೊದಲ ದಿನದ ಗಳಿಕೆಗಿಂತ ಏಳನೇ ದಿನದ ಗಳಿಕೆಯು ಜಾಸ್ತಿಯಿದೆ.
ಶುಕ್ರವಾರ : 28.60 ಕೋಟಿ ರೂಪಾಯಿ
ಶನಿವಾರ : 33.10 ಕೋಟಿ ರೂಪಾಯಿ
ಭಾನುವಾರ : 44.80 ಕೋಟಿ ರೂಪಾಯಿ
ಸೋಮವಾರ : 24.30 ಕೋಟಿ ರೂಪಾಯಿ
ಮಂಗಳವಾರ : 28.60 ಕೋಟಿ ರೂಪಾಯಿ
ಬುಧವಾರ : 29.20 ಕೋಟಿ ರೂಪಾಯಿ
ಗುರುವಾರ : 29.40 ಕೋಟಿ ರೂಪಾಯಿ
ಒಟ್ಟು ಭಾರತದಲ್ಲಿ 218 ಕೋಟಿ ರೂಪಾಯಿ ಹಣವನ್ನು ʻಧುರಂಧರ್ʼ ಸಿನಿಮಾವು ಭಾರತದಲ್ಲಿ ಬಾಚಿಕೊಂಡಿದೆ. ಇದಕ್ಕೆ ವಿದೇಶದ ಗಳಿಕೆಯನ್ನು ಸೇರಿಸಿದರೆ, 300 ಕೋಟಿ ರೂ. ಆಗಲಿದೆ. ಅಲ್ಲಿಗೆ ಮೊದಲ ಏಳು ದಿನಗಳಿಗೆ ಈ ಚಿತ್ರವು 300 ಕೋಟಿ ರೂ. ಕ್ಲಬ್‌ಗೆ ಸೇರಿದಂತೆ ಆಗಲಿದೆ.
ಧುರಂಧರ್ ಬಾಕ್ಸ್ ಆಫೀಸ್ ಕಲೆಕ್ಷನ್
'DHURANDHAR' IS A BLOCKBUSTER... #Dhurandhar hits it out of the stadium, posting phenomenal numbers in its opening week... The weekday performance, in particular, has been an eye-opener.
— taran adarsh (@taran_adarsh) December 12, 2025
Thursday [Day 7] is HIGHER than Monday [Day 4], Tuesday [Day 5], and Wednesday [Day 6]... In… pic.twitter.com/0Q1CIvT66G
ʻಧುರಂಧರ್ʼ ಸಿನಿಮಾ ಬ್ಯಾನ್ ಆಗಿರುವುದು ಏಕೆ?
ಈ ನಡುವೆ ʻಧುರಂಧರ್ʼ ಸಿನಿಮಾವನ್ನು 6 ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಹೌದು, ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ದೇಶಗಳಲ್ಲಿ ಧುರಂಧರ್ ರಿಲೀಸ್ ಆಗೋದಿಲ್ಲ. ಕಾರಣವೇನು? ಯಾವ ಸಿನಿಮಾದಲ್ಲಿ ಪಾಕಿಸ್ತಾನ ವಿರೋಧಿ ಅಂಶ ಇರುತ್ತದೋ, ಅಂತಹ ಸಿನಿಮಾಗಳು ಈ ದೇಶಗಳಲ್ಲಿ ರಿಲೀಸ್ ಆಗೋದಿಲ್ಲ. ಈ ಹಿಂದೆ ‘ಸ್ಕೈ ಫೋರ್ಸ್’, ‘ಫೈಟರ್’, ‘ಆರ್ಟಿಕಲ್ 370’, ‘ಟೈಗರ್ 3’ ಚಿತ್ರಗಳನ್ನು ಕೂಡ ಈ ದೇಶಗಳಲ್ಲಿ ನಿಷೇಧ ಮಾಡಲಾಗಿತ್ತು. ಸದ್ಯ ಧುರಂಧರ್ ತಂಡವು ಈ ದೇಶಗಳಲ್ಲಿ ತಮ್ಮ ಸಿನಿಮಾವನ್ನು ರಿಲೀಸ್ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿತು. ಆದರೆ ಅದು ಸಾಧ್ಯವಾಗಲಿಲ್ಲ. ಅಲ್ಲಿನ ಸೆನ್ಸಾರ್ ಮಂಡಳಿ ಅದಕ್ಕೆ ಒಪ್ಪಿಗೆ ನೀಡಿಲ್ಲ.
ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಮಾಧವನ್ ಅವರು ‘ಧುರಂಧರ್’ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಇನ್ನು ಅಕ್ಷಯ್ ಖನ್ನಾ ಅವರು ರೆಹಮಾನ್ ಡಕಾಯಿತ್ ಎಂಬ ಪಾತ್ರ ಮಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.