ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Daali Dhananjaya: ಧನಂಜಯ್ ನಟನೆಯ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್!

Daali Dhananjaya: ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ ‘ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ’ ಎಂಬ ಮಾಸ್ ಡ್ಯಾನ್ಸ್ ನಂಬರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಬರೋಬ್ಬರಿ 5 ಮಿಲಿಯನ್ (50 ಲಕ್ಷ) ವೀಕ್ಷಣೆಗಳ ಗಡಿ ತಲುಪುವ ಮೂಲಕ ಧೂಳೆಬ್ಬಿಸುತ್ತಿದೆ. ಕೇವಲ ಯೂಟ್ಯೂಬ್ ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲೂ ಈ ಹಾಡು ಹೊಸ ದಾಖಲೆ ಬರೆದಿದೆ.

ಡಾಲಿ ಧನಂಜಯ್‌

ಡಾಲಿ ಧನಂಜಯ್ (dalli Dhananjay) ನಟನೆಯ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ ‘ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ’ (O Puttamalli) ಎಂಬ ಮಾಸ್ ಡ್ಯಾನ್ಸ್ ನಂಬರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಬರೋಬ್ಬರಿ 5 ಮಿಲಿಯನ್ (50 ಲಕ್ಷ) ವೀಕ್ಷಣೆಗಳ ಗಡಿ ತಲುಪುವ ಮೂಲಕ ಧೂಳೆಬ್ಬಿಸುತ್ತಿದೆ. ಕೇವಲ ಯೂಟ್ಯೂಬ್ ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲೂ ಈ ಹಾಡು ಹೊಸ ದಾಖಲೆ ಬರೆದಿದ್ದು, ಈಗಾಗಲೇ 50 ಸಾವಿರಕ್ಕೂ ಅಧಿಕ ರೀಲ್ಸ್‌ಗಳು ಈ ಟ್ಯೂನ್‌ಗೆ ಹರಿದುಬಂದಿವೆ.

ʻಎಕ್ಕʼ ಚಿತ್ರದ ‘ಬ್ಯಾಂಗಲ್ ಬಂಗಾರಿ’ ಹಾಡಿನ ಯಶಸ್ಸಿನ ಬಳಿಕ, ಮತ್ತೊಂದು ಬಿಗ್ಗೆಸ್ಟ್ ಚಾರ್ಟ್‌ಬಸ್ಟರ್ ಸಾಂಗ್ ಆಗಿ ‘ಓ ಪುಟ್ಟಮಲ್ಲಿ’ ಹೊರಹೊಮ್ಮಿದೆ. ವಾಸುಕಿ ವೈಭವ್ ಅವರ ಮಾಸ್ ಬೀಟ್ಸ್‌ಗೆ ನಿರ್ದೇಶಕ ಚೇತನ್ ಕುಮಾರ್ ಪೆನ್ನಿನಿಂದ ಸಾಹಿತ್ಯ ಮೂಡಿಬಂದಿದ್ದು, ಖ್ಯಾತ ಗಾಯಕ ಸಂಜಿತ್ ಹೆಗ್ಡೆ ತಮ್ಮ ವಿಶಿಷ್ಟ ಕಂಠದಲ್ಲಿ ಈ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ದೊಡ್ಮನೆಗೆ ಎಂಟ್ರಿ ಕೊಟ್ಟ ಈ ಮೂವರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಜಾತಕ ಇಲ್ಲಿದೆ ನೋಡಿ!

ಧನಂಜಯ್ ಅವರ ಇತ್ತೀಚಿನ ಕರಿಯರ್‌ನಲ್ಲೇ ಒಂದು ಪಕ್ಕಾ ಕಮರ್ಷಿಯಲ್ ಡ್ಯಾನ್ಸ್ ನಂಬರ್ ಇದಾಗಿದ್ದು, ನಾಯಕಿ ರೀಷ್ಮಾ ನಾಣಯ್ಯ ಜೊತೆಗೂಡಿ ಡಾಲಿ ಹೆಜ್ಜೆ ಹಾಕಿರುವ ರೀತಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ಭೂಷಣ್ ಮಾಸ್ಟರ್ ಕೋರಿಯೋಗ್ರಫಿ ಮಾಡಿರೋ ಈ ಹಾಡು ರಿಯಾಲಿಟಿ ಷೋ ಗಳಲ್ಲಿ ಫೇವರೇಟ್ ಆಗಿದೆ. ಇವರಿಬ್ಬರ ಸ್ಟೆಪ್ಸ್ ಹಾಗೂ ಎನರ್ಜಿ ಈ ಹಾಡನ್ನು ಸಿನಿಮಾಗೆ ದೊಡ್ಡ ಮಟ್ಟದ ಮೈಲೇಜ್ ತಂದುಕೊಡುವಂತೆ ಮಾಡಿದೆ.



‘ಬಡವ ರಾಸ್ಕಲ್’ ಎಂಬ ಹಿಟ್ ಸಿನಿಮಾ ನೀಡಿದ್ದ ಶಂಕರ್ ಗುರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಐರಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ. ಹಟ್ಟಿಹೊಳಿ ಹಾಗೂ ಮೃಣಾಲ್ ಮತ್ತು ರಾಯಲಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸತ್ಯ ರಾಯಲ ಹಾಗೂ ಜಾನ್ವಿ ರಾಯಲ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಛಾಯಾಗ್ರಹಣ ಮಾಡಿದ್ದಾರೆ.

ಈ ಚಿತ್ರದಲ್ಲಿ ಡಾಲಿ ಧನಂಜಯ್ ಹಾಗೂ ರೀಷ್ಮಾ ನಾಣಯ್ಯ ಜೊತೆಗೆ ಹಿರಿಯ ನಟಿ ಉಮಾಶ್ರೀ, ರಂಗಾಯಣ ರಘು, ಹಾಸ್ಯ ನಟ ಸಾಧು ಕೋಕಿಲ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ಪ್ರತಿಭಾವಂತ ಕಲಾವಿದರ ಬಹುದೊಡ್ಡ ತಾರಾಗಣವಿದೆ.

ಇದನ್ನೂ ಓದಿ: Bigg Boss Kannada 13: ಅಸಹ್ಯ ನೀನು, ತಂದು ಹಾಕಿ ತಮಾಷೆ ನೋಡೋ ವ್ಯಕ್ತಿತ್ವ ಎಂದು ಕಿರಣ್‌ ಮೇಲೆ ಗಾನವಿ ಗರಂ

ಹಾಡಿನ ಮೂಲಕವೇ ಹೊಸ ಹವಾ ಸೃಷ್ಟಿಸಿರುವ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಇದೇ ಡಿಸೆಂಬರ್ 24ರಂದು ಗ್ರ್ಯಾಂಡ್‌ ಆಗಿ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.

Yashaswi Devadiga

View all posts by this author