ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಅಸಹ್ಯ ನೀನು, ತಂದು ಹಾಕಿ ತಮಾಷೆ ನೋಡೋ ವ್ಯಕ್ತಿತ್ವ ಎಂದು ಕಿರಣ್‌ ಮೇಲೆ ಗಾನವಿ ಗರಂ

Bigg Boss Kannada 13: ಕಿರಣ್ ಶಾಸ್ತ್ರಿ ಮತ್ತು ಯಶಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ ಅವರು ಶಾಕ್ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಯಶಸ್ ಮತ್ತು ಶಾಸ್ತ್ರಿಯನ್ನು ವಾಪಸ್ ವಿಮಾನಕ್ಕೆ ಕಳಿಸಿದ್ದಾರೆ. ಇವರಿಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಅರ್ಹತೆ ಇಲ್ಲ ಎಂದು ಗಾನವಿ ಅವರು ಮುಲಾಜಿಲ್ಲದೇ ಹೇಳಿದ್ದಾರೆ.ಇನ್ನು ಕಿರಣ್‌ ಅವರು ನಾಮಿನೇಟ್‌ ಮಾಡಿದ್ದಾರೆ ಗಾನವಿ.

ತಂದು ಹಾಕಿ ತಮಾಷೆ ನೋಡೋ ವ್ಯಕ್ತಿತ್ವ ಎಂದು ಕಿರಣ್‌ ಮೇಲೆ ಗಾನವಿ ಗರಂ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 29, 2026 8:34 AM

ಕಿರಣ್ ಶಾಸ್ತ್ರಿ ಮತ್ತು ಯಶಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ (Ganvi Gowda) ಅವರು ಶಾಕ್ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಯಶಸ್ ಮತ್ತು ಶಾಸ್ತ್ರಿಯನ್ನು (Kiran Shastri) ವಾಪಸ್ ವಿಮಾನಕ್ಕೆ ಕಳಿಸಿದ್ದಾರೆ. ಇವರಿಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಅರ್ಹತೆ ಇಲ್ಲ ಎಂದು ಗಾನವಿ ಅವರು ಮುಲಾಜಿಲ್ಲದೇ ಹೇಳಿದ್ದಾರೆ.ಇನ್ನು ಕಿರಣ್‌ ಅವರು ನಾಮಿನೇಟ್‌ ಮಾಡಿದ್ದಾರೆ ಗಾನವಿ.

ತಂದು ಹಾಕಿ ತಮಾಷೆ ನೋಡೋ ನೇಚರ್‌ ನನಗೆ ಚೂರು ಇಷ್ಟ ಇಲ್ಲ ಎಂದರು ಗಾನವಿ. ಅಸಹ್ಯದಲ್ಲಿ ಅಸಹ್ಯ ಅಂತನೇ ನಿನ್ನ ನಾಮಿನೇಟ್‌ ಮಾಡ್ತಾ ಇರೋದು ಎಂದು ಕಿರಣ್‌ ಬಗ್ಗೆ ಗಾನವಿ ಹೇಳಿದ್ರು. ಇದಕ್ಕೆ ಕೋಪಗೊಂಡ ಕಿರಣ್‌, ನನ್ನನ್ನ ಜಡ್ಜ್‌ ಮಾಡೋದಾ? ಯೋಗ್ಯತೆನೆ ಇಲ್ಲ ಎಂದಿದ್ದಾರೆ. ಪ್ರಶಾಂತ್‌ ಕೂಡ ಕಿರಣ್‌ ವಿರುದ್ಧ ತಿರುಗಿ ಬಿದ್ದರು.

ಇದನ್ನೂ ಓದಿ: Bigg Boss Kannada 13: ದೊಡ್ಮನೆಗೆ ಎಂಟ್ರಿ ಕೊಟ್ಟ ಈ ಮೂವರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಜಾತಕ ಇಲ್ಲಿದೆ ನೋಡಿ!

ಗಾನವಿ ಗೌಡ ಅವರು ಹೈಜಾಕರ್ ಆಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಕಿರಣ್ ಶಾಸ್ತ್ರಿ ಮತ್ತು ಯಶಸ್ ಅವರನ್ನು ಹೈಜಾಕ್ ಮಾಡಿದ್ದು ಯಾಕೆ ಎಂದು ಗಾನವಿ ಅವರು ಕಾರಣ ನೀಡಿದರು.ನಿಮ್ಮ ವ್ಯಕ್ತಿತ್ವ ನನಗೆ ಇಷ್ಟ ಇಲ್ಲ. ಈ ಮನೆಯಲ್ಲಿ ಇರಲು ನೀವು ಅನರ್ಹ’ ಎಂದು ಗಾನವಿ ಗೌಡ ಹೇಳಿದರು.ಬರೀ ದೇವಿ ಹೂ ಕೊಡು ಅಂತ ಹೇಳಿರೋದು ಅಷ್ಟೇ ನೀವು.

ನಿಮ್ಮನ್ನು ಹೊರಗಡೆಯಿಂದ ನೋಡಿಕೊಂಡು ಬಂದೇ ಈ ನಿರ್ಧಾರ ತೆಗೆದುಕೊಂಡಿರುವುದು’ ಎಂದರು.ಗಾನವಿ ಗೌಡ ಎದುರುಗಡೆ ಇದ್ದಾಗ ಕಿರಣ್ ಶಾಸ್ತ್ರಿ ಅವರು ‘ಮೇಡಂ, ಅಕ್ಕಾ..’ ಎಂದು ಗೌರವದಿಂದ ಮಾತನಾಡಿದರು. ಆದರೆ ವಿಮಾನದ ಒಳಗೆ ಹೋದ ಬಳಿಕ ‘ನನ್ನೇ ಹೈಜಾಕ್ ಮಾಡಿದಳು ಈ ಯಮ್ಮಾ’ ಎಂದು ಏಕವಚನದಲ್ಲಿ ಮಾತು ಆರಂಭಿಸಿದರು.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

‘ಯಶಸ್ ಅವರ ಕೊಡುಗೆ ಈ ಶೋನಲ್ಲಿ ಕಾಣಿಸುತ್ತಿಲ್ಲ. ಅವರಿಗೆ ಸಾಮರ್ಥ್ಯ ಇದೆ. ಆದರೆ ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಅರ್ಹರಲ್ಲ’ ಎಂದು ಗಾನವಿ ಗೌಡ ಅವರು ಹೇಳಿದರು.