ಇಮ್ಮಡಿ ಪುಲಿಕೇಶಿ ಪಾತ್ರಕ್ಕೆ ಜನಪ್ರಿಯ ನಟ ಡಾಲಿ ಧನಂಜಯ್ (Dally Dhananjay) ಆಯ್ಕೆಯಾಗಿದ್ದು, ಈ ಘೋಷಣೆಯೊಂದಿಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿರೋದು ಗೊತ್ತೇ ಇದೆ. 1966ರಲ್ಲಿ ಇದೇ ಪಾತ್ರದಲ್ಲಿ ಡಾ. ರಾಜ್‌ಕುಮಾರ್ ಅವರು ಅಭಿನಯಿಸಿ ಇತಿಹಾಸ ಸೃಷ್ಟಿಸಿದ್ದರು. ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಎಸ್‌ಆರ್‌ಕೆ ಪ್ರೋಡಕ್ಷನ್ ಅಡಿ ಇಮ್ಮಡಿ ಪುಲಕೇಶಿ (immadi pulikeshi) ತೆರೆ ಮೇಲೆ ಬರಲಿದೆ. ಈ ಸುದ್ದಿ ಬೆನ್ನಲ್ಲೇ ಡಾಲಿ ಇನ್ನೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಬಗ್ಗೆ ಖುದ್ದು ನಟ ಡಾಲಿ ಧನಂಜಯ್ ಅವರು 'ಉದಯ ಕನ್ನಡಿಗ 2025' (Udaya Kannadiga) ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ವೇದಿಕೆಯಲ್ಲಿ ನಟ ಹೇಳಿದ್ದೇನು?
ವೇದಿಕೆಗೆ ಆಗಮಿಸಿದ ನಟ, ಒಂದು ಗುಲಾಬಿ ನನ್ನ ಹೆಂಡತಿಗೆ, ಇನ್ನೊಂದು ನನ್ನ ಬದುಕಿಗೆ ಬರುತ್ತಿರುವ ಹೊಸ ಜೀವಕ್ಕೆ ಅಂತ ಹೇಳಿಕೊಂಡಿದ್ದಾರೆ. ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆಯಾಗಿ ಒಂದು ವರುಷಗಳು ಆಗುತ್ತಾ ಬಂದಿದೆ.
ಈ ಜೋಡಿ ಸಾಕಷ್ಟು ಕಡೆ ಟ್ರಾವೆಲ್ ಮಾಡಿರುವ ಫೋಟೊಗಳನ್ನು ಹಂಚಿಕೊಂಡಿತ್ತು. ಮೂಲತಃ ವೈದ್ಯೆಯಾಗಿರುವ ಡಾಲಿ ಪತ್ನಿ ಧನ್ಯತಾ, ಟ್ರಾವೆಲ್ ಪ್ರಿಯೆ ಕೂಡ ಹೌದು, ಇ ತಮ್ಮ ತಾಯಿ, ಅಕ್ಕ, ಅಕ್ಕನ ಗಂಡ ಹಾಗೂ ಮಗನ ಜೊತೆ ಮಾರೀಶಿಯಸ್ ಗೆ ಟ್ರಾವೆಲ್ ಮಾಡಿದ್ದರು.
ಬೇಬಿ ಬಂಪ್ ಫೋಟೋ ವೈರಲ್
ಧನ್ಯತಾ ಹಂಚಿಕೊಂಡಿರುವ ಫೋಟೊಗಳಲ್ಲಿ ಪುಟ್ಟದಾದ ಬೇಬಿ ಬಂಪ್ ಕಾಣಿಸಿಕೊಂಡಿತ್ತು. ಕೆಲವರು ಕಂಗ್ರಾಟ್ಸ್ ಎಂದು ಹೇಳಿದರೆ, ಮತ್ತೆ ಕೆಲವರು ಗುಡ್ ನ್ಯೂಸ್ ಎಂದು ಕಮೆಂಟ್ ಮಾಡಿದ್ದರು.
ಕನ್ನಡದ ಸ್ಟಾರ್ ನಟ ಧನಂಜಯ್ ಹಾಗೂ ವೈದ್ಯೆ, ಗೈನಕಾಲಜಿಸ್ಟ್ ಆಗಿರುವ ಡಾ. ಧನ್ಯತಾ ವಿವಾಹವು ಕಳೆದ ವರ್ಷ ಫೆಬ್ರುವರಿ 16 ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಲಕ್ಷಾಂತರ ಜನರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೀಗ ಮದುವೆಯಾಗಿ ವರ್ಷ ಕಳೆಯೋದ್ರೊಳಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಧನಂಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಹಲಗಲಿ, 666 ಆಪರೇಷನ್ ಡ್ರೀಮ್ ಥಿಯೇಟರ್ ನಡೆಯುತ್ತಿದೆ.
ಇದನ್ನೂ ಓದಿ: Hayagrriva Teaser: ‘ಹಯಗ್ರೀವ‘ ಟೀಸರ್ ಔಟ್; ಅಬ್ಬರಿಸಿದ ಧನ್ವೀರ್, ಪಾತ್ರ ಏನು?
‘ಇಮ್ಮಡಿ ಪುಲಿಕೇಶಿ’ ಸಿನಿಮಾ ಘೋಷಣೆ
ಚಿತ್ರ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಹ ಕೈಜೋಡಿಸಲಿದ್ದು, ಬಾದಮಿಯ ಐತಿಹಾಸಿಕ ಹಿನ್ನೆಲೆಯನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತರಲು ತಂಡ ಸಿದ್ಧತೆ ನಡೆಸುತ್ತಿದೆ. ಕನ್ನಡ ಇತಿಹಾಸ, ಸಂಸ್ಕೃತಿ ಮತ್ತು ಶೌರ್ಯವನ್ನು ಹೊಸ ದೃಷ್ಟಿಕೋನದಲ್ಲಿ ತೋರಿಸಲು ಉದ್ದೇಶಿಸಿರುವ ‘ಇಮ್ಮಡಿ ಪುಲಿಕೇಶಿ’ ಸಿನಿಮಾ ಈಗಿನಿಂದಲೇ ಭಾರೀ ನಿರೀಕ್ಷೆ ಮೂಡಿಸಿದೆ.