Hayagrriva Teaser: ‘ಹಯಗ್ರೀವ‘ ಟೀಸರ್ ಔಟ್; ಅಬ್ಬರಿಸಿದ ಧನ್ವೀರ್, ಪಾತ್ರ ಏನು?
Dhanveerah Gowda: ನಟ ಧನ್ವಿರ್ ಅವರು ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ ಬಂದರೂ ಕೂಡ ದೊಡ್ಡ ದೊಡ್ಡ ನಟ ನಟಿಯರ ಒಡನಾಟ ಅವರಿಗೆ ಮೊದಲಿನಿಂದಲೂ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ಅ ಭಿಮಾನಿಯಾದ ಇವರು ಮೊದಲಿನಿಂದಲೂ ನಟ ದರ್ಶನ್ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಧನ್ವೀರ್ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ವಿಜಯಲಕ್ಷ್ಮೀ ದರ್ಶನ್ ಕೂಡ ಪೋಸ್ಟ್ ಹಂಚಿಕೊಂಡು ಸಾಥ್ ನೀಡಿದ್ದಾರೆ.
ನಟ ಧನ್ವೀರ್ -
ನಟ ಧನ್ವಿರ್ (dhanveerah Gowda) ಅವರು ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ (Cinema) ಬಂದರೂ ಕೂಡ ದೊಡ್ಡ ದೊಡ್ಡ ನಟ ನಟಿಯರ ಒಡನಾಟ ಅವರಿಗೆ ಮೊದಲಿನಿಂದಲೂ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿಮಾನಿಯಾದ ಇವರು ಮೊದಲಿನಿಂದಲೂ ನಟ ದರ್ಶನ್ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಅರೆಸ್ಟ್ ಆದ ಬಳಿಕ ದರ್ಶನ್ ಪರ ಹಾಗೂ ಅವರ ಅಭಿಮಾನಿಗಳ ಪರ ನಿಲ್ಲುವ ಮೂಲಕ ನಟ ಧನ್ವಿರ್ ಅವರು ಮತ್ತೆ ಮುನ್ನಲೆಗೆ ಬಂದಿದ್ದರು. ಇದೀಗ ಧನ್ವೀರ್ ನಟನೆಯ ‘ಹಯಗ್ರೀವ‘( Hayagrriva Teaser) ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಪೊಲೀಸ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ ನಟ. ವಿಜಯಲಕ್ಷ್ಮೀ ದರ್ಶನ್ ಕೂಡ ಪೋಸ್ಟ್ ಹಂಚಿಕೊಂಡು ಸಾಥ್ ನೀಡಿದ್ದಾರೆ.
ಸಿನಿಮಾ ರಿಲೀಸ್ ಯಾವಾಗ?
ಆನಂದ್ ಯುಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. ಫೆ. 27 ರಂದು ಸಿನಿಮಾ ತೆರೆಗೆ ಬರುತ್ತಿದೆ. ಇನ್ನು, ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನ್ವಿರ್‌ಗೆ ಜೋಡಿಯಾಗಿ ಸಲಗ' ಖ್ಯಾತಿಯ ಸಂಜನಾ ಆನಂದ್ ನಟಿಸಿದ್ದಾರೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Pawan Wadeyar: ವಿಜಯ ರಾಘವೇಂದ್ರ ಸಿನಿಮಾಗೆ ಪವನ್ ಒಡೆಯರ್ ಸಾಥ್!
ಧ್ವನ್ವೀರ್ ಅವರು ತುಂಬಾನೆ ಚೆನ್ನಾಗಿಯೇ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇಡೀ ಚಿತ್ರವೂ ಚೆನ್ನಾಗಿ ಬಂದಿದೆ. ಯಾವುದೇ ಚಿತ್ರರಂಗದಲ್ಲೂ ನಮ್ಮ ಚಿತ್ರದ ವಿಷಯದ ಮೇಲೆ ಯಾವುದೇ ರೀತಿಯ ಸಿನಿಮಾ ಬಂದೇ ಇಲ್ಲ ಎನ್ನಲಾಗುತ್ತಿದೆ.
ಸಕ್ರಿಯವಾಗಿರುವ ನಾಯಕ
ಧನ್ವೀರ್ ಅವರು 2019ರಲ್ಲಿ ತೆರೆಕಂಡ ಸಿಂಪಲ್ ಸಿನಿ ನಿರ್ದೇಶನದ `ಬಜಾರ್' ಚಿತ್ರದ ಮೂಲಕ ಸ್ವಲ್ಪ ಮಟ್ಟಿಗೆ ಜನ ಮಾನ್ಯತೆ ಪಡೆದು ಬಳಿಕ ಬೈಟು ಲವ್, ಕೈವ, ವಾಮನ ಸಿನಿಮಾಗಳಲ್ಲಿ ಕೂಡ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕ ನಟನೆನಿಸಿದ್ದಾರೆ.
ಇನ್ನು ಧನ್ವಿರ್ ಅವ ವಾಮನ ಸಿನಿಮಾ ಕೂಡ ಸಖತ್ ಸದ್ದು ಮಾಡಿತ್ತು. ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ನಟನೆಯ 'ವಾಮನ' ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು. ಶಂಕರ್ ರಾಮನ್ ನಿರ್ದೇಶನದ ಚಿತ್ರಕ್ಕೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡಿದ್ದರು. ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಸಂಪತ್ ರಾಜ್, ಆದಿತ್ಯ ಮೆನನ್, ತಾರಾ, ಅವಿನಾಶ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ
ನಟ ದರ್ಶನ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಎಲ್ಲರೂ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ದರ್ಶನ್ ಅಭಿಮಾನಿಗಳಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.