ಜೀ ಕನ್ನಡದ ಜನಪ್ರಿಯ ಶೋಗಳಾದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' (Dance Karnataka Dance) ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಈಗಾಗಲೇ ವೀಕ್ಷಕರ ಮನಗೆದ್ದಿವೆ. ಇದೀಗ ಈ ಎರಡೂ ಶೋಗಳ 'ಮಹಾ ಸಂಚಿಕೆ' ಪ್ರಸಾರವಾಗುತ್ತಿದ್ದು, ಇದರಲ್ಲಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಖ್ಯಾತಿಯ ಸುಬ್ಬು ಅಲಿಯಾಸ್ ಅಮೋಘ್ (amogh) ವಿಶೇಷ ಆಕರ್ಷಣೆಯಾಗಿದ್ದಾರೆ.
ಅಮೋಘ್‌ನ ಪ್ರತಿಭೆ ಶ್ಲಾಘನೆ
ಚಂದನವನದ ದಿಗ್ಗಜರಾದ ಡಾ. ಶಿವರಾಜ್ ಕುಮಾರ್, 'ಡಿಂಪಲ್ ಕ್ವೀನ್' ರಚಿತಾ ರಾಮ್ ಹಾಗೂ ನಿಶ್ವಿಕಾ ನಾಯ್ಡು ಅವರು ಅಮೋಘ್‌ನ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
ಅಮೋಘ್‌ನ ಅದ್ಭುತ ನಟನೆಗೆ ಫಿದಾ ಆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಮೋಘ್‌ನ ಚೊಚ್ಚಲ ಸಿನಿಮಾವನ್ನು ನಾನೇ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ರಚಿತಾ ರಾಮ್, ಅಮೋಘ್ ನಾಯಕನಾಗುವ ಸಿನಿಮಾಗೆ ತಾನೇ ನಾಯಕಿಯಾಗುವುದಾಗಿ ಸಂಭ್ರಮದಿಂದ ಹೇಳಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಅವರು ಅಮೋಘ್‌ನ ಸಾಧನೆಯನ್ನು ಮೆಚ್ಚಿ, ಜೀವನದಲ್ಲಿ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವೆ ಎಂದು ಶುಭ ಹಾರೈಸಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನವೆಂಬರ್ 15ರಂದು ಪ್ರೀಮಿಯರ್ ಆಗಲಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗುತ್ತಿದೆ. ತನ್ನ ಮಾತಿನ ಮೂಲಕ ಜನಮನ್ನಣೆ ಪಡೆದ ಅನುಶ್ರೀ ಅವರು ಈ ಸೀಸನ್‌ನ ಆಂಕರ್ ಆಗಿದ್ದರೆ, ಜಡ್ಜಸ್ ಪ್ಯಾನೆಲ್‌ನಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮತ್ತು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಇದ್ದಾರೆ.
ಸೆಲೆಬ್ರಿಟಿಗಳ ಸಾಲಿನಲ್ಲಿ ಧನಂಜಯ್, ಭವ್ಯಾ ಗೌಡ, ಆರತಿ ಪಡುಬಿದ್ರಿ, ಅಮೋಘ್, ಪ್ರತೀಕ್ಷಾ, ನಂದಿನಿ, ಅನೂಪ್, ಸ್ಮೈಲ್ ಗುರು ರಕ್ಷಿತ್, ಜಗಪ್ಪ, ಅನನ್ಯ, ಪೂಜಾ ರಮೇಶ್ ಮತ್ತು ಅಶ್ವಿನ್ ಇದ್ದಾರೆ. ಜೀ ಕನ್ನಡ ಮನರಂಜನೆ ಲೋಕದಲ್ಲಿ ತನ್ನ ಪ್ರೇಕ್ಷಕರಿಗೆ ಸದಾ ಹೊಸತನವನ್ನು ನೀಡುತ್ತಾ ಕರ್ನಾಟಕದ ಮನೆಮಾತಾಗಿದೆ. ಇದೀಗ ಈ ಪರಂಪರೆಯನ್ನು ಮುಂದುವರೆಸುತ್ತಾ ಬಂದಿರುವ ಜೀ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹೊಸ ಸೀಸನ್ ಮೂಲಕ ಡಾನ್ಸ್ ಹಬ್ಬವನ್ನು ಸೃಷ್ಠಿಸಿದೆ.
ಇದನ್ನೂ ಓದಿ: Dhurandhar 2 teaser: ಧುರಂಧರ್ 2’ ಟೀಸರ್ ಔಟ್; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು
. ಪ್ರತಿ ಎಪಿಸೋಡ್‌ನಲ್ಲಿ ವಿಭಿನ್ನ ಥೀಮ್‌ಗಳು, ರೋಮಾಂಚನಕಾರಿ ಫೇಸ್‌ಆಫ್‌ಗಳು ಮತ್ತು ಕರ್ನಾಟಕದ ಸಂಸ್ಕೃತಿ, ರಿದಮ್ ಮತ್ತು ಆತ್ಮಸ್ಥೈರ್ಯವನ್ನು ಪ್ರತಿಬಿಂಬಿಸುವ ಡಾನ್ಸ್ ಗಳು ಇರಲಿದ್ದು ಇದು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.