ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ದರ್ಶನ್‌ ಸೋದರಳಿಯನ ಹೋಟೆಲ್‌ ಬಗ್ಗೆ ಅಪಪ್ರಚಾರ! ʻದಯವಿಟ್ಟು ಈ ಥರ ಮಾಡಬೇಡಿ..ʼ ಎಂದು ಬೇಡಿಕೊಂಡ ʻಡಿ ಬಾಸ್‌ʼ ಅಕ್ಕನ ಮಗ ಚಂದು!

ಮೈಸೂರಿನಲ್ಲಿ ದರ್ಶನ್‌ ಸೋದರಳಿಯ ಚಂದ್ರಕುಮಾರ್‌ (ಚಂದು) ಹೊಸದಾಗಿ ಆರಂಭಿಸಿರುವ ‘ನೆಮ್ಮದಿ ಊಟ’ ಹೋಟೆಲ್ ವಿರುದ್ಧ ಆನ್‌ಲೈನ್‌ನಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಇದರಿಂದ ನೊಂದಿರುವ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಸೇವೆಯಲ್ಲಿ ಲೋಪಗಳಿದ್ದರೆ ನೇರವಾಗಿ ತಿಳಿಸಿ, ಸುಳ್ಳು ವದಂತಿ ಹಬ್ಬಿಸಬೇಡಿ ಎಂದು ಬೇಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ಅಕ್ಕನ ಮಗ ಚಂದ್ರ ಕುಮಾರ್ (ಚಂದು) ಮೈಸೂರಿನಲ್ಲಿ ಹೊಸದಾಗಿ ಆರಂಭಿಸಿರುವ ಹೋಟೆಲ್ ಉದ್ಯಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಮಾಹಿತಿ ಕೇಳಿಬಂದಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ನೆಮ್ಮದಿ ಊಟ’ ಎಂಬ ಹೆಸರಿನ ಹೋಟೆಲ್ ತೆರೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ಚಂದು ಅವರ ಉದ್ಯಮದ ವಿರುದ್ಧ ಕೆಲವರು ಆನ್‌ಲೈನ್‌ನಲ್ಲಿ ನಕಾರಾತ್ಮಕ ಪ್ರಚಾರ ನಡೆಸುತ್ತಿದ್ದು, ಇದರಿಂದ ತೀವ್ರ ಬೇಸರಗೊಂಡಿರುವ ಅವರು ವಿಡಿಯೋ ಮೂಲಕ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

ಸುಳ್ಳು ಪ್ರಚಾರ ಮಾಡಬೇಡಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೆಗೆಟಿವ್ ಕಮೆಂಟ್‌ಗಳು ಮತ್ತು ಪ್ರಚಾರವು ಹೊಸದಾಗಿ ಆರಂಭವಾಗಿರುವ ಹೋಟೆಲ್ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಚಂದು ನೋವು ತೋಡಿಕೊಂಡಿದ್ದಾರೆ. "ದಯವಿಟ್ಟು ಯಾರೂ ಈ ರೀತಿ ನೆಗೆಟಿವ್ ಮಾಹಿತಿ ಹಂಚಬೇಡಿ. ಹೋಟೆಲ್‌ನಲ್ಲಿ ಊಟ ಅಥವಾ ಸೇವೆಯಲ್ಲಿ ಏನೇ ಲೋಪದೋಷಗಳಿದ್ದರೂ ನೇರವಾಗಿ ಬಂದು ನನಗೇ ಹೇಳಿ, ನನ್ನನ್ನೇ ತಿದ್ದಿ. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಪ್ರಚಾರ ಮಾಡಬೇಡಿ" ಎಂದು ಚಂದ್ರ ಕುಮಾರ್‌ ಹೇಳಿದ್ದಾರೆ.

Actor Darshan: ದರ್ಶನ್‌ ಬೇಲ್‌ ರದ್ದು, ರೇಣುಕಾ ಸ್ವಾಮಿ ಕುಟುಂಬದ ಫಸ್ಟ್‌ ರಿಯಾಕ್ಷನ್ ಹೇಗಿತ್ತು?

ನೇರವಾಗಿ ನಮ್ಮ ಗಮನಕ್ಕೆ ತನ್ನಿ

"ಈ ಥರ ನೆಗೆಟಿವ್‌ ಪ್ರಚಾರದಿಂದ ಹೋಟೆಲ್‌ಗೆ ಬರಬೇಕಿದ್ದ ಗ್ರಾಹಕರು ಕೂಡ ಹಿಂಜರಿಯುವಂತಾಗಿದೆ. ನಮ್ಮ ಸಂಸ್ಥೆಯನ್ನು ನಂಬಿಕೊಂಡು ಹಲವು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ, ಅವರ ಬದುಕಿನ ಮೇಲೂ ಇದು ಪರಿಣಾಮ ಬೀರುತ್ತದೆ. ಏನೇ ಕುಂದುಕೊರತೆಗಳಿದ್ದರೂ ನೇರವಾಗಿ ನಮ್ಮ ಗಮನಕ್ಕೆ ತನ್ನಿ" ಎಂದು ಅವರು ಕೈಮುಗಿದು ಕೇಳಿಕೊಂಡಿದ್ದಾರೆ.

ದರ್ಶನ್‌ ಸೋದರಳಿಯ ಚಂದು ಮನವಿ



ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಸಜ್ಜಾಗಿರುವ ಚಂದು

ದರ್ಶನ್‌ ಅವರ 'ಕಾಟೇರ' ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ಚಂದ್ರ ಕುಮಾರ್, ಸದ್ಯ ಹೊಸ ಚಿತ್ರಗಳ ಕಥೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ. ನಟನೆಯ ಜೊತೆಗೆ ಸ್ವಂತ ಕಾಲ ಮೇಲೆ ನಿಲ್ಲುವ ಉದ್ದೇಶದಿಂದ ಅವರು ಮೈಸೂರಿನಲ್ಲಿ ಈ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದರು.

ರೇಣುಕಾಸ್ವಾಮಿ ಪ್ರಕರಣದಲ್ಲಿ ಸೋದರಮಾವ ದರ್ಶನ್ ಜೈಲಿನಲ್ಲಿರುವ ಕಾರಣ ಸದ್ಯಕ್ಕೆ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳು ಸೆಟ್ಟೇರುತ್ತಿಲ್ಲವಾದ್ದರಿಂದ, ಪಾರ್ಟ್‌ಟೈಮ್ ಆಗಿ ಈ ಉದ್ಯಮವನ್ನು ಮುನ್ನಡೆಸುತ್ತಿರುವುದಾಗಿ ಚಂದು ಈ ಹಿಂದೆ ಸ್ಪಷ್ಟಪಡಿಸಿದ್ದರು. ಆದರೆ ಈಗ ಹೊಸ ಉದ್ಯಮದ ಆರಂಭದಲ್ಲೇ ಎದುರಾಗಿರುವ ಈ ಅಪಪ್ರಚಾರ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.