ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Darshan: ಬೆಂಗಳೂರಿನಲ್ಲಿ ʻದಿ ಡೆವಿಲ್ʼ‌ ಚಿತ್ರಕ್ಕೆ ದಾಖಲೆ ಸಂಖ್ಯೆಯ ಶೋಗಳು! ವಿಶ್ವದ್ಯಾಂತ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು? ರಾಜ್ಯಾದ್ಯಂತ ಹೇಗಿದೆ ರೆಸ್ಪಾನ್ಸ್?

The Devil Box Office Collection: 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ಅಭಿನಯದ 'ದಿ ಡೆವಿಲ್‌' ಸಿನಿಮಾವು ಡಿಸೆಂಬರ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎರಡು ವರ್ಷಗಳ ಬಳಿಕ ತೆರೆ ಕಂಡಿರುವ ದರ್ಶನ್‌ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಕರ್ನಾಟಕದಲ್ಲಿ ಅಂದಾಜು 10 ಕೋಟಿ ರೂ. ಕಲೆಕ್ಷನ್ ಆಗಿದೆ.

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ಅಭಿನಯದ ʻದಿ ಡೆವಿಲ್ʼ‌ ಸಿನಿಮಾವು ಡಿಸೆಂಬರ್‌ 11ರಂದು ವಿಶ್ವಾದ್ಯಂತ ತೆರೆಕಂಡಿದೆ. ಎರಡು ವರ್ಷಗಳ ನಂತರ ತೆರೆಮೇಲೆ ಕಾಣಿಸಿಕೊಂಡ ದರ್ಶನ್‌ ಅವರಿಗೆ ಫ್ಯಾನ್ಸ್‌ ಕಡೆಯಿಂದ ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ಡಿ ಬಾಸ್‌ ಅಭಿಮಾನಿಗಳ ಸಂಭ್ರಮ ಹೇಳತೀರದು. ಈ ಮಧ್ಯೆ ಮೊದಲ ದಿನ ಕಲೆಕ್ಷನ್ ಎಷ್ಟಾಯಿತು ಎಂಬ ಚರ್ಚೆಗಳು ಶುರುವಾಗಿವೆ. ಜೊತೆಗೆ ರಾಜ್ಯಾದ್ಯಂತ ಹೇಗಿದೆ ಎಂಬ ರೆಸ್ಪಾನ್ಸ್‌ ಎಂಬ ಬಗ್ಗೆಯೂ ಅಭಿಮಾನಿಗಳಲ್ಲಿ ಕುತೂಹಲ ಇದೆ. ಆ ಕುರಿತ ಮಾಹಿತಿ ಇಲ್ಲಿದೆ.

ಮೊದಲ ದಿನ ಎಷ್ಟಾಯಿತು ಗಳಿಕೆ?

ಗುರುವಾರ (ಡಿ.11) ಬೆಳಗ್ಗೆ 6.30ರಿಂದಲೇ ರಾಜ್ಯಾದ್ಯಂತ ಶೋಗಳ ಓಪನ್‌ ಆಗಿದ್ದವು. ಅದರಲ್ಲೂ ಮಾರ್ನಿಂಗ್‌ ಶೋನ ಎಲ್ಲಾ ಟಿಕೆಟ್‌ಗಳು ಸೇಲ್‌ ಆಗಿ, ಬಹುತೇಕ ಕಡೆ ಹೌಸ್‌ಫುಲ್‌ ಬೋರ್ಡ್‌ ಬಿದ್ದಿತ್ತು. ಇದೆಲ್ಲದರ ಪರಿಣಾಮ ಕರ್ನಾಟಕದಲ್ಲೇ ಈ ಚಿತ್ರವು ಭರ್ತಿ 10 ಕೋಟಿ ರೂ. ಗಳಿಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರಿಲೀಸ್‌ಗೂ ಮುನ್ನವೇ ಬರೀ ಫ್ಯಾನ್ಸ್‌ ಶೋನಿಂದಲೇ 2.50 ಕೋಟಿ ರೂ. ಹಣ ಹರಿದುಬಂದಿದ್ದನ್ನು ನಾವಿಲ್ಲಿ ಗಮನಿಸಬಹುದು, ಇನ್ನು, ಹೊರರಾಜ್ಯ ಮತ್ತು ವಿದೇಶದಿಂದ ಹರಿದುಬಂದಿರುವ ಗಳಿಕೆಯನ್ನು ಲೆಕ್ಕ ಹಾಕಿದರೆ, ಮೊದಲ ದಿನ ದಿ ಡೆವಿಲ್‌ ಸಿನಿಮಾಕ್ಕೆ ವಿಶ್ವಾದ್ಯಂತ ಅಂದಾಜು 12 ಕೋಟಿ ರೂ. ಕಲೆಕ್ಷನ್‌ ಆಗಿರುವ ಮಾಹಿತಿ ಸಿಕ್ಕಿದೆ.

The Devil Review: ರಾಜಕೀಯ ಚದುರಂಗದಾಟದಲ್ಲಿ ಡೆವಿಲ್‌ ಡಬಲ್‌ ಡ್ರಾಮಾ; ಇದು ದರ್ಶನ್‌ ಫ್ಯಾನ್ಸ್‌ಗೆ ಮಾತ್ರ ಹಂಗಾಮ!

ಬೆಂಗಳೂರಿನಲ್ಲಿ 900+ ಶೋ

ಕಾಂತಾರ ಚಾಪ್ಟರ್‌ 1 ನಂತರ ರಿಲೀಸ್‌ ಆಗುತ್ತಿರುವ ಸ್ಟಾರ್‌ ನಟರ ಸಿನಿಮಾ ಡಿ ಡೆವಿಲ್‌ ಆಗಿದ್ದು, ಬೆಂಗಳೂರಿನಲ್ಲಿ ಭಾರಿ ರೆಸ್ಪಾನ್ಸ್‌ ಸಿಕ್ಕಿದೆ. ಎರಡನೇ ದಿನವು ಸುಮಾರು 900+ ಶೋಗಳು ಸಿಕ್ಕಿವೆ. ಬೆಂಗಳೂರಿನ ಥಿಯೇಟರ್‌ಗಳಲ್ಲಿ ಸುಮಾರು 64% ಆಡಿಯೆನ್ಸ್‌ ಆಕ್ಯುಪೆನ್ಸಿ ಇದೆ. ಇದರ ಜೊತೆಗೆ ಮೈಸೂರಿನಲ್ಲಿ ಭಾರಿ ರೆಸ್ಪಾನ್ಸ್‌ ಸಿಕ್ಕಿದೆ. ಅಲ್ಲಿ ದಿ ಡೆವಿಲ್‌ಗೆ 100+ ಶೋಗಳು ಸಿಕ್ಕಿದ್ದು, 88.75% ಆಡಿಯೆನ್ಸ್‌ ಆಕ್ಯುಪೆನ್ಸಿ ಇದೆ. ಮಿಕ್ಕಂತೆ ಶಿವಮೊಗ್ಗ (28 ಶೋ), ಹುಬ್ಬಳ್ಳಿ (37), ಕಲಬುರಗಿ (48 ಶೋ), ಕುಂದಾಪುರ (19 ಶೋ), ತುಮಕೂರು (19 ಶೋ) ಮುಂತಾದ ಕಡೆ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿದೆ. ಮಂಗಳೂರಿನಲ್ಲಿ 49 ಶೋಗಳು ಸಿಕ್ಕಿದ್ದರೂ, ಕೇವಲ 23% ಆಡಿಯೆನ್ಸ್‌ ಆಕ್ಯುಪೆನ್ಸಿ ಇದೆ.‌

Darshan: ʻದಿ ಡೆವಿಲ್‌ʼ ಚಿತ್ರಕ್ಕೆ ಬುಕ್‌ ಮೈ ಶೋನಲ್ಲಿ ರಿವ್ಯೂ ಮಾಡಂಗಿಲ್ಲ, ರೇಟಿಂಗ್‌ ಕೊಡಂಗಿಲ್ಲ! ಕೋರ್ಟ್‌ನಿಂದ ಇಂಥ ಆರ್ಡರ್ ತಂದಿದ್ದೇಕೆ?

ಹೇಗಿದೆ ಡೆವಿಲ್‌ ಸಿನಿಮಾ?

ದಿ ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೀರೋ ಮತ್ತು ವಿಲನ್‌ ಆಗಿ ಮಿಂಚಿದ್ದಾರೆ. ಚಿತ್ರಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯ ಸಿಕ್ಕಿದೆ. ಈ ಚಿತ್ರವನ್ನು ಪ್ರಕಾಶ್‌ ವೀರ್‌ ನಿರ್ದೇಶಿಸಿದ್ದು, ಚಿತ್ರಕಥೆಯಲ್ಲಿ ಇನ್ನಷ್ಟು ಹೊಸತನ ಮತ್ತು ಶಾರ್ಪ್‌ನೆಸ್‌ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಅಚ್ಯುತ್‌ ಕುಮಾರ್‌, ಮಹೇಶ್‌ ಮಂಜ್ರೇಕರ್‌, ರಚನಾ ರೈ, ಶರ್ಮಿಳಾ ಮಾಂಡ್ರೆ, ಹುಲಿ ಕಾರ್ತಿಕ್‌, ಗಿಲ್ಲಿ ನಟ, ವಿನಯ್‌ ಗೌಡ, ರೋಜರ್‌ ನಾರಾಯಣ್‌ ಮುಂತಾದವರು ನಟಿಸಿದ್ದಾರೆ.