ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ತೂಗುದೀಪ ಅವರ ʻದಿ ಡೆವಿಲ್ʼ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಅಪಾರವಾದ ನಿರೀಕ್ಷೆ ಇದೆ. ಡಿಸೆಂಬರ್ 12ರಂದು ಈ ಸಿನಿಮಾ ತೆರೆಗೆ ಬರಲಿದೆ ಎಂದು ಫ್ಯಾನ್ಸ್ ಭಾರಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಡೆವಿಲ್ ಫೀವರ್ ಎಲ್ಲ ಕಡೆ ಶುರುವಾಗಿದೆ. ಈ ನಡುವೆ ʻದಿ ಡೆವಿಲ್ʼ ಸಿನಿಮಾ ಟೀಮ್ ಕಡೆಯಿಂದ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ಸಿನಿಮಾ ತೆರೆಗೆ ಬರಲು 20 ದಿನಗಳಷ್ಟೇ ಬಾಕಿ ಇರುವಾಗ ಒಂದು ಬಿಗ್ ಅಪ್ಡೇಟ್ ಅನ್ನು ಚಿತ್ರತಂಡ ಹಂಚಿಕೊಂಡಿದೆ.
ರಿಲೀಸ್ ಡೇಟ್‌ನಲ್ಲಿ ಬದಲಾವಣೆ
ಹೌದು, ಬಿಡುಗಡೆಗೆ ಇನ್ನೇನು 20 ದಿನಗಳು ಇರುವಾಗ ರಿಲೀಸ್ ಡೇಟ್ ಅನ್ನು ಚಿತ್ರತಂಡ ಬದಲಾಯಿಸಿದೆ. ಹಾಗಂತ, ದಿ ಡೆವಿಲ್ ಸಿನಿಮಾ ಪೋಸ್ಟ್ ಪೋನ್ ಆಯ್ತು ಎಂದುಕೊಳ್ಳಬೇಡಿ. ಅಸಲಿಗೆ ಇದು ಅಭಿಮಾನಿಗಳಿಗೆ ಖುಷಿಯ ವಿಚಾರವೇ ಸರಿ. ಯಾಕೆಂದರೆ, ಡಿಸೆಂಬರ್ 12ರಂದು ತೆರೆಗೆ ಬರಬೇಕಿದ್ದ ದಿ ಡೆವಿಲ್ ಸಿನಿಮಾವನ್ನು ಡಿಸೆಂಬರ್ 11ರಂದೇ ರಿಲೀಸ್ ಮಾಡುವುದಕ್ಕೆ ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ.
Devil Movie: 'ಡೆವಿಲ್' ಮೂರನೇ ಸಾಂಗ್ ಔಟ್! ದರ್ಶನ್ ಖದರ್‌ಗೆ ಫಿದಾ ಆದ್ರು ಫ್ಯಾನ್ಸ್
ಚಿತ್ರತಂಡ ಹೇಳಿದ್ದೇನು?
"ಪ್ರೇಕ್ಷಕರ ಗಮನಕ್ಕೆ.. ಸೆಲೆಬ್ರಿಟಿಗಳ / ಪ್ರೇಕ್ಷಕ ಪ್ರಭುಗಳ ಒತ್ತಾಯದ ಮೇರೆಗೆ.. ನಿಮ್ಮ 'ದಿ ಡೆವಿಲ್'' ಸಿನಿಮಾವನ್ನು ಡಿಸೆಂಬರ್ 12ರ ಬದಲು ಒಂದು ದಿನ ಮುಂಚಿತವಾಗಿ ಅಂದರೆ, ಡಿಸೆಂಬರ್ 11ರಂದೇ ಬೆಳ್ಳಿತೆರೆಗೆ ಬರಲಿದೆ. ನಿಮ್ಮ ಪ್ರೀತಿ ಅಭಿಮಾನವೇ ನಮ್ಮ ಶ್ರೀರಕ್ಷೆ" ಎಂದು ಚಿತ್ರತಂಡ ಹೇಳಿಕೊಂಡಿದೆ. ಅಂದಹಾಗೆ, ಡಿಸೆಂಬರ್ 11ರ ಗುರುವಾರ ಬರಲಿದ್ದು, ಲಾಂಗ್ ವೀಕೆಂಡ್ ಸಿಕ್ಕಂತಾಗಯಲಿದೆ. ಇದು ಚಿತ್ರದ ಗಳಿಕೆ ಮೇಲೆ ಪ್ಲಸ್ ಪಾಯಿಂಟ್ ಆಗಲಿದೆ.
ʼದಿ ಡೆವಿಲ್ʼ ಸಿನಿಮಾ ಟೀಮ್ ಪೋಸ್ಟ್
ಪ್ರಚಾರಕ್ಕೆ ಧುಮುಕಿರುವ ವಿಜಯಲಕ್ಷ್ಮಿ ದರ್ಶನ್
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡು ಈಗಾಗಲೇ ದರ್ಶನ್ ಅವರ ಅಭಿಮಾನಿಗಳ ಜೊತೆಗೆ ಸಭೆ ಮಾಡಿದ್ದಾರೆ. "ನನ್ನ ಅಭಿಮಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ.. ನನ್ನ ಉಳಿದ ಸಿನಿಮಾಗಳಿಗೆ ಅಪಾರ ಪ್ರೀತಿ ನೀಡಿದ್ದೀರಿ. ಆದರೆ, ಡೆವಿಲ್‌ಗೆ ಹೆಚ್ಚು ಪ್ರೀತಿ ಕೊಡಿ ಅಂತ ಅಭಿಮಾನಿಗಳಲ್ಲಿ ದರ್ಶನ್ ಕೇಳಿಕೊಂಡಿದ್ದಾರೆ" ಎಂದು ವಿಜಯಲಕ್ಷ್ಮಿ ಹೇಳಿದ್ದರು.
Actor Darshan: ದರ್ಶನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ದಿ ಡೆವಿಲ್ ಸಿನಿಮಾದಿಂದ ಬಿಗ್ ಅಪ್‌ಡೇಟ್
ದರ್ಶನ್ ತೂಗುದೀಪ ಅವರಿಗೆ ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದು, ಮಹೇಶ್ ಮಾಂಜ್ರೇಕರ್, ಅಚ್ಯುತ್ ಕುಮಾರ್, ಶೋಭರಾಜ್, ಗಿಲ್ಲಿ ನಟ, ಹುಲಿ ಕಾರ್ತಿಕ್, ಶರ್ಮಿಳಾ ಮಾಂಡ್ರೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.