Actor Darshan: ದರ್ಶನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ದಿ ಡೆವಿಲ್ ಸಿನಿಮಾದಿಂದ ಬಿಗ್ ಅಪ್‌ಡೇಟ್
ಡಿಸೆಂಬರ್ 12ಕ್ಕೆ ದರ್ಶನ್ (Darshan) ಅಭಿನಯದ ಡೆವಿಲ್ (The Devil) ಸಿನಿಮಾ ತೆರೆಗೆ ಬರಲಿದೆ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದರೂ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ನಿನ್ನೆಯಷ್ಟೇ ಮೊದಲ ಹಂತದ ಚಿತ್ರೀಕರಣದ ವಿಡಿಯೋವನ್ನು (Shooting Video) ಬಿಡುಗಡೆ ಮಾಡಿತ್ತು ಚಿತ್ರತಂಡ. ಇದೀಗ ಮತ್ತೊಂದು ಹೊಸ ಪೋಸ್ಟರ್ (Poster) ಔಟ್ ಮಾಡಿದೆ. ದರ್ಶನ್ ಹೊಸ ಲುಕ್ ಕಂಡು ಸಖತ್ ಖುಷಿ ಆಗಿದ್ದಾರೆ ಫ್ಯಾನ್ಸ್.
ದರ್ಶನ್ ದಿ ಡೆವಿಲ್ ಸಿನಿಮಾ -
ಸ್ಯಾಂಡಲ್‌ವುಡ್ ನಟ ದರ್ಶನ್ (Actor Darshan) ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ಸಿಗುತ್ತಿದೆ. ನಿನ್ನೆಯಷ್ಟೇ ಮೊದಲ ಹಂತದ ಚಿತ್ರೀಕರಣದ ವಿಡಿಯೋವನ್ನು (Shooting Video) ಬಿಡುಗಡೆ ಮಾಡಿತ್ತು ಚಿತ್ರತಂಡ. ಇದೀಗ ಮತ್ತೊಂದು ಹೊಸ ಪೋಸ್ಟರ್ (Poster) ಔಟ್ ಮಾಡಿದೆ. ದರ್ಶನ್ ಹೊಸ ಲುಕ್ ಕಂಡು ಸಖತ್ ಖುಷಿ ಆಗಿದ್ದಾರೆ ಫ್ಯಾನ್ಸ್.
ಹೊಸ ಅಪ್‌ಡೇಟ್!
"ದಿ ಡೆವಿಲ್" ಇನ್ನೂ ಒಂದು ತಿಂಗಳಲ್ಲಿ! ನವೆಂಬರ್ 16 2025, 12:03PM— ದಿ ಡೆವಿಲ್ ನ ಹೊಸ ಹಾಡಿಗೆ ಸಜ್ಜಾಗಿರಿ ಎಂದು ಪೋಸ್ಟರ್ ಜೊತೆ ಬಿಗ್ ಅಪ್‌ಡೇಟ್ ಕೊಟ್ಟಿದೆ ಚಿತ್ರತಂಡ. ಬಹು ದಿನಗಳಿಂದ ಫ್ಯಾನ್ಸ್ ಬಹಳ ಕಾತರದಿಂದ ಕಾಯುತ್ತಿದ್ದ ಡೆವಿಲ್ ಸಿನಿಮಾದ(Devil Movie) ಇದ್ರೆ ನೆಮ್ದಿಯಾಗಿರ್ಬೇಕು ಹಾಡು ರಿಲೀಸ್ ಆದ ಕೇವಲ ಅರ್ಧಗಂಟೆಯಲ್ಲಿ 5ಲಕ್ಷ ವ್ಯೂವ್ಸ್ ಪಡೆದುಕೊಂಡಿತ್ತು, ಇನ್ನು ದಿ ಡೆವಿಲ್ ನ ಹೊಸ ಹಾಡಿಗೆ ಕಾತುರದಿಂದ ಕಾಯುತ್ತಿದ್ದಾರೆ ಫ್ಯಾನ್ಸ್.
ಇದನ್ನೂ ಓದಿ: Bigg Boss Kannada 12: ನಾಮಿನೇಷ್ನಿಂದ ಸೇಫ್ ಆಗಲು ರಾಶಿಕಾ ಪರದಾಟ; ರಕ್ಷಿತಾ ಜೊತೆ ಕಿತ್ತಾಟಕ್ಕೆ ನಿಂತ ಟೀಂ
ಡೆವಿಲ್ ಸಿನಿಮಾ ತೆರೆಗೆ ಯಾವಾಗ?
ಡಿಸೆಂಬರ್ 12ಕ್ಕೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗೆ ಬರಲಿದೆ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದರೂ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳನ್ನು ದರ್ಶನ್ ಮುಗಿಸಿಕೊಟ್ಟಿದ್ದಾರೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣದ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದೆ ತಂಡ.
ಡೆವಿಲ್ ಚಿತ್ರಕ್ಕೆ ಸಂಗೀತ
ದಿ ಡೆವಿಲ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಡೆವಿಲ್ ಸಿನಿಮಾದಲ್ಲಿ ನಟಿ ರಚನಾ ರೈ ಜೊತೆ ಗೆ ಮೈ ಚಳಿ ಬಿಟ್ಟು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರೊ ದಾಸನ ಒಂದೇ ಒಂದು ಸಲ ಹಾಡಿನ ಬಗ್ಗೆಯೂ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್ ಮಾಳುಗೆ ಪ್ರಾಣ ಸಂಕಟ
ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲಿದೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ 'ತಾರಕ್' ಚಿತ್ರದಲ್ಲಿ ದರ್ಶನ್- ಪ್ರಕಾಶ್ ಒಟ್ಟಿಗೆ ಕೆಲಸ ಮಾಡಿ ಗೆದ್ದಿದ್ದರು.