ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Darshan: ದರ್ಶನ್ ಲಾಕ್ ಆಗಬಾರದಿತ್ತು, ಅವ್ರು ಪಟ್ಟ ಕಷ್ಟ ಕಡಿಮೆಯೇನಲ್ಲ; ಖಳನಟ ಕಿಲ್ಲರ್‌ ವೆಂಕಟೇಶ್‌

killer venkatesh: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದವರು ಕಿಲ್ಲರ್‌ ವೆಂಕಟೇಶ್‌ . ಹಿರಿಯ ಪತ್ರಕರ್ತರಾದ ಗಣೇಶ್‌ ಕಾಸರಗೋಡು ಅವರು ಕಿಲ್ಲರ್‌ ವೆಂಕಟೇಶ್‌ ಅವರನ್ನ ಹುಡುಕಿಕೊಂಡು ತುಮಕೂರಿಗೆ ಹೋಗಿದ್ದರು. ಅಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿಸಿದ್ದರು. ಕಿಲ್ಲರ್‌ ವೆಂಕಟೇಶ್‌ ಅವರು ತಮ್ಮ ಆರೋಗ್ಯ ಸ್ಥಿತಿ, ಸಿನಿ ಜೀವನ, ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

ನಟ ದರ್ಶನ್‌

ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ (Sandalwood) ವಿಲನ್‌ ಆಗಿ ಅಬ್ಬರಿಸಿದ್ದವರು ಕಿಲ್ಲರ್‌ ವೆಂಕಟೇಶ್‌ (killer venkatesh). ಹಿರಿಯ ಪತ್ರಕರ್ತರಾದ ಗಣೇಶ್‌ ಕಾಸರಗೋಡು ಅವರು ಕಿಲ್ಲರ್‌ ವೆಂಕಟೇಶ್‌ ಅವರನ್ನ ಹುಡುಕಿಕೊಂಡು ತುಮಕೂರಿಗೆ ಹೋಗಿದ್ದರು. ಅಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿಸಿದ್ದರು. ಕಿಲ್ಲರ್‌ ವೆಂಕಟೇಶ್‌ ಅವರು ತಮ್ಮ ಆರೋಗ್ಯ ಸ್ಥಿತಿ, ಸಿನಿ ಜೀವನ, ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ನನಗೆ ಹುಷಾರಿಲ್ಲ, ವಾಯ್ಸ್‌ ಹೋಗಿದೆ. ಕೊರೋನಾದಿಂದ ಈ ರೀತಿ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಅದರ ಜೊತೆಗೆ ದರ್ಶನ್‌ (Darshan) ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

2020ರಲ್ಲಿ ಅವರಿಗೆ ಕಿಡ್ನಿ ವೈಫಲ್ಯ ತಗುಲಿ ಆರೋಗ್ಯ ಹದಗೆಟ್ಟಿತು. ಆ ಸಂದರ್ಭದಲ್ಲಿ ನಟ ಜಗ್ಗೇಶ್‌ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೋರಿದ್ದರು. ಅವರ ಮನವಿಗೆ ಸ್ಪಂದಿಸಿ ನಟ ದರ್ಶನ್‌ ಒಂದು ಲಕ್ಷ ರೂಪಾಯಿ ನೆರವು ನೀಡಿದರೆ, ಸೃಜನ್ ಲೋಕೇಶ್‌ 50 ಸಾವಿರ ರೂಪಾಯಿ ಸಹಾಯ ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Ravi Basrur: ರವಿ ಬಸ್ರೂರ್​​ಗೆ 35 ಲಕ್ಷದ ವಾಚ್ ಗಿಫ್ಟ್ ಕೊಟ್ಟ ತೆಲುಗು ನಟ ವಿಶ್ವಕ್ ಸೇನ್

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ತೆರೆ ಮೇಲೆ ಖಡಕ್‌ ವಿಲನ್‌ ಆಗಿ ಪ್ರೇಕ್ಷಕರಲ್ಲಿ ಭಯ ಹುಟ್ಟಿಸಿದ್ದ ಕಿಲ್ಲರ್‌ ವೆಂಕಟೇಶ್‌, ಇದೀಗ ಬದುಕಿನ ಎದುರು ಹೋರಾಡುತ್ತಿರುವ ದೃಶ್ಯ ಮನಕಲುಕುವಂತಿದೆ.



ದರ್ಶನ್ ಲಾಕ್ ಆಗಬಾರದಿತ್ತು

"ಆಗ ಬಂಗಾರದ ದಿನಗಳಿದ್ದವು. ನಾನು ತೂಗುದೀಪ ಶ್ರೀನಿವಾಸ್‌ ಅವರ ಜೊತೆಗೂ ಕೆಲಸ ಮಾಡಿದ್ದೇನೆ. ನನಗೆ ದರ್ಶನ್‌ ಕೂಡ ತುಂಬಾ ಗೌರವ ಕೊಡುತ್ತಿದ್ದರು. ಆದರೆ, ಈ ಕೇಸ್‌ನಲ್ಲಿ ಲಾಕ್‌ ಆಗಿಬಿಟ್ರು. ಅದು ಅವರಿಗೆ ಬೇಕಾಗಿರಲಿಲ್ಲ, ತಪ್ಪು ಮಾಡಿ ಬಿಟ್ಟರು ಅನ್ನಿಸುತ್ತೆ. ಸ್ವಲ್ಪ ಕಂಟ್ರೋಲ್‌ ಮಾಡಿಕೊಳ್ಳಬೇಕಿತ್ತು. ಅವರಿಗೆ ಇದ್ದ ಸಹವಾಸಗಳು ಸರಿ ಇರಲಿಲ್ಲ. ನನಗೆ ಅವರ ಜೊತೆ ಸಂಗೊಳ್ಳಿ ರಾಯಣ್ಣ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು" ಎಂದು ಕಿಲ್ಲರ್‌ ವೆಂಕಟೇಶ್‌ ಹೇಳುತ್ತಾರೆ.

ಹಾದಿ ತಪ್ಪಿಬಿಟ್ರು

`ದರ್ಶನ್‌ ಜೊತೆಗಿದ್ದವರು ಸರಿಯಾಗಿ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಒಮ್ಮೆ ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡು ಬಿಟ್ಟರೆ ಮುಗೀತು. ದರ್ಶನ್ ಹೀರೊ ಆಗುವ ಸಮಯಕ್ಕೆ ಅವರ ತಂದೆ ಇರಲಿಲ್ಲ. ಇದ್ದಿದ್ದರೆ ಬುದ್ಧಿವಾದ ಹೇಳುತ್ತಿದ್ರು. ಬೇರೆಯವರ ಮಾತು ಕೇಳುವ ಪರಿಸ್ಥಿತಿ ಬರ್ತಿರಲಿಲ್ಲ. ಹಾಗಾಗಿ ಹಾದಿ ತಪ್ಪಿಬಿಟ್ರು. ದರ್ಶನ್ ಪಟ್ಟಾಲಂನಲ್ಲಿ ಬುದ್ಧಿ ಹೇಳುವವರು ಇರಲಿಲ್ಲ. ಎಲ್ಲರೂ ಹೊಡಿಮಗ ಕಡಿ ಮಗ ಎನ್ನುತ್ತಿದ್ದವರು. ಬುದ್ಧಿ ಹೇಳುವವರು ಇದ್ದಿದ್ದರೆ ಸರಿ ದಾರಿಗೆ ತರುತ್ತಿದ್ರು. ಅಲ್ಲಿ ಲಾಕ್ ಆದವರು ಅಷ್ಟು ಸುಲಭವಾಗಿ ಹೊರಗೆ ಬರಲ್ಲ. ಸುದೀಪ್ ಜೊತೆ ಇದ್ದಾಗ ಸ್ನೇಹ ಚೆನ್ನಾಗಿತ್ತುʼ ಎಂದಿದ್ದಾರೆ.

ಇದನ್ನೂ ಓದಿ: 70th Filmfare Awards: ಯಾರಿಗೆ ಕನ್ನಡದ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ? ಫಿಲ್ಮ್‌ಫೇರ್ ಅವಾರ್ಡ್‌ ಕಂಪ್ಲೀಟ್‌ ಲಿಸ್ಟ್ ಔಟ್‌

ಇನ್ನು ಸಿನಿಮಾ ಬಗ್ಗೆ ನಟ ಮಾತನಾಡಿ, ʻನಾನು ಸಿನಿಮಾ ಸಂಪರ್ಕವನ್ನು ಎಂದಿಗೂ ಬಿಡಲಿಲ್ಲ. ಅವಕಾಶ ಸಿಕ್ಕರೆ ಇಂದು ಕೂಡ ನಟನೆ ಮಾಡುತ್ತೇನೆ. ಆರೋಗ್ಯ ಸುಧಾರಿಸಿಕೊಂಡ ಮೇಲೆ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಬೇಕು ಅನ್ನೋದು ನನ್ನ ಆಸೆʼ ಎಂದು ಇದೇ ವೇಳೆ ಹೇಳಿಕೊಂಡಿದ್ದಾರೆ.

Yashaswi Devadiga

View all posts by this author