70th Filmfare Awards: ಯಾರಿಗೆ ಕನ್ನಡದ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ? ಫಿಲ್ಮ್‌ಫೇರ್ ಅವಾರ್ಡ್ ಕಂಪ್ಲೀಟ್ ಲಿಸ್ಟ್ ಔಟ್
70th Filmfare Awards Kannada: 70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದು. 2024 ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳ ಪ್ರಶಸ್ತಿಗಳು ಅನೌನ್ಸ್ ಆಗಿದೆ. ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ ಈ ಕಾರ್ಯಕ್ರಮವು ಫೆಬ್ರವರಿ 21 ರಂದು ನಡೆದಿದೆ. ಕನ್ನಡದಲ್ಲಿ 'ಶಾಖಾಹಾರಿ' ಚಿತ್ರಕ್ಕೆ 2024ನೇ ಸಾಲಿನ ಅತ್ಯುತ್ತಮ ಸಿನಿಮಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸಿಕ್ಕಿದೆ.
70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ -
70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ (70th Filmfare Awards) ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದು. 2024 ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳ ಪ್ರಶಸ್ತಿಗಳು ಅನೌನ್ಸ್ ಆಗಿದೆ. ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವು ಫೆಬ್ರವರಿ 21 ರಂದು ನಡೆದಿದೆ. ಕನ್ನಡದಲ್ಲಿ 'ಶಾಖಾಹಾರಿ' ಚಿತ್ರಕ್ಕೆ 2024ನೇ ಸಾಲಿನ ಅತ್ಯುತ್ತಮ ಸಿನಿಮಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸಿಕ್ಕಿದೆ. 'ಬಘೀರ' (bagheera) ಚಿತ್ರದ ನಟನೆಗಾಗಿ ಶ್ರೀಮುರಳಿ (sri murali) ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ.
70ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಕೇರಳ ಪ್ರವಾಸೋದ್ಯಮವು ಕೊಚ್ಚಿಯ ಆಡ್ಲಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದೆ. ತಾರೆಯರಿಂದ ತುಂಬಿದ ಆಚರಣೆಯು ರೋಮಾಂಚಕ ಪ್ರದರ್ಶನಗಳು, ಹೃದಯಸ್ಪರ್ಶಿ ಭಾಷಣಗಳು ಮತ್ತು ವೇದಿಕೆಯ ಮೇಲಿನ ಸ್ಮರಣೀಯ ಕ್ಷಣಗಳಿಂದ ತುಂಬಿತ್ತು.
'ಶಾಖಾಹಾರಿ' ಅತ್ಯುತ್ತಮ ಸಿನಿಮಾ
ಕನ್ನಡದಲ್ಲಿ 'ಶಾಖಾಹಾರಿ' ಚಿತ್ರಕ್ಕೆ 2024ನೇ ಸಾಲಿನ ಅತ್ಯುತ್ತಮ ಸಿನಿಮಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸಿಕ್ಕಿದೆ. . 'ಬಘೀರ' ಚಿತ್ರದ ನಟನೆಗಾಗಿ ಶ್ರೀಮುರಳಿ ಅತ್ಯುತ್ತಮ ನಟ ಹಾಗೂ 'ಕೋಳಿಎಸ್ರು' ಚಿತ್ರದ ನಟನೆಗೆ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಆಗಿದ್ದಾರೆ.
ಇದನ್ನೂ ಓದಿ: kavya gowda: ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ಕಾವ್ಯ ಗೌಡ; ನಟಿ ಹೇಳಿದ ಸತ್ಯ ಏನು?
ಅತ್ಯುತ್ತಮ ನಿರ್ದೇಶಕ; ಪೃಥ್ವಿ ಕೊಣನೂರು
ಅತ್ಯುತ್ತಮ ಚಿತ್ರ (ವಿಮರ್ಶಕರು); ಬ್ಲಿಂಕ್ (ಶ್ರೀನಿಧಿ ಬೆಂಗಳೂರು)
ಗೋಪಾಲಕೃಷ್ಣ ದೇಶಪಾಂಡೆ ಅತ್ಯುತ್ತಮ ಪೋಷಕ ನಟ(ಬ್ಲಿಂಕ್)
ಪ್ರಿಯಾ ಶಠಮರ್ಷಣ ಅತ್ಯುತ್ತಮ ಪೋಷಕ ನಟಿ(ಭೀಮ) 'ಕೃಷ್ಣಂಪ್ರಣಯ ಸಖಿ' ಚಿತ್ರದ 'ದ್ವಾಪರ' ಹಾಡಿನ ಗಾಯನಕ್ಕಾಗಿ ಜಸ್ಕರನ್ ಸಿಂಗ್ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದಿದ್ದಾರೆ.
'ಕರಟಕ ದಮನಕ' ಚಿತ್ರದ 'ಹಿತ್ತಲಕ ಕರಿಬೇಡ ಮಾವ' ಹಾಡಿಗಾಗಿ ಶ್ರುತಿ ಪ್ರಹ್ಲಾದ್ ಅತ್ಯುತ್ತಮ ಗಾಯಕಿ ಪ್ರಶಸ್ತಿ
ಅತ್ಯುತ್ತಮ ನಟ ಕ್ರಿಟಿಕ್ಸ್ - ಗೌರಿಶಂಕರ್(ಕೆರೆಬೇಟೆ)
ಅತ್ಯುತ್ತಮ ನಟಿ ಕ್ರಿಟಿಕ್ಸ್ - ಅಂಕಿತಾ ಅಮರ್(ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಚಿತ್ರ ಕ್ರಿಟಿಕ್ಸ್ - ಬ್ಲಿಂಕ್
ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್ ಜನ್ಯಾ (ಕೃಷ್ಣಂಪ್ರಣಯ ಸಖಿ)
ಅತ್ಯುತ್ತಮ ಡೆಬ್ಯೂ ನಟ - ಸಮರ್ಜಿತ್ ಲಂಕೇಶ್(ಗೌರಿ)
ಅತ್ಯುತ್ತಮ ಗೀತರಚನೆ - ವಿ. ನಾಗೇಂದ್ರಪ್ರಸಾದ್(ದ್ವಾಪರ ಹಾಡು)
Congratulations!
— Filmfare (@filmfare) February 21, 2026
The Filmfare Award for Best Actor in a Leading Role (Female) - Kannada goes to Akshatha Pandavapura for Koli Esru at the 70th Filmfare Awards South with Kerala Tourism.
Destination Partner: @KeralaTourism
Special Partner: @KamarFilmfactry
Co-Powered By:… pic.twitter.com/7ju0dtTsqc
ಅಲ್ಲು ಅರ್ಜುನ್ ಅತ್ಯುತ್ತಮ ನಟ
ತೆಲುಗಿನಲ್ಲಿ 'ಪುಷ್ಪ- 2' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ.
ಸುಕುಮಾರನ್ ಅತ್ಯುತ್ತಮ ನಿರ್ದೇಶಕ,
ಅಲ್ಲು ಅರ್ಜುನ್ ಅತ್ಯುತ್ತಮ ನಟ,
ದೇವಿಶ್ರೀ ಪ್ರಸಾದ್ ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಪ್ರಶಸ್ತಿ ಲಭಿಸಿದೆ.
ನಿವೇತಾ ಥಾಮಸ್ ಅತ್ಯುತ್ತಮ ನಟಿ ಪ್ರಶಸ್ತಿ
ತಮಿಳಿನಲ್ಲಿ
ಅಮರನ್ ಚಿತ್ರದ ನಟನೆಯಾಗಿ ಶಿವಕಾರ್ತಿಕೇಯನ್ ಅತ್ಯುತ್ತಮ ನಟ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ
'ಮೇಯಳಗನ್' ಚಿತ್ರದ ನಟನೆಗಾಗಿ ಕಾರ್ತಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿ
ಇದನ್ನೂ ಓದಿ: Ravi Basrur: ರವಿ ಬಸ್ರೂರ್ಗೆ 35 ಲಕ್ಷದ ವಾಚ್ ಗಿಫ್ಟ್ ಕೊಟ್ಟ ತೆಲುಗು ನಟ ವಿಶ್ವಕ್ ಸೇನ್
ಮಲಯಾಳಂನಲ್ಲಿ
'ಮಂಜುಮೇಲ್ ಬಾಯ್ಸ್' ಅತ್ಯುತ್ತಮ ಸಿನಿಮಾ,
ಮಮ್ಮುಟಿ ಅತ್ಯುತ್ತಮ ನಟ(ಭ್ರಮಯುಗಂ),
ಊರ್ವಶಿ ಅತ್ಯುತ್ತಮ ನಟಿ (ಉಲ್ಲೋಳುಕ್ಕು)