ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Darshan: ʻದಿ ಡೆವಿಲ್‌ʼ ಚಿತ್ರಕ್ಕೆ ಬುಕ್‌ ಮೈ ಶೋನಲ್ಲಿ ರಿವ್ಯೂ ಮಾಡಂಗಿಲ್ಲ, ರೇಟಿಂಗ್‌ ಕೊಡಂಗಿಲ್ಲ! ಕೋರ್ಟ್‌ನಿಂದ ಇಂಥ ಆರ್ಡರ್ ತಂದಿದ್ದೇಕೆ?

The Devil Movie: `ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ 'ದಿ ಡೆವಿಲ್' ಚಿತ್ರತಂಡ ಬುಕ್‌ ಮೈ ಶೋನಲ್ಲಿ ರೇಟಿಂಗ್ ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲು ಕೋರ್ಟ್‌ನಿಂದ ಆದೇಶ ತಂದಿರುವುದು ಅಚ್ಚರಿ ಮೂಡಿಸಿದೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ದರ್ಶನ್ ಸಹೋದರ ದಿನಕರ್ ತೂಗುದೀಪ, ದುಡ್ಡು ಕೊಟ್ಟು ನೆಗೆಟಿವ್ ವಿಮರ್ಶೆ ಬರೆಸಿ, ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವವರನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ಅಭಿನಯದ ʻದಿ ಡೆವಿಲ್ʼ ಸಿನಿಮಾವು ಡಿಸೆಂಬರ್‌ 11ರಂದು ಗ್ರ್ಯಾಂಡ್‌ ಆಗಿ ತೆರೆಕಂಡಿದೆ. ಈ ಚಿತ್ರವನ್ನು ಪ್ರಕಾಶ್‌ ವೀರ್‌ ನಿರ್ದೇಶಿಸಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ದರ್ಶನ್‌ ಜೈಲಿನಲ್ಲಿ ಇರುವುದರಿಂದ ಈ ಚಿತ್ರವು ಫ್ಯಾನ್ಸ್‌ಗೆ ವಿಶೇಷವಾಗಿದೆ. ಈ ಮಧ್ಯೆ ಚಿತ್ರತಂಡದ ಒಂದು ನಿರ್ಧಾರ ಅಚ್ಚರಿಯನ್ನು ಉಂಟು ಮಾಡಿದೆ. ಅದೇನಪ್ಪ ಅಂದರೆ, ಯಾವುದೇ ರೀತಿಯಲ್ಲೂ ಬುಕ್‌ ಮೈ ಶೋನಲ್ಲಿ ರೇಟಿಂಗ್‌ ಕೊಡದಂತೆ ಚಿತ್ರತಂಡ ಕೋರ್ಟ್‌ನಿಂದ ಆದೇಶ ತಂದಿದೆ.

ಬುಕ್‌ ಮೈ ಶೋನಲ್ಲಿ ರಿವ್ಯೂ ಕೊಡುವಂತಿಲ್ಲ

ಹೌದು, ಬುಕ್‌ ಮೈ ಶೋ ವೆಬ್‌ ಸೈಟ್‌ನಲ್ಲಿ ರಿವ್ಯೂ ಬರೆದು, ರೇಟಿಂಗ್‌ ಕೊಡಬಹುದು. ಆದರೆ ದಿ ಡೆವಿಲ್‌ ಚಿತ್ರಕ್ಕೆ ಆ ರೀತಿ ಕೊಡುವಂತಿಲ್ಲ. "ನ್ಯಾಯಾಲಯದ ಆದೇಶದಂತೆ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ" ಎಂದು ಬುಕ್‌ ಮೈ ಶೋ ಆಪ್‌ನಲ್ಲಿ ಬರೆಯಲಾಗಿದೆ. ಅಷ್ಟಕ್ಕೂ ಇಂಥದ್ದೊಂದು ನಿರ್ಧಾರವನ್ನು ಚಿತ್ರತಂಡ ತೆಗೆದುಕೊಂಡಿದ್ದೇಕೆ? ಆ ಬಗ್ಗೆ ದರ್ಶನ್‌ ಅವರ ಸಹೋದರ ದಿನಕರ್‌ ತೂಗುದೀಪ ಅವರು ಉತ್ತರ ನೀಡಿದ್ದಾರೆ.

The Devil Review: ರಾಜಕೀಯ ಚದುರಂಗದಾಟದಲ್ಲಿ ಡೆವಿಲ್‌ ಡಬಲ್‌ ಡ್ರಾಮಾ; ಇದು ದರ್ಶನ್‌ ಫ್ಯಾನ್ಸ್‌ಗೆ ಮಾತ್ರ ಹಂಗಾಮ!

ದಿನಕರ್‌ ಏನಂದ್ರು?

"ಬುಕ್ ಮೈ ಶೋ ಆಪ್‌ನಲ್‌ಲಿ ನೆಗೆಟಿವ್ ವಿಮರ್ಶೆ ಮಾಡುತ್ತಾರೆ. ಹಾಗಾಗಿ, ರಿವ್ಯೂ ಬಾಕ್ಸ್ ಅನ್ನು ಆಫ್ ಮಾಡಿಸಿದ್ದೇವೆ. ಯಾಕೆಂದರೆ, ಒಂದಷ್ಟು ಮಂದಿ ದುಡ್ಡು ಕೊಟ್ಟು ನೆಗೆಟಿವ್ ರೇಟಿಂಗ್ ಕೊಡಿಸುವುದು, ನೆಗೆಟಿವ್‌ ರಿವ್ಯೂ ಬರೆಸೋದು ಮಾಡುತ್ತಿದ್ದರು. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ನಡೆಯುತ್ತಿತ್ತು. ಬೇಕೆಂದೇ ನೆಗೆಟಿವ್‌ ಕಾಮೆಂಟ್ಸ್‌ ಹಾಕಿಸುತ್ತಾರೆ. ನಾನು ಈ ಹಿಂದೆ ನಿರ್ದೇಶಿಸಿದ್ದ ರಾಯಲ್‌ ಸಿನಿಮಾಗೂ ಇದೇ ಥರ ಆಗಿತ್ತು" ಎಂದು ದಿನಕರ್‌ ತೂಗುದೀಪ ಹೇಳಿದ್ದಾರೆ. ‌

The Devil Movie: ‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ಹೇಗೆ ನಗಿಸ್ತಾರೆ ಗೊತ್ತಾ?

ಡೆವಿಲ್‌ ಸಿನಿಮಾ ನೋಡಿ ಏನಂದ್ರು ದಿನಕರ್?

"ದಿ ಡೆವಿಲ್‌ ಸಿನಿಮಾ ಚೆನ್ನಾಗಿದೆ. ನನಗೆ ಕೃಷ್ಣ ಪಾತ್ರಕ್ಕಿಂತ ಡೆವಿಲ್ ಪಾತ್ರವೇ ತುಂಬಾ ಇಷ್ಟ ಆಯ್ತು. ಎರಡು ಪಾತ್ರಗಳಲ್ಲಿಯೂ ದರ್ಶನ್ ಅದ್ಭುತವಾಗಿ ನಟಿಸಿದ್ದಾನೆ. 14 ವರ್ಷದ ಹಿಂದೆ ಸಾರಥಿ ರಿಲೀಸ್ ಮಾಡಿದಾಗ ನನಗೆ ಭಯ ಇತ್ತು. ಆದರೆ ಈಗ ಆ ರೀತಿ ಇಲ್ಲ, ಅವ್ರ ಅಭಿಮಾನಿಗಳೇ ಸಿನಿಮಾವನ್ನು ಮೆರೆಸುತ್ತಿದ್ದಾರೆ" ಎಂದಿರುವ ದಿನಕರ್‌, ಇದೇ ವೇಳೆ ದರ್ಶನ್‌ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. "ದರ್ಶನ್ ರಾಜಕೀಯಕ್ಕೆ ಬರುವುದನ್ನ ಅಭಿಮಾನಿಗಳೇ ನಿರ್ಧಾರ ಮಾಡುತ್ತಾರೆ. ಆ ಥರ ಯಾವುದೇ ರಾಜಕೀಯ ಆಫರ್ ಬಂದಿರಲಿಲ್ಲ" ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.