ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಡಿಸಿ’ ಸೂಪರ್‌ ಹಿಟ್‌ ಬೆನ್ನಲ್ಲೇ ರಿಷಬ್‌ ಶೆಟ್ಟಿ ನಟನೆಯ ‘ಜೈ ಹನುಮಾನ್‌’ ಸಿನಿಮಾಗೆ ನಾಯಕಿಯಾದ ವಾಮಿಕಾ ಗಬ್ಬಿ!

ನಿರ್ದೇಶಕ ಲೋಕೇಶ್‌ ಕನಕರಾಜ್‌ ನಟನೆಯ 'ಡಿಸಿ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿ ಯಶಸ್ಸು ಕಂಡ ಬೆನ್ನಲ್ಲೇ, ನಟಿ ವಾಮಿಕಾ ಗಬ್ಬಿ ಅವರಿಗೆ ಬೃಹತ್ ಪ್ಯಾನ್ ಇಂಡಿಯಾ ಆಫರ್ ಸಿಕ್ಕಿದೆ. 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ, ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಚಿತ್ರತಂಡವನ್ನು ಅವರು ಸೇರಿಕೊಂಡಿದ್ದಾರೆ.

ನಿರ್ದೇಶಕ ಲೋಕೇಶ್‌ ಕನಕರಾಜ್‌ ನಟನಾಗಿ ಪಾದಾರ್ಪಣೆ ಮಾಡಿ, ಅರುಣ್‌ ಮಾದೇಶ್ವರನ್‌ ನಿರ್ದೇಶಿಸಿರುವ ‘ಡಿಸಿ’ (DC) ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕೇವಲ 5 ದಿನಗಳಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ, ಆ ಚಿತ್ರದ ನಟಿ ವಾಮಿಕಾ ಗಬ್ಬಿ ಅವರಿಗೆ ಮತ್ತೊಂದು ಬೃಹತ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುವ ಜ್ಯಾಕ್‌ಪಾಟ್‌ ಆಫರ್ ಸಿಕ್ಕಿದೆ.

ʻಕಾಂತಾರʼ ಖ್ಯಾತಿಯ ನಟ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ, ಪ್ರಶಾಂತ್ ವರ್ಮಾ ನಿರ್ದೇಶನದ ಪೌರಾಣಿಕ ಸಿನಿಮಾ ‘ಜೈ ಹನುಮಾನ್’ ಚಿತ್ರತಂಡವನ್ನು ವಾಮಿಕಾ ಗಬ್ಬಿ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ʻಕಾಂತಾರ: ಚಾಪ್ಟರ್‌ 1ʼ ನಂತರ ರಿಷಬ್‌ ಶೆಟ್ಟಿ ಒಪ್ಪಿಕೊಂಡಿರುವ ಸಿನಿಮಾ ಇದಾಗಿದೆ.

Rishab Shetty: ರಕ್ಷಿತ್‌ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ಪ್ರಮುಖ ಪಾತ್ರದಲ್ಲಿ ವಮಿಕಾ, ಶೀಘ್ರದಲ್ಲೇ ಶೂಟಿಂಗ್‌ನಲ್ಲಿ ಭಾಗಿ

'ಜೈ ಹನುಮಾನ್' ಚಿತ್ರದಲ್ಲಿ ವಾಮಿಕಾ ಗಬ್ಬಿ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಪ್ರಸ್ತುತ ಹೈದರಾಬಾದ್‌ನಲ್ಲಿ ಈ ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲೇ ವಮಿಕಾ ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಅವರ ಪಾತ್ರದ ಕುರಿತು ನಿರ್ಮಾಪಕರು ಯಾವುದೇ ಮಾಹಿತಿಯನ್ನು ಇನ್ನು ಬಿಟ್ಟುಕೊಟ್ಟಿಲ್ಲ. ವಿವಿಧ ಭಾಷೆಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ವಾಮಿಕಾ ಅವರ ಸೇರ್ಪಡೆ ʻಜೈ ಹನುಮಾನ್‌ʼ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Rishab Shetty: ಹೊಂಬಾಳೆ ಬಳಿಕ ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

'ಹನು-ಮಾನ್' ಸೀಕ್ವೆಲ್ 'ಜೈ ಹನುಮಾನ್'

2024ರಲ್ಲಿ ತೆರೆಕಂಡು ಭಾರಿ ಯಶಸ್ಸು ಸಾಧಿಸಿದ್ದ ಸೂಪರ್ ಹೀರೋ ಸಿನಿಮಾ 'ಹನು-ಮಾನ್'ನ ಮುಂದುವರಿದ ಭಾಗವೇ ಈ 'ಜೈ ಹನುಮಾನ್'. ಇದು 'ಪ್ರಶಾಂತ್ ವರ್ಮಾ ಸಿನೆಮ್ಯಾಟಿಕ್ ಯೂನಿವರ್ಸ್' (PVCU) ಭಾಗವಾಗಿದ್ದು, ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಮೊದಲ ಭಾಗದಲ್ಲಿ ತೇಜ ಸಜ್ಜ ನಟಿಸಿದ್ದರೆ, ಈ ಭಾಗದಲ್ಲಿ ನಟ ರಿಷಬ್ ಶೆಟ್ಟಿ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ಕಲಿಯುಗದಲ್ಲಿ ಹನುಮಂತನ ಶಕ್ತಿ, ಭಕ್ತಿ ಮತ್ತು ಆತನ ಸಾಹಸಗಳನ್ನು ಅನ್ವೇಷಿಸುವ ಪೌರಾಣಿಕ ಆಕ್ಷನ್ ಮಹಾಕಾವ್ಯವಾಗಿ ಮೂಡಿಬರಲಿದೆಯಂತೆ.