ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rishab Shetty: ಹೊಂಬಾಳೆ ಬಳಿಕ ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

Rishab Shetty: ರಿಷಬ್ ಶೆಟ್ಟಿ ಜೊತೆ ಯಾವುದೇ ಮನಸ್ತಾಪ ಇಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಆದರೂ ಇಂತಾದೊಂದು ಊಹಾಪೋಹ ಅಭಿಮಾನಿಗಳಲ್ಲಿದೆ. ಈ ವದಂತಿ ನಡುವೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲ ರುಕ್ಮಿಣಿ ವಸಂತ್‌ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ ರಿಷಬ್‌.

ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Mar 27, 2026 2:09 PM

ರಿಷಬ್ ಶೆಟ್ಟಿ (Rishab Shetty) ಜೊತೆ ಯಾವುದೇ ಮನಸ್ತಾಪ ಇಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಆದರೂ ಇಂತಾದೊಂದ ಊಹಾಪೋಹ ಅಭಿಮಾನಿಗಳಲ್ಲಿದೆ. ಈ ವದಂತಿ ನಡುವೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ರಿಷಬ್ ಶೆಟ್ಟಿ ಅನ್‌ಫಾಲೋ (Unfollow) ಮಾಡಿದ್ದಾರೆ. ಅಷ್ಟೇ ಅಲ್ಲ ರುಕ್ಮಿಣಿ ವಸಂತ್‌ (Rukmini Vasanth) ಅವರನ್ನೂ ಅನ್‌ಫಾಲೋ ಮಾಡಿದ್ದಾರೆ ರಿಷಬ್‌.

ಮುಂದಿನ ಚಿತ್ರದ ಬಗ್ಗೆ ಸುಳಿವು

ಯುಗಾದಿ ಹಬ್ಬದಂದು ರಿಷಬ್‌ ಅವರು ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ ನಂತರ ಹೊಂಬಾಳೆ ಫಿಲ್ಮ್ಸ್‌ನ್ನು ಅನ್‌ಫಾಲೋ ಮಾಡಿದ್ದರು. ಈ ಬಗ್ಗೆ ವದಂತಿ ವೈರಲ್‌ ಆಗುತ್ತಿರುವಾಗಲೇ ಇದೀಗ ರುಕ್ಮಿಣಿ ವಸಂತ್‌ ಹಾಗೂ ರಾಜ್‌ ಬಿ ಶೆಟ್ಟಿ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಹೀಗಾಗಿ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಇದನ್ನೂ ಓದಿ: Dhurandhar 2: ಜವಾನ್, ಛಾವಾ, ಸ್ತ್ರೀ 2 ದಾಖಲೆ ಉಡೀಸ್; ʻಧುರಂಧರ್ʼ ಭರ್ಜರಿ ಕಲೆಕ್ಷನ್‌

ರಿಷಬ್ ಹಾಗೂ ರಾಜ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಪಾಪೋಹ ಬಹಳ ದಿನಗಳಿಂದ ಶುರುವಾಗಿತ್ತು. ಈ ಬಗ್ಗೆ ರಾಜ್ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಆದರೆ ರಿಷಬ್ ಶೆಟ್ಟಿ ಮಾತ್ರ ಮೌನ ವಹಿಸಿದ್ದಾರೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿತ್ತು.

ರಿಷಬ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆ ಪಡದಿದ್ದು ‘ಕಾಂತಾರ’ ಸಿನಿಮಾ ಮೂಲಕ. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಆ ಬಳಿಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮಾಡಿದರು. ಈ ಚಿತ್ರಕ್ಕೆ ಎರಡನೇ ಚಾಪ್ಟರ್ ಬರಬೇಕಿತ್ತು. ಹೀಗಿರುವಾಗಲೇ ರಿಷಬ್ ಅವರು ಯುಗಾದಿಗೆ ‘ಚಾಪ್ಟರ್ 2’ ಎಂದು ರಿಷಬ್ ಘೋಷಣೆ ಮಾಡಿದ್ದರು.

‘ಕಾಂತಾರ’ ಸರಣಿಯನ್ನು ನಿರ್ಮಾಣ ಮಾಡಿರೋದು ಹೊಂಬಾಳೆ ಫಿಲ್ಮ್ಸ್. ಆದರೆ, ‘ಚಾಪ್ಟರ್ 2’ ಅನೌನ್ಸ್ ಮಾಡಿರೋದು ಅವರದ್ದೇ ಬ್ಯಾನರ್ ಅಡಿಯಲ್ಲಿ. ರಿಷಬ್ ಪೋಸ್ಟರ್​ ಅಲ್ಲಿ ಎಲ್ಲಿಯೂ ಇದು ‘ಕಾಂತಾರ: ಚಾಪ್ಟರ್ 2’ ಎಂದು ಅನೌನ್ಸ್ ಮಾಡಿಲ್ಲ. ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಎರಡನೇ ಚಾಪ್ಟರ್ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಇದನ್ನೂ ಓದಿ: Ramayana: ʻರಾಮಾಯಣʼ ಸಿನಿಮಾದಿಂದ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌! ಆದ್ರೂ ಫ್ಯಾನ್ಸ್‌ಗೆ ನಿರಾಸೆ ಏಕೆ?

ಇವುಗಳ ಮಧ್ಯೆ ರಿಷಬ್ ಅವರು ಇನ್​​ಸ್ಟಾದಲ್ಲಿ ‘ಕಾಂತಾರ’ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಖಾತೆಯನ್ನು ಅನ್​​​ಫಾಲೋ ಮಾಡಿ, ಈಗ ರಾಜ್‌ ಹಾಗೂ ರುಕ್ಮಿಣಿ ಅವರನ್ನೂ ಅನ್‌ಫಾಲೋ ಮಾಡಿರೋದು ಚರ್ಚೆಗೆ ಕಾರಣ ಆಗಿದೆ. ಆದರೆ ರಾಜ್‌ ಹಾಗೂ ರುಕ್ಮಿಣಿ ಅವರ ರಿಷಬ್‌ ಅವರನ್ನು ಫಾಲೋ ಮಾಡ್ತಾ ಇದ್ದಾರೆ.