ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Devil's Double Next Level Movie: ʼಡಿಡಿ ನೆಕ್ಸ್ಟ್ ಲೆವೆಲ್ʼ ಸಿನಿಮಾ ಒಟಿಟಿಗೆ ಎಂಟ್ರಿ; ಜೂನ್‌ 13ರಿಂದ ಝಿ 5ನಲ್ಲಿ ಸ್ಟ್ರೀಮಿಂಗ್

ಕಾಲಿವುಡ್‌ ನಟ ಸಂತಾನಂ ಅಭಿನಯದ ʼಡಿಡಿ ನೆಕ್ಸ್ಟ್‌ ಲೆವೆಲ್‌ʼ ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಎಸ್.ಪ್ರೇಮ್ ಆನಂದ್ ನಿರ್ದೇಶನದ ಈ ಚಿತ್ರ ಜೂ. 13ರಂದು ಜೀ 5ಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ʼದಿಲ್ಲುಕು ದುಡ್ಡುʼ ಫ್ರ್ಯಾಂಚೈಸ್‌ನ ನಾಲ್ಕನೇ ಅಧ್ಯಾಯವಾದ ʼDD ನೆಕ್ಸ್ಟ್ ಲೆವೆಲ್ʼನಲ್ಲಿ ಸೆಲ್ವ ರಾಘವನ್, ಗೌತಮ್ ವಾಸುದೇವ್ ಮೆನನ್ ಮತ್ತು ಗೀತಿಕಾ ತಿವಾರಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಜೂನ್‌ 13ರಿಂದ ಝೀ 5ನಲ್ಲಿ ʼDD ನೆಕ್ಸ್ಟ್ ಲೆವೆಲ್ʼ ಸಿನಿಮಾ ಸ್ಟ್ರೀಮಿಂಗ್

Devil's Double Next Level Movie

Profile Pushpa Kumari Jun 11, 2025 7:54 PM

ಚೆನ್ನೈ: ತಮಿಳು ನಟ ಸಂತಾನಂ (Santhanam) ಅಭಿನಯದ ʼಡಿಡಿ ನೆಕ್ಸ್ಟ್‌ ಲೆವೆಲ್‌ʼ ಸಿನಿಮಾ (Devil's Double Next Level Movie) ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಎಸ್. ಪ್ರೇಮ್ ಆನಂದ್ ನಿರ್ದೇಶನದ ಈ ಚಿತ್ರ ಜೂ. 13ರಂದು ಝೀ 5ಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ʼದಿಲ್ಲುಕು ದುಡ್ಡುʼ ಫ್ರ್ಯಾಂಚೈಸ್‌ನ ನಾಲ್ಕನೇ ಅಧ್ಯಾಯವಾದ ʼDD ನೆಕ್ಸ್ಟ್ ಲೆವೆಲ್ʼನಲ್ಲಿ ಸೆಲ್ವ ರಾಘವನ್, ಗೌತಮ್ ವಾಸುದೇವ್ ಮೆನನ್ ಮತ್ತು ಗೀತಿಕಾ ತಿವಾರಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆ್ಯಕ್ಷನ್-ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ʼDD ನೆಕ್ಸ್ಟ್ ಲೆವೆಲ್ʼಗೆ ದಿ ಶೋ ಪೀಪಲ್ ಮತ್ತು ನಿಹಾರಿಕಾ ಎಂಟರ್‌ ಟೈನ್‌ಮೆಂಟ್ ಬಂಡವಾಳ ಹೂಡಿದೆ.

ದಕ್ಷಿಣ ಭಾರತದ ಭಾಷೆಗಳಲ್ಲಿ ʼಡಿಡಿ ನೆಕ್ಸ್ಟ್ ಲೆವೆಲ್ʼ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡ, ‌ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ನೀವು ಮನೆ‌ಮಂದಿ‌ ಕುಳಿತು ಸಿನಿಮಾ ವೀಕ್ಷಿಸಬಹುದು. ಝೀ 5 ದಕ್ಷಿಣ ಮಾರುಕಟ್ಟೆಯ ವ್ಯವಹಾರ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್ ಮಾತನಾಡಿ, ಝೀ 5ಗೆ ಉತ್ತಮ ಕಥೆಯುಳ್ಳ ಸಿನಿಮಾಗಳನ್ನು ತರುವಲ್ಲಿ ನಾವು ಅಪಾರ ಹೆಮ್ಮೆ ಪಡುತ್ತೇವೆ. ದಿ ಶೋ ಪೀಪಲ್ ಮತ್ತು ನಿಹಾರಿಕಾ ಎಂಟರ್‌ಟೈನ್‌ಮೆಂಟ್‌ನ ಈ ಹಾರರ್-ಕಾಮಿಡಿ ಸಿನಿಮಾ ಪ್ರೇಕ್ಷಕರಿಗೆ ಬಹಳಷ್ಟು ಇಷ್ಟ ಆಗಲಿದೆ. ʼಡೆವಿಲ್ಸ್ ಡಬಲ್: ನೆಕ್ಸ್ಟ್ ಲೆವೆಲ್ʼ ನಮ್ಮ ವೀಕ್ಷಕರಿಗೆ ಮನರಂಜನೆಯ ಜತೆಗೆ ವಿಶೇಷ ಅನುಭವವನ್ನು ನೀಡುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

ನಿರ್ದೇಶಕ ಪ್ರೇಮ್ ಆನಂದ್ ಮಾತನಾಡಿ, ಝೀ 5ಗಿಂತ ಉತ್ತಮ ವೇದಿಕೆಯನ್ನು ನಾನು ನಿಜವಾಗಿಯೂ ಕೇಳಲು ಸಾಧ್ಯ ವಾಗಲಿಲ್ಲ. ನಮ್ಮ ಚಿತ್ರಕ್ಕೆ ಝೀ 5 ಜಾಗತಿಕ ವೇದಿಕೆ. ಈ ಖುಷಿಯನ್ನು ಎಲ್ಲೆಡೆ ವೀಕ್ಷಕರೊಂದಿಗೆ ಹಂಚಿಕೊಳ್ಳಲು ನಾನು ಬಹಳಷ್ಟು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: Thimmana Mottegalu Movie: ʼತಿಮ್ಮನ ಮೊಟ್ಟೆಗಳುʼ ಚಿತ್ರ ಜೂ.27 ಕ್ಕೆ ರಿಲೀಸ್‌- ಟೈಟಲ್‌ನಿಂದಲೇ ಭಾರೀ ಕುತೂಹಲ ಮೂಡಿಸಿದೆ ಈ ಸಿನಿಮಾ!

ನಟ ಸಂತಾನಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾನು ನಿರ್ವಹಿಸಿದ ಅತ್ಯಂತ ಮನರಂಜನೆ ಮತ್ತು ತೃಪ್ತಿಕರ ಪಾತ್ರ ಗಳಲ್ಲಿ ಕಿಸ್ಸಾ ಪಾತ್ರವೂ ಒಂದು. ʼಡೆವಿಲ್ಸ್ ಡಬಲ್: ನೆಕ್ಸ್ಟ್ ಲೆವೆಲ್ʼ ಈಗ ಝೀ 5 ಫ್ಲಾಟ್‌ಫಾರ್ಮ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೋಡಲು ಉತ್ತಮ ಚಿತ್ರ. ಪ್ರೇಕ್ಷಕರಿಗೆ ಭಯ ಹುಟ್ಟಿಸುವ, ನಗಿಸುವ ಕ್ಷಣಗಳನ್ನು ತೋರ್ಪಡಿಸುವ ವೈಲ್ಡ್ ರೈಡ್ ಜರ್ನಿ ಎಂದು ಹೇಳಿದ್ದಾರೆ.