ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಲಿವುಡ್‌ನ ಶಿವಾಂಗಿ ವರ್ಮಾ ಜೊತೆ ಹೆಜ್ಜೆ ಹಾಕಿದ 'ಡೆಡ್ಲಿ'‌ ಆದಿತ್ಯ; 'ಟೆರರ್' ಚಿತ್ರದ ʻಬೊಂಬೆ ಬೊಂಬೆʼ ಹಾಡಿಗೆ ಫ್ಯಾನ್ಸ್ ಫಿದಾ!

ʻಟೆರರ್‌ʼ ಚಿತ್ರದ ʻಬೊಂಬೆ ಬೊಂಬೆʼ ಹಾಡು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. 'ಡೆಡ್ಲಿ' ಸ್ಟಾರ್ ಆದಿತ್ಯ ಮತ್ತು ಬಾಲಿವುಡ್ ಬೆಡಗಿ ಶಿವಾಂಗಿ ವರ್ಮಾ ಅವರ ಜುಗಲ್‌ಬಂದಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಹಾಡಿಗೆ ಬಾಲಿವುಡ್‌ನ ಮಮತಾ ಶರ್ಮಾ ಧ್ವನಿ ನೀಡಿದ್ದಾರೆ. ಈ ಗ್ಯಾಂಗ್‌ಸ್ಟರ್ ಸಿನಿಮಾ ಏಪ್ರಿಲ್ 10ರಂದು ತೆರೆಕಾಣಲಿದೆ.

ಸ್ಯಾಂಡಲ್‌ವುಡ್‌ನ 'ಡೆಡ್ಲಿ' ಸ್ಟಾರ್ ಆದಿತ್ಯ ಅಭಿನಯದ ಬಹುನಿರೀಕ್ಷಿತ "ಟೆರರ್" ಚಿತ್ರವು ಸದ್ಯ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು, ಈಗ ಚಿತ್ರದ "ಬೊಂಬೆ ಬೊಂಬೆ" ಎಂಬ ಸ್ಪೆಷಲ್ ಸಾಂಗ್‌ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್‌ ಪಡೆದು ಟ್ರೆಂಡಿಂಗ್ ಲಿಸ್ಟ್ ಸೇರಿದೆ.

ಸ್ಯಾಂಡಲ್‌ವುಡ್‌ಗೆ ಬಂದ ಗಾಯಕಿ ಮಮತಾ ಶರ್ಮಾ

ಡಾ. ವಿ. ನಾಗೇಂದ್ರ ಪ್ರಸಾದ್ ಈ ಹಾಡಿಗೆ ಕಿಕ್ ನೀಡುವಂತಹ ಸಾಹಿತ್ಯ ಬರೆದಿದ್ದಾರೆ. ಹರ್ಷವರ್ಧನ್ ರಾಜ್ ಅವರ ಸಂಗೀತಕ್ಕೆ 'ಮುನ್ನಿ ಬದ್ನಾಮ್ ಹುಯಿ' ಖ್ಯಾತಿಯ ಬಾಲಿವುಡ್ ಗಾಯಕಿ ಮಮತಾ ಶರ್ಮಾ ಧ್ವನಿ ನೀಡಿರುವುದು ವಿಶೇಷ. ಈಗಾಗಲೇ ಕನ್ನಡದಲ್ಲಿ ʻನಾ ಬೋರ್ಡ್‌ ಇರದ ಬಸ್ಸನು ಹತ್ತಿ ಚೋಕರಿ..ʼ, ʻಹಲೋ 123 ಮೈಕ್ ಟೆಸ್ಟಿಂಗ್..ʼ, ʻಸೇಸಮ್ಮ ಸೇಸಮ್ಮ ಬಾಗಿಲು ತೆಗೆಯಮ್ಮ..ʼ ಮುಂತಾದ ಹಾಡುಗಳನ್ನು ಈ ಗಾಯಕಿ ಹಾಡಿದ್ದು, ʻಬೊಂಬೆ ಬೊಂಬೆ..ʼ ಹಾಡನ್ನು ಮಸ್ತ್‌ ಆಗಿ ಹಾಡಿದ್ದಾರೆ.

ತುಳುನಾಡಿನ ʻವೀರ ಕಂಬಳʼ ಸಿನಿಮಾದ ಟ್ರೇಲರ್‌ ರಿಲೀಸ್ ಮಾಡಿದ ಹಂಸಲೇಖ;‌ ಪಾತ್ರದ ಗುಟ್ಟನ್ನು ರಿವೀಲ್‌ ಮಾಡಲಿಲ್ಲ ನಟ ಆದಿತ್ಯ

ನಟ ಆದಿತ್ಯ ಜೊತೆಗೆ ಉತ್ತರ ಭಾರತದ ಬೆಡಗಿ ಶಿವಾಂಗಿ ವರ್ಮ ಅವರು ಮಾದಕವಾಗಿ ಹೆಜ್ಜೆ ಹಾಕಿದ್ದಾರೆ. ಆದಿತ್ಯ ಮತ್ತು ಶಿವಾಂಗಿ ಜೋಡಿ ಈ ಹಾಡಿನ ಮೆರುಗನ್ನು ಹೆಚ್ಚಿಸಿದೆ. ಭಾನು ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದು, ನಟ ಶರತ್‌ ಲೋಹಿತಾಶ್ವ ಕೂಡ ಹಾಡಿನಲ್ಲಿದ್ದಾರೆ.

ಗ್ಯಾಂಗ್‌ಸ್ಟರ್ ಅವತಾರದಲ್ಲಿ ಆದಿತ್ಯ

ಅಂಡರ್‌ವರ್ಲ್ಡ್ ಕಥೆಗಳ ಮೂಲಕವೇ ಜನಪ್ರಿಯರಾಗಿರುವ ನಟ ಆದಿತ್ಯ, ಈ ಚಿತ್ರದಲ್ಲಿ ಮತ್ತೊಮ್ಮೆ ಪಕ್ಕಾ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಹಿಂದಿನ ಪಾತ್ರಗಳಿಗಿಂತ 'ಟೆರರ್' ಚಿತ್ರದ ಈ ಪಾತ್ರ ತುಂಬಾ ವಿಭಿನ್ನವಾಗಿ ಮತ್ತು ರಗಡ್ ಆಗಿದೆ ಎಂಬುದು ಚಿತ್ರತಂಡ ನೀಡುವ ಮಾಹಿತಿ. ರಂಜನ್ ಶಿವರಾಮ್ ಗೌಡ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಅವರೇ ಬರೆದುಕೊಂಡಿದ್ದಾರೆ.

ಆದಿತ್ಯ, ಪ್ರಕಾಶ್‌ ರಾಜ್‌ ನಟನೆಯ ʻವೀರ ಕಂಬಳʼ ಸಿನಿಮಾ ರಿಲೀಸ್‌ ಬಗ್ಗೆ ಬಿಗ್‌ ಅಪ್ಡೇಟ್;‌ ಇದು ತುಳುನಾಡಿನ ನೆಲಮೂಲದ ಕಥೆ

ಇನ್ನು, ಈ ಸಿನಿಮಾಕ್ಕೆ ಉಪ್ಪಿ ಎಂಟರ್ ಟೈನರ್ಸ್ ಹಣ ಹಾಕಿದೆ. ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀನಗರ ಕಿಟ್ಟಿ, ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ಧರ್ಮ, ಕೋಟೆ ಪ್ರಭಾಕರ್ ಮತ್ತು ರವಿ ಭಟ್ ಅವರಂತಹ ಘಟಾನುಘಟಿ ಕಲಾವಿದರು ಈ ಆಕ್ಷನ್ ಥ್ರಿಲ್ಲರ್ ಚಿತ್ರದ ಭಾಗವಾಗಿದ್ದಾರೆ. ನವೀನ್ ಅಕ್ಷಿ ಅವರ ಛಾಯಾಗ್ರಹಣ ಹಾಗೂ ಕನಲ್ ಕಣ್ಣನ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ʻಟೆರರ್ʼ ಚಿತ್ರವನ್ನು ಏಪ್ರಿಲ್ 10 ರಂದು ರಾಜ್ಯಾದ್ಯಂತ ತೆರೆಕಾಣಿಸಲು ಚಿತ್ರತಂಡ ರೆಡಿಯಾಗಿದೆ.