ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಅವರು 2018ರಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ದಂಪತಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಪುತ್ರಿ ದುವಾ ಜನಿಸಿದಳು. ಈಗ ಎರಡನೇ ಮಗುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ತಮ್ಮ ಪುತ್ರಿ ದುವಾ (Dua) ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಯನ್ನು ಅವರಿಬ್ಬರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಈ ಘೋಷಣೆಯ ನಂತರ, ಸೋಷಿಯಲ್ ಮೀಡಿಯಾದಲ್ಲಿ ನಟಿಯ ಬಗ್ಗೆ ಚರ್ಚೆಗಳು ಆಗುತ್ತಿವೆ. ಮಾರ್ಚ್ 20 ರಂದು ಮುಂಬೈನಲ್ಲಿ ನಡೆದ ರಿಷಬ್ ರಿಖಿರಾಮ್ ಶರ್ಮಾ ಅವರ ಕಾರ್ಯಕ್ರಮಕ್ಕೆ ನಟಿ ಭೇಟಿ ಕೊಟ್ಟಿದ್ದರು.
ಇದನ್ನೂ ಓದಿ: Pawan Kalyan : ಶಸ್ತ್ರಚಿಕಿತ್ಸೆ ಬಳಿಕ ಪವನ್ ಕಲ್ಯಾಣ್ ಆರೋಗ್ಯದ ಬಗ್ಗೆ ಪತ್ನಿ ಹೇಳಿದ್ದೇನು?
ಸಂಗೀತ ಕಚೇರಿಗೆ ದೀಪಿಕಾ ಭೇಟಿ ನೀಡಿದ್ದು ಗಮನ ಸೆಳೆಯುವ ಒಂದು ಕ್ಷಣವಾಗಿತ್ತು. ದೀಪಿಕಾ ರಣವೀರ್ ಅವರ ತಾಯಿ ಅಂಜು ಭಾವನಾನಿ ಮತ್ತು ಸಹೋದರಿ ರಿತಿಕಾ ಭಾವನಾನಿ ಅವರೊಂದಿಗೆ ಆಕರ್ಷಕವಾದ ಅಜ್ರಖ್ ಕುರ್ತಾ ಸೆಟ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ವೇಳೆ ನಟಿ ಗರ್ಭಿಣಿ ಎಂಬ ಚರ್ಚೆಗಳು ಆಗುತ್ತಿತ್ತು.
ಸಂಗೀತ ಕಾರ್ಯಕ್ರಮದ ನಂತರದ ದಿನಗಳಲ್ಲಿ, ದೀಪಿಕಾ ಸಡಿಲವಾದ ಟಿ-ಶರ್ಟ್ ಮತ್ತು ಬ್ಯಾಗಿ ಪ್ಯಾಂಟ್ ಉಡುಪಗಳನ್ನು ಧರಿಸಿದ್ದರು. ಈ ಲುಕ್‌ಗಳು ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿತು. ಈಗ ಈ ಬಗ್ಗೆಯೇ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ.
ಪ್ರಸ್ತುತ ರಣವೀರ್ ಸಿಂಗ್ ಅವರು ತಮ್ಮ ಇತ್ತೀಚಿನ ಚಿತ್ರ ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಾದರೂ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನಿಂತು ದಾಖಲೆಗಳನ್ನು ಬರೆಯುತ್ತಿದೆ. ಈ ಗೆಲುವಿನ ಬೆನ್ನಲ್ಲೇ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ವೃತ್ತಿಪರ ರಂಗದಲ್ಲಿ, ದೀಪಿಕಾ ಸಿದ್ಧಾರ್ಥ್ ಆನಂದ್ ನಿರ್ದೇಶನದ ಕಿಂಗ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಮತ್ತೆ ಒಂದಾಗಲಿದ್ದಾರೆ . ಈ ಚಿತ್ರದಲ್ಲಿ ಸುಹಾನಾ ಖಾನ್, ರಾಣಿ ಮುಖರ್ಜಿ, ಅನಿಲ್ ಕಪೂರ್, ಜಾಕಿ ಶ್ರಾಫ್, ಅಭಯ್ ವರ್ಮಾ, ಅಭಿಷೇಕ್ ಬಚ್ಚನ್, ಅರ್ಷದ್ ವಾರ್ಸಿ ಮತ್ತು ಜೈದೀಪ್ ಅಹ್ಲಾವತ್ ಕೂಡ ನಟಿಸಿದ್ದಾರೆ ಮತ್ತು ಡಿಸೆಂಬರ್ 24, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Mahavatar Parshuram: ‘ಮಹಾವತಾರ’ ಸರಣಿಯ ಎರಡನೇ ಸಿನಿಮಾವನ್ನು ಘೋಷಿಸಿದ ಹೊಂಬಾಳೆ
ಅಟ್ಲೀ ನಿರ್ದೇಶನದ ಮತ್ತು ಅಲ್ಲು ಅರ್ಜುನ್ ಜೊತೆ ನಟಿಸಿರುವ ರಾಕಾ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.