ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎರಡನೇ ಬಾರಿಗೆ ಪೋಷಕರಾಗಲಿರುವ ದೀಪಿಕಾ ಪಡುಕೋಣೆ- ರಣವೀರ್‌ ಸಿಂಗ್‌; ಕ್ಯೂಟ್‌ ಫೋಟೋ ಹಂಚಿಕೊಂಡ ಜೋಡಿ

Deepika Padukone and Ranveer Singh: ಬಾಲಿವುಡ್ ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಭಾನುವಾರ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದಾರೆ. ಸೆಪ್ಟೆಂಬರ್ 2024 ರಲ್ಲಿ ತಮ್ಮ ಮೊದಲ ಮಗು ಮಗಳು ದುವಾಳನ್ನು ಸ್ವಾಗತಿಸಿದ್ದರು.

ಎರಡನೇ ಬಾರಿಗೆ ಪೋಷಕರಾಗಲಿರುವ ದೀಪಿಕಾ ಪಡುಕೋಣೆ- ರಣವೀರ್‌ ಸಿಂಗ್‌

ಎರಡನೇ ಬಾರಿಗೆ ಪೋಷಕರಾಗಲಿರುವ ದೀಪಿಕಾ- ರಣವೀರ್‌ -

Vishakha Bhat Heggar
Vishakha Bhat Heggar Apr 19, 2026 11:18 AM

ಮುಂಬೈ: ಬಾಲಿವುಡ್ ನಟರಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಭಾನುವಾರ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದಾರೆ. ದೀಪಿಕಾ ಮತ್ತು ರಣವೀರ್ ತಮ್ಮ ಮಗಳು ದುವಾ ಪಡುಕೋಣೆ ಸಿಂಗ್ ಗರ್ಭಧಾರಣೆಯ ಪರೀಕ್ಷಾ ಕಿಟ್‌ ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್‌ ಮಾಡಿದ್ದು, ಅಭಿಮಾನಿಗಳೊಂದಿಗೆ ತಾಯ್ತನದ ವಿಷಯವನ್ನು ಹಂಚಿಕೊಂಡರು. 2018 ರಲ್ಲಿ ಲೇಕ್ ಕೊಮೊದಲ್ಲಿ ದೀಪಿಕಾ ಮತ್ತು ರಣವೀರ್ ವಿವಾಹವಾಗಿದ್ದರು.

ಗೋಲಿಯೋಂ ಕಿ ರಾಸಲೀಲಾ ರಾಮ್-ಲೀಲಾ ಚಿತ್ರೀಕರಣದ ಸಮಯದಲ್ಲಿ ಈ ಜೋಡಿ ಡೇಟಿಂಗ್‌ ನಡೆಸುತ್ತಿದ್ದರು. ಹಲವು ವರ್ಷಗಳ ಡೇಟಿಂಗ್‌ ಬಳಿಕ 2015 ರಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2018 ರಲ್ಲಿ ವಿವಾಹವಾಗಿದ್ದರು. ಸೆಪ್ಟೆಂಬರ್ 2024 ರಲ್ಲಿ ತಮ್ಮ ಮೊದಲ ಮಗು ಮಗಳು ದುವಾಳನ್ನು ಸ್ವಾಗತಿಸಿದ್ದರು. ಇದುವರೆಗೂ ತಮ್ಮ ಮೊದಲ ಮಗುವಿನ ಮುಖವನ್ನು ಪೋಸ್ಟ್‌ ಮಾಡಿಲ್ಲ. ಎರಡನೇ ಬಾರಿಗೆ ತಾಯಿಯಾಗುತ್ತಿರುವ ದೀಪಿಕಾಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನಾ ಸಂದೇಶಗಳು ಹರಿದು ಬಂದಿವೆ.

ಬಾಲಿವುಡ್‌ನ ಸಕ್ಸ್‌ಸ್‌ಫುಲ್‌ ನಟಿಯರ ಪೈಕಿ ಒಬ್ಬರಾದ ದೀಪಿಕಾ ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಜೊತೆಗೆ ಕಿಂಗ್ ಚಿತ್ರದಲ್ಲಿ ಮುಂದೆ ಬಣ್ಣ ಹಚ್ಚಲಿದ್ದಾರೆ. ಅಲ್ಲು ಅರ್ಜುನ್‌ ಅವರ ರಾಕಾ ಚಿತ್ರದಲ್ಲಿಯೂ ನಟಿಸುತ್ತಾರೆ ಎಂದು ಹೇಳಲಾಗಿದೆ.

ಬಾಲಿವುಡ್‌ನಲ್ಲಿ ಧೂಳೆಬ್ಬಿಸಿರುವ ರಣವೀರ್‌ ಸಿಂಗ್‌ ನಟನೆ ಧುರಂಧರ್‌ ಚಿತ್ರ ಮಾರ್ಚ್ 2026ರ ಹೊತ್ತಿಗೆ ₹1500 ಕೋಟಿ ಕ್ಲಬ್ ಸೇರಿದ್ದು, ಹಲವು ದಾಖಲೆಗಳನ್ನು ಪುಡಿಗಟ್ಟಿದೆ. ‘ಧುರಂದರ್‌ 2: ದಿ ರಿವೆಂಜ್’ ಸಿನಿಮಾ ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ.