ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತಿ ರಣವೀರ್‌ ಸಿಂಗ್‌ ನಟಿಸಿರುವ ʻಧುರಂಧರ್‌ 2ʼ ಬಗ್ಗೆ ದೀಪಿಕಾಗೆ ಅಸಮಾಧಾನ? ಅಸಲಿ ವಿಚಾರವನ್ನ ಹೊರಬಿತ್ತು ನೋಡಿ!

ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಬಾಕ್ಸ್ ಆಫೀಸ್‌ನಲ್ಲಿ 1650 ಕೋಟಿ ರೂ. ಗಳಿಸಿ ದಾಖಲೆ ಬರೆಯುತ್ತಿದ್ದರೂ ಪತ್ನಿ ದೀಪಿಕಾ ಪಡುಕೋಣೆ ಏನೊಂದು ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದವು. ಆದರೆ ನೆಟ್ಟಿಗರೊಬ್ಬರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ದೀಪಿಕಾ, ವದಂತಿಗಳಿಗೆ ತೆರೆ ಎಳೆದಿದ್ದಾರೆ.

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ದಾಖಲೆಗಳನ್ನು ಮಾಡಿದೆ. ಅನೇಕ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಈ ಸಿನಿಮಾವನ್ನು ಹೊಗಳಿದ್ದಾರೆ. ಆದರೆ ಎಲ್ಲರ ಕಣ್ಣು ಇರುವುದು ಮಾತ್ರ ದೀಪಿಕಾ ಪಡುಕೋಣೆ ಮೇಲೆ. ತನ್ನ ಪತಿ ನಟಿಸಿರುವ ಧುರಂಧರ್‌ 2 ಸಿನಿಮಾ ದೊಡ್ಡ ಹಿಟ್‌ ಆಗಿದೆ. ಆದರೂ ದೀಪಿಕಾ ಬಗ್ಗೆ ಸಾರ್ವಜನಿಕವಾಗಿ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ ಎಂಬುದು ಪ್ರಶ್ನೆ. ಅಂತಿಮವಾಗಿ ಈ ಬಗ್ಗೆ ದೀಪಿಕಾ ರಿಯಾಕ್ಟ್‌ ಮಾಡಿದ್ದಾರೆ.

ಪೋಸ್ಟ್‌ವೊಂದಕ್ಕೆ ಕಾಮೆಂಟ್‌ ಮಾಡಿದ ದೀಪಿಕಾ

ನೆಟ್ಟಿಗರೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಾಕಿದ್ದರು. "ದೀಪಿಕಾ ಪಡುಕೋಣೆ 500 ಕೋಟಿ ಬಜೆಟ್‌ನ ಚಿತ್ರಕ್ಕೆ 'ಸೈಲೆಂಟ್ ಟ್ರೀಟ್ಮೆಂಟ್' ನೀಡಿದ್ದಾರೆ. ಧುರಂಧರ್: ದಿ ರಿವೆಂಜ್ ಜಾಗತಿಕ ದಾಖಲೆಗಳನ್ನು ಮುರಿಯುತ್ತಿದ್ದರೆ, ಚಿತ್ರದ ಪ್ರೀಮಿಯರ್ ಹೋಗುವುದು ಬಿಟ್ಟು, ದೀಪಿಕಾ ತಮ್ಮ ಅತ್ತೆ-ಮಾವಂದಿರ ಜೊತೆ ಸಿತಾರ್ ಕಚೇರಿಗೆ ಹೋಗಿದ್ದರು. ಯಾವುದೇ ಪೋಸ್ಟ್ ಇಲ್ಲ, ಹೊಗಳಿಕೆಯೂ ಇಲ್ಲ, ಕೇವಲ ಮೌನ.. ಅವರು ನಿರ್ದೇಶಕರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆಯೇ ಅಥವಾ ಇಂಟರ್ನೆಟ್‌ನ ಈ ನಾಟಕಗಳಿಂದ ದೂರ ಉಳಿಯುತ್ತಿದ್ದಾರೆಯೇ" ಎಂದು ಪ್ರಶ್ನೆ ಮಾಡಲಾಗಿತ್ತು.

Dhurandhar 2: 'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

ಇದಕ್ಕೆ ಕಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯೆ ನೀಡಿದ ದೀಪಿಕಾ ಪಡುಕೋಣೆ, "ಎರಡನೆಯದ್ದು ಗೆಳೆಯಾ (ನಾಟಕದಿಂದ ದೂರ ಉಳಿಯುವುದು). ನಿಮ್ಮೆಲ್ಲರಿಗಿಂತ ಮೊದಲೇ ನಾನು ಈ ಸಿನಿಮಾ ನೋಡಿದ್ದೇನೆ. ಈಗ ಯಾರು ಜೋಕರ್ ಆದರು" ಎಂದು ಹೇಳುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ. ಅಲ್ಲಿಗೆ, ಎಲ್ಲವನ್ನು ಸೋಶಿಯಲ್‌ ಮೀಡಿಯಾ ಮೂಲಕವೇ ಹೇಳಬೇಕು ಎಂಬ ನಿಯಮವಿಲ್ಲ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಮೊದಲ ಭಾಗಕ್ಕೆ ಹೊಗಳಿದ್ದ ನಟಿ ದೀಪಿಕಾ

ಈ ಹಿಂದೆ ‘ಧುರಂದರ್‌ ಪಾರ್ಟ್‌ 1’ ಬಂದಾಗ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಲ್ಲರೂ ಸಿನಿಮಾ ನೋಡುವಂತೆ ಕರೆ ನೀಡಿದ್ದರು. ಜೊತೆಗೆ ನಿರ್ದೇಶಕ ಆದಿತ್ಯ ಧರ್‌ ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಆದರೆ ‘ಧುರಂದರ್‌ ಪಾರ್ಟ್‌ 2’ ರಿಲೀಸ್‌ ಆದಾಗಿನಿಂದ ಇದುವರೆಗೂ ದೀಪಿಕಾ ಪಡುಕೋಣೆ ಅವರು ಯಾವುದೇ ಪೋಸ್ಟ್‌ ಹಾಕಿರಲಿಲ್ಲ. ಆದರೆ ಇದೀಗ ದೀಪಿಕಾ ಪಡುಕೋಣೆ ನೀಡಿರುವ ಪ್ರತಿಕ್ರಿಯೆ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಂತಾಗಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಧುರಂಧರ್‌ 2

ಧುರಂಧರ್‌ 2 ಸಿನಿಮಾವು ವಿಶ್ವಾದ್ಯಂತ ಆಗಲೇ 1650+ ಕೋಟಿ ರೂ. ಹಣವನ್ನು ಬಾಚಿಕೊಂಡಿದೆ. ತೆರೆಕಂಡು 20 ದಿನಗಳಲ್ಲಿ ಇಷ್ಟೊಂದು ದೊಡ್ಡಮೊತ್ತವನ್ನು ಗಳಿಸಿರುವುದು ಹೊಸ ದಾಖಲೆ ಆಗಿದೆ.