ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಟಾಲಿವುಡ್‌ನಿಂದ ಹೊರ ಬಿದ್ದರೂ ದೀಪಿಕಾ ಕೈ ಹಿಡಿದ ಬಾಲಿವುಡ್‌; ಕಿಂಗ್‌ ಖಾನ್‌ ಜೊತೆ ಹೊಸ ಸಿನಿಮಾ?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಟಾಲಿವುಡ್‌ನ ಸಿನಿಮಾಗಳಿಂದ ಹೊರ ಬರುತ್ತಿದ್ದಾರೆ. ಮೊದಲು ʻಸ್ಪಿರಿಟ್ʼ ಚಿತ್ರದಿಂದ ಹೊರಬಂದಿದ್ದ ಅವರನ್ನು ಇದೀಗ ಕಲ್ಕಿʼ ಸೀಕ್ವೆಲ್‌ (Kalki 2898 AD Sequel) ಸಿನಿಮಾ ತಂಡದಿಂದ ದೀಪಿಕಾ ಪಡುಕೋಣೆ ಅವರನ್ನ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ.

ಟಾಲಿವುಡ್‌ನಿಂದ ಹೊರ ಬಿದ್ದರೂ ದೀಪಿಕಾ ಕೈ ಹಿಡಿದ ಬಾಲಿವುಡ್‌!

-

Vishakha Bhat Vishakha Bhat Sep 20, 2025 1:22 PM

ಮುಂಬೈ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಟಾಲಿವುಡ್‌ನ ಸಿನಿಮಾಗಳಿಂದ ಹೊರ ಬರುತ್ತಿದ್ದಾರೆ. ಮೊದಲು ʻಸ್ಪಿರಿಟ್ʼ ಚಿತ್ರದಿಂದ ಹೊರಬಂದಿದ್ದ ಅವರನ್ನು ಇದೀಗ ಕಲ್ಕಿʼ ಸೀಕ್ವೆಲ್‌ (Kalki 2898 AD Sequel) ಸಿನಿಮಾ ತಂಡದಿಂದ ದೀಪಿಕಾ ಪಡುಕೋಣೆ ಅವರನ್ನ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ. ಭಾಸ್ ನಟನೆಯ ಕಲ್ಕಿ 2898AD ಸಿನಿಮಾದ ಪಾರ್ಟ್-1 ನಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯವಾದ ಪಾತ್ರ ನಿಭಾಯಿಸಿದ್ದರು. ಇದೀಗ ಈ ಸಿನಿಮಾದ ಸಿಕ್ವೇಲ್ ಬರುತ್ತಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಬೇಕಾಗಿತ್ತು. ಆ ಪಾತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಮೊದಲ ಪಾರ್ಟ್ ಗಿಂತ 2ನೇ ಪಾರ್ಟ್‌ಗೆ ದುಪ್ಪಟ್ಟು ಸಂಭಾವನೆ ಮಾಡಿದ್ದರಿಂದ ಅವರನ್ನು ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಭವಿಷ್ಯದ ಕುರಿತು ಅಭಿಮಾನಿಗಳು ಚಿಂತೆಗೀಡಾಗಿದ್ದರು. ಆದರೆ ಇದೀಗ ದೀಪಿಕಾಗೆ ಮತ್ತೆ ಬಾಲಿವುಡ್‌ ಕೈ ಹಿಡಿದಿದೆ.

ಹೌದು ಬಾಲಿವುಡ್‌ನ ರಾಣಿ ದೀಪಿಕಾ ಪಡುಕೋಣೆ ಸಿನಿ ಕರಿಯರ್‌ ಇನ್ನೇನು ಮುಗಿಯಿತು ಎಂದು ಹೇಳಲಾಗಿತ್ತು. ಆದರೆ ಇದೀಗ ಮತ್ತೆ ತೆರೆ ಮೇಲೆ ಮಿಂಚಲು ಅವರು ಸಜ್ಜಾಗಿದ್ದಾರೆ. ದೀಪಿಕಾ ಕಿಂಗ್‌ ಖಾನ್‌ ಶಾರುಕ್‌ ಅವರಿಗೆ ಜೋಡಿಯಾಗಲಿದ್ದಾರೆ. ಈ ಕುರಿತು ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸುಮಾರು 18 ವರ್ಷಗಳ ಹಿಂದೆ ಓಂ ಶಾಂತಿ ಓಂ ಚಿತ್ರೀಕರಣದ ಸಮಯದಲ್ಲಿ ಅವರು ನನಗೆ ಕಲಿಸಿದ ಮೊದಲ ಪಾಠವೆಂದರೆ, ಒಂದು ಸಿನಿಮಾ ಮಾಡುವ ಅನುಭವ ಮತ್ತು ನೀವು ಅದನ್ನು ಮಾಡುವ ಜನರು ಅದರ ಯಶಸ್ಸಿಗಿಂತ ಹೆಚ್ಚು ಮುಖ್ಯ. ನಾನು ಹೆಚ್ಚು ಒಪ್ಪಲು ಸಾಧ್ಯವಿಲ್ಲ. ಅಂದಿನಿಂದ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೂ ಆ ನಿಯಮ ಅನ್ವಯಿಸಿದ್ದೇನೆ ಎಂದಿದ್ದಾರೆ.

6 ನೇ ಸಿನಿಮಾವನ್ನು ಮತ್ತೆ ಒಟ್ಟಿಗೆ ಮಾಡುತ್ತಿದ್ದೇವೆ ಎಂದು ಬರೆದ ನಟಿ ಶಾರುಖ್ ಅವರನ್ನು ಟ್ಯಾಗ್ ಮಾಡಿ ಕಿಂಗ್ ಮತ್ತು ಡೇ 1 ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿದ್ದಾರೆ. ಇದು ಬಾಲಿವುಡ್‌ನ ಅತ್ಯಂತ ಪ್ರಸಿದ್ಧವಾದ ಆನ್-ಸ್ಕ್ರೀನ್ ಸಹಯೋಗಗಳಲ್ಲಿ ಒಂದರಲ್ಲಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. 2007 ರಲ್ಲಿ ಓಂ ಶಾಂತಿ ಓಂ ಚಿತ್ರದಲ್ಲಿ ಮೊದಲ ಬಾರಿಗೆ ಈ ಜೋಡಿ ತೆರೆ ಹಂಚಿಕೊಂಡಿತ್ತು. ಅದಾದ ಬಳಿಕ ಐದು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

ಈ ಸುದ್ದಿಯನ್ನೂ ಓದಿ: Deepika Student Scholarship: ’ದೀಪಿಕಾ ವಿದ್ಯಾರ್ಥಿವೇತನ’ ಕಾರ್ಯಕ್ರಮಕ್ಕೆ ಸಿಎಂ ಚಾಲನೆ; ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ವಾರ್ಷಿಕ 30,000 ನೆರವು

ಕಲ್ಕಿ 2898 AD ಸೀಕ್ವೆಲ್ ನಿಂದ ದೀಪಿಕಾ ನಿರ್ಗಮಿಸುತ್ತಿರುವುದನ್ನು ವೈಜಯಂತಿ ಮೂವೀಸ್ X ನಲ್ಲಿ ಅಧಿಕೃತ ಟಿಪ್ಪಣಿಯ ಮೂಲಕ ದೃಢಪಡಿಸಿದೆ. ಈ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ʻಸ್ಪಿರಿಟ್ʼ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡಾ ಇಂತಹದ್ದೇ ಕೆಲ ಕಾರಣ ನೀಡಿ ದೀಪಿಕಾ ಅವರನ್ನ ಸ್ಪಿರಿಟ್ ಚಿತ್ರದಿಂದ ಕೈಬಿಡುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.