ಬೆಂಗಳೂರು: ನಟ ದರ್ಶನ್ ಅಭಿನಯದ ದಿ ಡೆವಿಲ್ (The Devil) ಚಿತ್ರದ ಹಾಡು ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಸಾಂಗ್ ಆ. 24 ರಂದು ಬಿಡುಗಡೆಯಾಗಿದೆ. ದರ್ಶನ್ ಜೈಲಿನಲ್ಲಿದ್ದರೂ, ಅವರ ಅಭಿಮಾನಿಗಳು ಹಾಡನ್ನು ಹಿಟ್ ಮಾಡಿದ್ದಾರೆ. ಈ ಹಾಡಿನ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಕೊನೆಗೂ ಸಾಂಗ್ ರಿಲೀಸ್ ಆಗಿದೆ. ಇಂದು ಬೆಳಗ್ಗೆ 10.5ಕ್ಕೆ ಸರಿಗಮ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿದೆ. ರಿಲೀಸ್ ಆಗಿ ಒಂದು ಗಂಟೆಯಲ್ಲಿ 10 ಮಿಲಿಯನ್ ವ್ಯೂವ್ಸ್ ಆಗಿದೆ. ದರ್ಶನ್ ಅವರ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ದಿ ಡೆವಿಲ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.
ಈ ಹಾಡಿನ ದರ್ಶನ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಅವರ ಡ್ಯಾನ್ಸ್ ಸಹ ಇಷ್ಟಪಟ್ಟಿದ್ದಾರೆ. ನಿನ್ನೆ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಹಾಡು ಲಕ್ಷ ಲಕ್ಷ ವೀಪ್ಸ್ ಪಡೆದುಕೊಂಡಿತ್ತು. ಈ ಹಾಡಿನ ಅದ್ಭುತವಾದ ರೆಸ್ಪಾನ್ಸ್ ಬಂದಿದ್ದು, ಈ ಬಗ್ಗೆ ಡೆವಿಲ್ ಸಿನಿಮಾ ನಿರ್ಮಾಣ ಮಾಡಿರುವ ಶ್ರೀಮಾತ ಕಂಬೈನ್ಸ್ ಸಹ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಒಂದೇ ದಿನದಲ್ಲಿ 10 ಲಕ್ಷ ವ್ಯೂವ್ಸ್ ಆಗಿದೆ ಎಂಬ ಸಂತೋಷ ವಿಚಾರವನ್ನ ಹಂಚಿಕೊಂಡಿದೆ.
ಈ ಸುದ್ದಿಯನ್ನೂ ಓದಿ: Devil Movie: ಡಿ ಬಾಸ್ ಫ್ಯಾನ್ಸ್‌ಗೆ ಡಬಲ್ ಧಮಾಕಾ! ಸಾಂಗ್ ಬಿಡುಗಡೆ ಬೆನ್ನಲ್ಲೇ ಡೆವಿಲ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್!
ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆ ಹಂತದ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಬಹು ನಿರೀಕ್ಷಿತ ಚಿತ್ರ ಡೆವಿಲ್ ಸಿನಿಮಾದ ಇದ್ರೆ ನೆಮ್ಮದಿಯಾಗಿರ್ಬೇಕು ಎನ್ನುವ ಸಾಂಗ್ ಸ್ವಾತಂತ್ರ್ಯ ದಿನಾಚರಣೆಯ ದಿನವೇ ರಿಲೀಸ್ ಆಗಬೇಕಿತ್ತು. ಆದರೆ ನಿನ್ನೆ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ಚಿತ್ರ ತಂಡ ಸಿನಿಮಾ ರಿಲೀಸ್ ಡೇಟ್ ಕೂಡ ಘೋಷಿಸಿದೆ. ಇದೇ ಡಿಸೆಂಬರ್ 12 ರಂದು ಚಿತ್ರ ಬಿಡುಗಡೆಯಾಗುತ್ತಿದೆ.