Dhanush: ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ ʻತೇರೆ ಇಷ್ಕ್ ಮೇʼ ಸಿನಿಮಾದ ಕಲೆಕ್ಷನ್ ಎಷ್ಟು? ಈ ವರ್ಷ ದೊಡ್ಡ ಸಾಧನೆ ಮಾಡಿದ ಧನುಷ್
Tere Ishq Mein Box Office Collection: ಬಹುಭಾಷಾ ನಟ ಧನುಷ್ ಅವರ ಹಿಂದಿ ಸಿನಿಮಾ 'ತೇರೆ ಇಷ್ಕ್ ಮೇ' ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ. ನವೆಂಬರ್ 28 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ಮೂರು ದಿನಗಳಲ್ಲಿಯೇ ಉತ್ತಮ ಕಮಾಯಿ ಮಾಡಿದೆ. ಧನುಷ್ ಪಾಲಿಗೆ 2025 ಲಕ್ಕಿ ವರ್ಷವಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.
-
ಬಹುಭಾಷಾ ನಟ ಧನುಷ್ ಅವರ ಪಾಲಿಗೆ 2025 ಲಕ್ಕಿ ಆಗಿದೆ ಎಂದೇ ಹೇಳಬಹುದು. ಯಾಕೆಂದರೆ, ಈ ವರ್ಷ ಅವರು ವೃತ್ತಿ ಬದುಕಿನಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಸದ್ಯ ಅವರ ಹೊಸ ಸಿನಿಮಾ ʻತೇರೆ ಇಷ್ಕ್ ಮೇʼ (Tere Ishk Mein) ಬಾಲಿವುಡ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಮೊದಲ ಮೂರು ದಿನಗಳಿಗೆ ಈ ಸಿನಿಮಾ ಎಷ್ಟು ಗಳಿಕೆ ಮಾಡಿತು? ಮುಂದೆ ಓದಿ.
ʻತೇರೆ ಇಷ್ಕ್ ಮೇʼ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್
ಧನುಷ್ ಮತ್ತು ಕೃತಿ ಸನೋನ್ ಅಭಿನಯದ ʻತೇರೆ ಇಷ್ಕ್ ಮೇʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುತ್ತಿದೆ. ನವೆಂಬರ್ 28ರಂದು ರಿಲೀಸ್ ಆದ ಈ ಸಿನಿಮಾವು ಮೊದಲ ಮೂರು ದಿನಗಳಿಗೆ ಸುಮಾರು ಭಾರತದಲ್ಲೇ 50.95 ಕೋಟಿ ರೂ. ಕಮಾಯಿ ಮಾಡಿದೆ. ವಿಶ್ವಾದ್ಯಂತ ಗಳಿಕೆಯನ್ನು ಲೆಕ್ಕ ಹಾಕಿದರೆ, ಈ ಮೊತ್ತವು 65 ಕೋಟಿ ರೂ. ದಾಟುತ್ತದೆ. ಸುಮಾರು 90 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ʻತೇರೆ ಇಷ್ಕ್ ಮೇʼ ಸಿನಿಮಾವು ಮೊದಲ ವಾರವೇ ಹಾಕಿದ ಬಂಡವಾಳವನ್ನು ರಿಟರ್ನ್ ಮಾಡುವ ಸಾಧ್ಯತೆ ಇದೆ. ಬಹಳ ದಿನಗಳ ನಂತರ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡಿರುವ ಧನುಷ್ ಅವರು ಮತ್ತೊಂದು ಗೆಲುವನ್ನು ಪಡೆದುಕೊಂಡಿದ್ದಾರೆ.
ಧನುಷ್ ಪಾಲಿಗೆ 2025 ಲಕ್ಕಿ
ಹೌದು, ಧನುಷ್ ಅವರ ಪಾಲಿಗೆ 2025ರ ವರ್ಷ ಲಕ್ಕಿ ಎನ್ನಬಹುದು. ಯಾಕೆಂದರೆ, ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇರುವ ಅವರು ಈ ವರ್ಷ ತೆಲುಗಿನಲ್ಲಿ ʻಕುಬೇರʼ ಸಿನಿಮಾ ಮಾಡಿ ಗೆದ್ದಿದ್ದಾರೆ. ಆ ಸಿನಿಮಾವು 100 ಕೋಟಿ ರೂ. ಗಳಿಸಿತ್ತು. ಈಗ ಹಿಂದಿಯಲ್ಲಿ ʻತೇರೆ ಇಷ್ಕ್ ಮೇʼ ಸಿನಿಮಾ ಮಾಡಿದ್ದು, ಇದು ಕೂಡ ಶೀಘ್ರದಲ್ಲೇ 100 ಕೋಟಿ ರೂ. ಕ್ಲಬ್‌ಗೆ ಸೇರಿಕೊಳ್ಳಲಿದೆ. ಇನ್ನು, ತಮಿಳಿನಲ್ಲಿ ಅವರು ಈ ವರ್ಷ ಎರಡು ಸಿನಿಮಾಗಳನ್ನ ನಿರ್ದೇಶನ ಮಾಡಿ, ಅಲ್ಲಿಯೂ ಗುರುತಿಸಿಕೊಂಡಿದ್ದಾರೆ.
Kuberaa First Review: ರಿಲೀಸ್‌ಗೂ ಮುನ್ನವೇ ʼಕುಬೇರʼ ರಿವ್ಯೂ ಔಟ್; ಧನುಷ್-ರಶ್ಮಿಕಾ ಮಂದಣ್ಣ ಚಿತ್ರ ಹೇಗಿದೆ?
ಕೈಹಿಡಿದ ಇಡ್ಲಿ ಕಡೈ
ಈ ವರ್ಷದ ಆರಂಭದಲ್ಲಿ ʻನಿಲವುಕು ಎನ್ ಮೇಲೆ ಎನ್ನಡಿ ಕೋಬಂʼ ಸಿನಿಮಾವನ್ನು ಧನುಷ್ ನಿರ್ದೇಶನ ಮಾಡಿದ್ದರು. ಇಲ್ಲಿ ಕಂಪ್ಲೀಟ್ ಆಗಿ ನಿರ್ದೇಶಕನ ಸ್ಥಾನವನ್ನಷ್ಟೇ ನಿರ್ವಹಿಸಿದ್ದರು. ಆನಂತರ ಇಡ್ಲಿ ಕಡೈ ಚಿತ್ರವನ್ನು ತೆರೆಗೆ ತಂದರು. ಈ ಚಿತ್ರವು ಅಕ್ಟೋಬರ್ 1ರಂದು ತೆರೆಕಂಡಿತ್ತು. ಇಲ್ಲಿ ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಕಾಣಿಸಿಕೊಂಡಿದ್ದರು. ಮಿಶ್ರ ಪ್ರತಿಕ್ರಿಯ ಪಡೆದುಕೊಂಡರೂ, ಸುಮಾರು 70 ಕೋಟಿ ರೂ. ಹಣವನ್ನು ಈ ಸಿನಿಮಾ ಬಾಚಿಕೊಂಡಿತ್ತು.
ಈ ಮೂಲಕ ನಿರ್ದೇಶಕನಾಗಿ ಎರಡು ಸಿನಿಮಾಗಳು, ಹೀರೋ ಆಗಿ ಮೂರು ಸಿನಿಮಾಗಳಲ್ಲಿ ಧನುಷ್ ಕೆಲಸ ಮಾಡಿದಂತಾಗಿದೆ. ಅದು ಕೂಡ ವಿವಿಧ ಭಾಷೆಗಳಲ್ಲಿ. ಧನುಷ್ ಅವರು ಶ್ರಮಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ.