ಕಿಚ್ಚ ಸುದೀಪ್ (Kichcha Sudeep) ಯಾವಾಗ ಯುದ್ಧಕ್ಕೆ ಸಿದ್ದ ಅಂತ ಅಂದರೋ ಅಲ್ಲಿಂದ ಫ್ಯಾನ್ಸ್ ವಾರ್ ಶುರುವಾಗಿದೆ. ಯಾವಾಗ ನಟನ ಹೇಳಿಕೆ ಕೈ ಮೀರಿ ಹೋಗುತ್ತಾ ಇದೆ ಅಂತ ಗೊತ್ತಾಯ್ತೋ ನಾನು ಯುದ್ಧ ಅಂತ ಹೇಳಿದ್ದು ಪೈರಸಿ ಮಾಡೋರ ವಿರುದ್ಧ, ಯಾವ ವ್ಯಕ್ತಿ ವಿರುದ್ಧ ಅಲ್ಲ ಅಂತ ಸ್ಪಷ್ಟಪಡಿಸಿದ್ರು. ಆದರೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಆರೋಪ, ಪ್ರತ್ಯಾರೋಪ ಶುರುವಾಗಿದೆ. ಈ ನಡುವೆ ಧನ್ವೀರ್ (Dhanveer), ವಿನಯ್ (Vinay Gowda) ನಡುವೆ ಕೌಂಟರ್ ವಾರ್ ಶುರುವಾಗಿದೆ.
ಧನ್ವೀರ್ ಪೋಸ್ಟ್ ಏನು?
ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ವಿಲನ್ ಆಗಿ ವಿನಯ್ ಗೌಡ ನಟಿಸಿದ್ದಾರೆ. ಬಿಗ್‌ಬಾಸ್ ಮನೆಗೂ ಹೋಗಿ ಬಂದಿದ್ದಾರೆ.. ಇದೆಲ್ಲದರ ನಡುವೆ ಇತ್ತೀಚೆಗೆ ಧನ್ವೀರ್ ಮಾಡಿದ್ದ ಪೋಸ್ಟ್‌ಗೆ ಕೌಂಟರ್ ಎನ್ನುವಂತೆ ವಿನಯ್ ಪೋಸ್ಟ್ ವೈರಲ್ ಆಗುತ್ತಿದೆ.
ನಟ ಧನ್ವೀರ್ ಅವರು ದರ್ಶನ್ ಜೊತೆಗಿರೋ ಫೋಟೋ ಹಾಕಿದ್ರು. "ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತವೆ. ಆದ್ರೆ ಸಿಂಹಾನೇ ರಾಜ" ಅನ್ನೋ ಡೈಲಾಗ್ ಹಾಕಿ, ಪರೋಕ್ಷವಾಗಿ ಟಾಂಗ್ ಕೊಟ್ಟಿದ್ರು. ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ,ಸುದೀಪ್ ಅವರ ವಿಡಿಯೋ ಶೇರ್ ಮಾಡಿ, "ಹೌದು ಸಿಂಹಾನೇ ರಾಜ.. ಆದ್ರೆ ಅಸಲಿ ಸಿಂಹ' ಯಾರು ಅಂತ ನಮಗೆ ಗೊತ್ತಿದೆ" ಅಂತ ಕ್ಯಾಪ್ಷನ್ ಹಾಕಿ ಸುದೀಪ್‌ಗೆ ಜೈ ಅಂದ್ರು.
ವಿನಯ್ ಆಗಲಿ, ಧನ್ವೀರ್ ಆಗಲಿ ಯಾವುದೇ ಹೆಸರು ತೆಗೆದುಕೊಳ್ಳದೇ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. 'ಡೆವಿಲ್' ಚಿತ್ರದಲ್ಲಿ ನಟಿಸಿದ್ದ ವಿನಯ್ ದಿಢೀರನೆ ಯಾಕೆ ಹೀಗೆ ಕೌಂಟರ್ ಕೊಡಲು ಆರಂಭಿಸಿದ್ದಾರೆ.
ಧನ್ವೀರ್-ವಿನಯ್ ಪೋಸ್ಟ್

ಸುದೀಪ್, ದರ್ಶನ್ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ?
ದರ್ಶನ್ ವಿಚಾರವಾಗಿಯೂ ಸುದೀಪ್ ಹೇಳಿಕೆ ಕೊಟ್ಟಿದ್ದಾರೆ. ಕಿಚ್ಚ ಮಾತನಾಡಿ, ನಾನು ಏನು ರಿಯಾಕ್ಷನ್ ಕೊಡಬೇಕಿತ್ತು ಕೊಟ್ಟೆ. ಯಾರಾದರೂ ರಿಯಾಕ್ಷನ್ ಮಾಡಿದ್ರೆ ಅವರನ್ನ ನೀವು ಹೋಗಿ ಕೇಳಬೇಕು. ನನ್ನ ಉತ್ತರ ನಾನು ಕೊಟ್ಟಿದ್ದೇನೆ. ವೇದಿಕೆ ಮೇಲೆ ಏನೇನೂ ಮಾತನಾಡೋಕೆ ನಾನು ದಡ್ಡ ಅಲ್ಲ. ದರ್ಶನ್ ಅವರ ಮೇಲೆ ನನಗೆ ಗೌರವ ಇದೆ. ಕೆಲವು ಆಗು ಹೋಗುಗಳ ಬಗ್ಗೆ ನನಗೆ ನೋವಿದೆ. ಅವರ ಅಭಿಮಾನಿಗಳ ನೋವು ನನಗೆ ಅರ್ಥ ಆಗತ್ತೆ.
ಫ್ಯಾನ್ಸ್ ಕೆದಕಲು ಹೋಗಬೇಡಿ ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೆ. ಆ ಅಭಿಮಾನಿಗಳು ಕೇಳಿಸಿಕೊಂಡು ಹೊಗಳಿದ್ದೂ ಉಂಟು. ಆದರೆ ಇನ್ನೊಂದು ಗುಂಪಿಗೆ ಅದು ಇಷ್ಟ ಆಗದೇ ಇರಬಹುದು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಫಿನಾಲೆ ಯಾವಾಗ? ಕಿಚ್ಚ ಸುದೀಪ್ ಏನಂದ್ರು?
ನಾವು ಒಂದಾಗೋದು ಕೆಲವರಿಗೆ ಇಷ್ಟ ಆಗದೇ ಇರಬಹುದು ಅದು ಗೊತ್ತಿಲ್ಲ ನಂಗೆ. ನಾವು ಕಿತ್ತಾಡೇ ಇಲ್ಲ. ನಿಮಗೆ ಕ್ಲಾರಿಟಿ ಕೊಡ್ತೀನಿ ಅಂತಲ್ಲ. ನಾನು ಮುಂಚೆ ಹೇಳಿದ್ದೆ. ಕೆಲವರಿಗೆ ನಾನು ಕೊಡೋ ಉತ್ತರ ಅಲ್ಲ ಅನ್ನಿಸಿದೆ. ಇಲ್ಲಿ ಈಗ ಚಿಕ್ಕದಾಗೇ ಬಿಗ್ ಬಾಸ್ ನಡೆಯುತ್ತಾ ಇದೆ ಎಂದರು.