ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru in Movie: ಧರ್ಮ ಕೀರ್ತಿರಾಜ್‌ಗೆ ಜೋಡಿಯಾದ ʻಬಿಗ್‌ ಬಾಸ್‌ʼ ಖ್ಯಾತಿಯ ಅನುಷಾ ರೈ - ರಿಷಾ ಗೌಡ

Bengaluru In Movie: ಧರ್ಮ ಕೀರ್ತಿರಾಜ್ ನಟನೆಯ ಬೆಂಗಳೂರು ಇನ್‌ ಸಿನಿಮಾವು ಏಪ್ರಿಲ್ 17ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಫುಡ್ ಡೆಲಿವರಿ ಏಜೆಂಟ್ ಜೀವನದಲ್ಲಿ ನಡೆಯುವ ಮರ್ಡರ್ ಮಿಸ್ಟರಿ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಧರ್ಮಗೆ ಜೋಡಿಯಾಗಿ ಬಿಗ್ ಬಾಸ್ ಖ್ಯಾತಿಯ ಅನುಷಾ ರೈ ಮತ್ತು ರಿಷಾ ಗೌಡ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಧರ್ಮ ಕೀರ್ತಿರಾಜ್‌ ನಟನೆಯ ʻಬೆಂಗಳೂರು ಇನ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ʻಆ ದಿನಗಳುʼ ಖ್ಯಾತಿಯ ನಟ ಚೇತನ್‌ ಅವರು ಟ್ರೇಲರ್‌ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೊಂದು ಮರ್ಡರ್‌ ಮಿಸ್ಟರಿ ಕಥೆಯನ್ನು ಹೊಂದಿದ್ದು, ಧರ್ಮ ಈ ಸಿನಿಮಾದಲ್ಲಿ ಫುಡ್ ಡೆಲಿವರಿ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಕಾರ್ತಿಕ್ ಕೆ. ಮೂರ್ತಿ ಚೊಚ್ಚಲ ಬಾರಿಗೆ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.

ವಿಶೇಷವೆಂದರೆ, ಧರ್ಮಗೆ ನಾಯಕಿಯರಾಗಿ ಬಿಗ್‌ ಬಾಸ್‌ ಖ್ಯಾತಿಯ ಅನುಷಾ ರೈ ಮತ್ತು ರಿಷಾ ಗೌಡ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 17ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಹಿರಿಯ ನಟ ಶಶಿಕುಮಾರ್ ಅವರು ಬೆಂಗಳೂರು ಇನ್ ಚಿತ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಪಾತ್ರದಲ್ಲಿ ಕಾಣಿಸಿಕೊಂಡರೆ, ವರದಿಗಾರ್ತಿಯಾಗಿ ಅನುಷಾ ರೈ ಅಭಿನಯಿಸಿದ್ದಾರೆ. ಈ ಸಿನಿಮಾಕ್ಕೆ ವೆಂಕಟೇಶಮೂರ್ತಿ ಹಣ ಹಾಕಿದ್ದಾರೆ.

Bullet Kannada Movie: ಬಿಗ್‌ಬಾಸ್‌ನಿಂದ ಹೊರಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾದ ಧರ್ಮ ಕೀರ್ತಿರಾಜ್‌; ಬಹುಭಾಷಾ ನಟನ ಚಿತ್ರದಲ್ಲಿ ಸಿಕ್ತು ಚಾನ್ಸ್‌

ನಿರ್ಮಾಪಕರ ಜೊತೆ 2ನೇ ಸಿನಿಮಾ

"ನಿರ್ಮಾಪಕ ವೆಂಕಟೇಶಮೂರ್ತಿ ಅವರ ಜೊತೆಗೆ ʻಚಾಣಾಕ್ಷʼ ಎನ್ನುವ ಸಿನಿಮಾವನ್ನು ನಾನು ಮಾಡಿದ್ದೆ, ಆದರೆ ಬೆಂಗಳೂರು ಇನ್ ಸಿನಿಮಾದ ಕಥೆ ಅದಕ್ಕಿಂತ ವಿಭಿನ್ನವಾಗಿದೆ. ಕಾರ್ತಿಕ್ ಕಾರ್ಪೊರೇಟ್ ಬದುಕನ್ನು ತೊರೆದು ಸಿನಿಮಾ ನಿರ್ದೇಶಕರಾಗಿದ್ದಾರೆ. ಈ ಚಿತ್ರದಲ್ಲಿ ನನ್ನದು ಪಿಜ್ಜಾ ಡೆಲಿವರಿ ಬಾಯ್ ಪಾತ್ರ. ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಮನೋಭಾವದಲ್ಲಿರುವ ವ್ಯಕ್ತಿ. ಇದರಲ್ಲೊಂದು ಲವ್ ಸ್ಟೋರಿ ಸಹ ಇದೆ. ಒಟ್ಟಾರೆ ಪ್ರೇಕ್ಷಕರಿಗೆ ಬೇಕಾಗುವ ಅಂಶಗಳೆಲ್ಲಾ ಇದರಲ್ಲಿದೆ" ಎಂದು ಧರ್ಮ ಹೇಳುತ್ತಾರೆ.

ಯಶಸ್ಸು ಸಿಕ್ಕಿಲ್ಲ ಎಂದು ನಾನು ಕುಗ್ಗಿಲ್ಲ

"ಬದುಕಿನಲ್ಲಿ ನಾನು ಎಂದಿಗೂ ಕುಗ್ಗಿಲ್ಲ. ಮನೆಯಲ್ಲಿರುವ ನನ್ನ ತಂದೆ ನನಗೆ ಗುರುವಿನಂತೆ. ಹಾಗಾಗಿ ಯಶಸ್ಸು ಸಿಕ್ಕಲಿಲ್ಲ ಎಂಬ ಬೇಸರವೂ ಇಲ್ಲ. ಇಪ್ಪತ್ತೈದು ಸಿನಿಮಾಗಳ ಪೈಕಿ ಯಾವ ಸಿನಿಮಾಗಳ ನಿರ್ದೇಶಕರ ಕುರಿತಂತೆಯೂ ನನಗೆ ಬೇಸರವಿಲ್ಲ. ಕೆಲ ಸಿನಿಮಾಗಳ ಸೋಲಿನ ನಂತರ ನಾನು ಚೆನ್ನೈನಲ್ಲಿ ವಾಸವಾಗಿದ್ದೆ, ಆದರೆ ವೆಂಕಟೇಶಮೂರ್ತಿ ಕರೆ ಮಾಡಿ ʻಚಾಣಾಕ್ಷʼ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದೇನೆ" ಎನ್ನುತ್ತಾರೆ ಧರ್ಮ ಕೀರ್ತಿರಾಜ್.

BBK 12: ರಿಷಾ ಗೌಡ ಮಾಡಿದ ಆ ಒಂದು ಕೆಲಸ ಗಿಲ್ಲಿ ಹಾರ್ಟ್‌ನ ಬ್ರೇಕ್‌ ಮಾಡ್ತಾ? ಏನಿದು ಹೊಸ ವಿಷ್ಯ?

ಬೆಂಗಳೂರು ಇನ್ ಸಿನಿಮಾದಿಂದ ನನ್ನ ಲಕ್‌ ಬದಲಾಗಿದೆ

"ಇದು ನನ್ನ ಎರಡನೇ ಸಿನಿಮಾ. ಮೊದಲ ಸಿನಿಮಾ ಕ್ರೇಜಿ ಕೀರ್ತಿ ಮಾಡಿದ್ದರೂ ಅದು ಮೈಸೂರಿನಲ್ಲೇ ಶೂಟ್ ಆಗಿತ್ತು. ನಾನು ಬೆಂಗಳೂರು ಇನ್ ಸಿನಿಮಾ ಮಾಡಿರದೆ ಇದ್ದರೆ ಚಿತ್ರೋದ್ಯಮದಲ್ಲಿ ಇರುತ್ತಿದ್ದೇನಾ ಎನ್ನುವ ಪ್ರಶ್ನೆ ನನಗಿದೆ. ಈ ಸಿನಿಮಾ ಮೂಲಕ ನನ್ನ ಲಕ್ ಬದಲಾಗಿದೆ. ಕಥೆ ಬಹಳ ವಿಭಿನ್ನವಾಗಿದೆ. ನಾನು ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ. ಎರಡನೇ ಸಿನಿಮಾಗೆ ಧರ್ಮ ಅವರೊಡನೆ ನಟಿಸುವ ಅವಕಾಶ ಸಿಕ್ಕುತ್ತದೆ ಎಂದು ನಾನು ಊಹಿಸಿರಲಿಲ್ಲ. ಇಲ್ಲಿ ಹಿರಿಯ ಕಲಾವಿದರೊಡನೆ ನಟಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಧನ್ಯ" ಎನ್ನುತ್ತಾರೆ ಬಿಗ್‌ ಬಾಸ್‌ ರಿಷಾ ಗೌಡ.

"ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಇರುವ ಸಿನಿಮಾ. ಬೆಂಗಳೂರು ಇನ್ ಹೆಸರಲ್ಲಿ ಬೆಂಗಳೂರು ಮಾತ್ರವಲ್ಲ ಎಲ್ಲಾ ಕಡೆಗಳಲ್ಲಿ ನಡೆಯುವ ಕಥೆಯನ್ನು ಇಲ್ಲಿ ಹೇಳಲಾಗಿದೆ. ಇದರಲ್ಲಿ ಯುವಕರಿಗೆ ಒಂದು ಜಾಗೃತಿ ಮೂಡಿಸುವ ಸಂಗತಿಯೂ ಇದೆ. ನನಗೆ ಈ ಸಿನಿಮಾದಲ್ಲಿ ಒಂದು ಉತ್ತಮ ಪಾತ್ರ ಸಿಕ್ಕಿದೆ" ಎನ್ನುತ್ತಾರೆ ನಟಿ ಅನುಷಾ ರೈ.

ʻಬೆಂಗಳೂರು ಇನ್ʼ ಚಿತ್ರಕ್ಕೆ ವೆಂಕಟೇಶಮೂರ್ತಿ ನಿರ್ಮಾಪಕರಾದರೆ, ರಾಜೇಶ್ ಕಾರ್ಯಕಾರಿ ನಿರ್ಮಾಪಕರು. ಈ ಚಿತ್ರಕ್ಕೆ ನವೀನ್ ಪಂಚಾಕ್ಷರಿ ಛಾಯಾಗ್ರಹಣವಿದ್ದು, ಅಸಿಫ್ ಎ. ಕಾದರ್, ಅರವಿಂದ್ ಮುರಳಿ ಸಂಗೀತವಿದೆ. ಕುಮಾರ್ ಸಿ.ಕೆ ಚಿತ್ರದ ಸಂಕಲನಕಾರರಾಗಿದ್ದಾರೆ. ಶ್ರೀ ಸಾಯಿಬಾಬಾ ಸಿನಿ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡ ಈ ಚಿತ್ರವು ಏಪ್ರಿಲ್ 17ರಂದು ತೆರೆಗೆ ಬರಲಿದೆ.