ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

OTT ಅಂಗಳಕ್ಕೆ ಎಂಟ್ರಿ ಕೊಟ್ಟ ಕಾಳಿದಾಸ; ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರವನ್ನ ಇನ್ಮೇಲೆ ಮನೆಯಲ್ಲೇ ನೋಡಿ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ-ದಿ ಡೆವಿಲ್’ ಜೂನ್ 5 ರಿಂದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ‘Zee5’ ನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಈ ಚಿತ್ರ, ಸದ್ಯ ಕನ್ನಡ ಸೇರಿದಂತೆ ದಕ್ಷಿಣದ ನಾಲ್ಕು ಪ್ರಮುಖ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.

ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ನಟನೆಯ, ʻಜೋಗಿʼ ಪ್ರೇಮ್ ನಿರ್ದೇಶನದ ಪ್ಯಾನ್-ಇಂಡಿಯಾ ಸಿನಿಮಾ ‘ಕೆಡಿ-ದಿ ಡೆವಿಲ್’ ಒಟಿಟಿ ಅಂಗಳಕ್ಕೆ ಎಂಟ್ರಿ ನೀಡುತ್ತಿದೆ. ಚಿತ್ರಮಂದಿರಗಳಲ್ಲಿ ಏಪ್ರಿಲ್‌ 30ರಂದು ತೆರೆಕಂಡಿದ್ದ ಈ ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಜೂನ್ 5 ರಿಂದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ‘Zee5’ ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.

ನಾಲ್ಕು ಭಾಷೆಗಳಲ್ಲಿ ಬರಲಿದೆ ಕೆಡಿ

ಪ್ರೇಕ್ಷಕರಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ‘ಕೆಡಿ’ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಏಕಕಾಲಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಹೀಗಾಗಿ ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಈಗ ಮನೆಯಲ್ಲೇ ಕುಳಿತೇ ಜೂನ್ 5 ರಿಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

KD The Devil: ‘ಕೆಡಿ’ ಟ್ರೈಲರ್ ಡಿಲೀಟ್ ಆಗೋಕೆ ಅದೇ ಕಾರಣ; ಪ್ರೇಮ್‌ ಉತ್ತರ ಇಲ್ಲಿದೆ

ಇದು 70ರ ದಶಕದ ಭೂಗತ ಲೋಕದ ಕಥೆ

ನಿರ್ದೇಶಕ ಪ್ರೇಮ್ ಅವರು 1970ರ ದಶಕದ ಬೆಂಗಳೂರಿನ ಭೂಗತ ಲೋಕದ ಕಾಲಘಟ್ಟವನ್ನು ಈ ಚಿತ್ರದಲ್ಲಿ ಅತ್ಯಂತ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ‘ಕಾಳಿದಾಸ’ ಅಲಿಯಾಸ್ ಕೆಡಿ ಎಂಬ ಯುವಕನ ಸುತ್ತ ಇಡೀ ಕಥೆ ಸಾಗುತ್ತದೆ. ಅಣ್ಣ-ತಮ್ಮನ ನಡುವಿನ ಭಾವನಾತ್ಮಕ ಬಾಂಧವ್ಯ, ಸೇಡು ಹಾಗೂ ರಾಜಕೀಯ ಪೈಪೋಟಿಯ ಕಥಾಹಂದರ ಚಿತ್ರದಲ್ಲಿದೆ. ಧ್ರುವ ಸರ್ಜಾ ಅವರ ರಾ & ರಗಡ್ ಲುಕ್ ಜೊತೆಗೆ ಭರ್ಜರಿ ಆಕ್ಷನ್ ಮತ್ತು ಎಮೋಷನಲ್ ಸೀನ್‌ಗಳನ್ನು ನಿರ್ದೇಶಕರು ಅದ್ಭುತವಾಗಿ ಬ್ಲೆಂಡ್ ಮಾಡಿ ಪ್ರೇಕ್ಷಕರಿಗೆ ಕಮರ್ಷಿಯಲ್ ಮನರಂಜನೆಯ ಭೋಜನ ಉಣಬಡಿಸಿದ್ದಾರೆ.

ಅದ್ದೂರಿ ತಾರಾಗಣದ ಸಿನಿಮಾವಿದು

ಕೆಡಿ ಚಿತ್ರದ ಮತ್ತೊಂದು ಬಹುದೊಡ್ಡ ಹೈಲೈಟ್ ಎಂದರೆ ಕಲಾವಿದರು. ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದ ದೈತ್ಯ ತಾರಾಬಳಗ ಈ ಚಿತ್ರದಲ್ಲಿದೆ. ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಇವರ ಜೊತೆಗೆ ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಗ್ಲಾಮರಸ್ ಬೆಡಗಿ ನೋರಾ ಫತೇಹಿ, ನಾಯಕಿ ರೀಷ್ಮಾ ನಾಣಯ್ಯ, ವಂದನಾ, ಸೂರಜ್‌, ದೀಪಿಕಾ ಗೌಡ. ರವಿಶಂಕರ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಚಿತ್ರದ ತೂಕವನ್ನು ದುಪ್ಪಟ್ಟು ಮಾಡಿದೆ.

Jogi Prem: ‌'ಕೆಡಿ' ಅಖಾಡಕ್ಕೆ ಕಾಲಭೈರವನಾಗಿ ಎಂಟ್ರಿ ಕೊಟ್ಟ ಸುದೀಪ್; ಧ್ರುವ ಸರ್ಜಾ ಚಿತ್ರದ ಪವರ್ ಹೆಚ್ಚಿಸಿದ ʻಕಿಚ್ಚʼ

ಹಾಡುಗಳಿಂದಲೇ ಮೋಡಿ ಮಾಡಿದ್ದ ಸಿನಿಮಾವಿದು

ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಈ ಚಿತ್ರವನ್ನು ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಶ್ರಮ ಇದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಚಿತ್ರದ ಪ್ರತಿ ಫ್ರೇಮ್ ಅನ್ನು ರಿಚ್ ಆಗಿ ಕಣ್ಣಿಗೆ ಕಟ್ಟುವಂತೆ ಮಾಡಿದೆ.