Jogi Prem: 'ಕೆಡಿ' ಅಖಾಡಕ್ಕೆ ಕಾಲಭೈರವನಾಗಿ ಎಂಟ್ರಿ ಕೊಟ್ಟ ಸುದೀಪ್; ಧ್ರುವ ಸರ್ಜಾ ಚಿತ್ರದ ಪವರ್ ಹೆಚ್ಚಿಸಿದ ʻಕಿಚ್ಚʼ
Kiccha Sudeep As Kaala Bhairava: ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಅವರು 'ಕಾಲಭೈರವ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡವು ಇಂದು ಸುದೀಪ್ ಅವರ ಪಾತ್ರವನ್ನು ಅಧಿಕೃತವಾಗಿ ಪರಿಚಯಿಸಿದ್ದು, ಈ ಪಾತ್ರ ಸಮಾಜದಲ್ಲಿ 'Chaos' ಸೃಷ್ಟಿಸುತ್ತದೆ ಎಂದು ಚಿತ್ರತಂಡವು ಬಣ್ಣಿಸಿದೆ.
-
ʻಜೋಗಿʼ ಪ್ರೇಮ್ ನಿರ್ದೇಶಿಸಿರುವ ʻಕೆಡಿʼ ಸಿನಿಮಾವು ಈಚೆಗೆ ಎಂಥ ವಿವಾದಕ್ಕೆ ಒಳಗಾಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನಿಂದ ದೊಡ್ಡ ವಿವಾದದ ಕಿಡಿಯನ್ನು ಹೊತ್ತಿಸಿದ್ದ ಕೆಡಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ಚಿತ್ರದಿಂದ ಪಾಸಿಟಿವ್ ಸುದ್ದಿ ಹೊರಬಂದಿದೆ.
ಕೆಡಿ ಚಿತ್ರದಲ್ಲಿ ನಟ ಕಿಚ್ಚ ಸುದೀಪ್
ಮೊದಲೇ ಗೊತ್ತಿರುವಂತೆ ನಟ ಕಿಚ್ಚ ಸುದೀಪ್ ಅವರು ಕೆಡಿ ಚಿತ್ರದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರವೇನು ಎಂಬುದರ ಗುಟ್ಟನ್ನು ಮಾತ್ರ ಚಿತ್ರತಂಡ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಇದೀಗ ಅದು ಗೊತ್ತಾಗಿದೆ. ʻಕೆಡಿʼ ಸಿನಿಮಾದಲ್ಲಿ ಕಾಲಭೈರವ ಎಂಬ ಪಾತ್ರವನ್ನು ಸುದೀಪ್ ನಿರ್ವಹಿಸಿದ್ದಾರೆ. "ಕೆಲವು ಹೆಸರುಗಳು ಭಯ ಹುಟ್ಟಿಸುತ್ತವೆ, ಆದರೆ ಈ ಹೆಸರು CHAOS ಸೃಷ್ಟಿಸುತ್ತದೆ. ಆ ಹೆಸರೇ ಕಾಲಭೈರವ" ಎಂದು ಸುದೀಪ್ ಪಾತ್ರದ ಪರಿಚಯವನ್ನು ಮಾಡಿಕೊಡಲಾಗಿದೆ. ಇಲ್ಲಿ ಸುದೀಪ್ ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿದ್ದು, ಸುದೀಪ್ ಅವರ ಮುಖವನ್ನು ಮಾತ್ರ ತೋರಿಸಿಲ್ಲ.
ʻಕೆಡಿʼ ಸಿನಿಮಾ ಹಾಡಿನ ವಿವಾದ; ʻಜೋಗಿʼ ಪ್ರೇಮ್- ನೋರಾ ಫತೇಹಿಗೆ ನೊಟೀಸ್ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗ
ದೊಡ್ಡ ಕಲಾವಿದರ ಪಟ್ಟಿಗೆ ಸುದೀಪ್ ಹೆಸರು ಸೇರ್ಪಡೆ
ಕೆಡಿ ಸಿನಿಮಾವು ಹೆಚ್ಚು ಸುದ್ದಿಯಲ್ಲಿರುವುದೇ ಅದರ ತಾರಾಗಣದಿಂದ. ಹೌದು, ಈ ಚಿತ್ರದಲ್ಲಿ ಸಾಕಷ್ಟು ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕಾಳಿದಾಸ ಎಂಬ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಿದ್ದು, ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ರವಿಶಂಕರ್ ಮುಂತಾದವರು ನಟಿಸಿದ್ದು, ನೋರಾ ಫತೇಹಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಇದೀಗ ಸುದೀಪ್ ಅವರು ಕಾಲ ಭೈರವನಾಗಿ ಈ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ.
ಸುದೀಪ್ ಫಸ್ಟ್ ಲುಕ್ ಹಂಚಿಕೊಂಡ ಕೆವಿಎನ್
Some names create FEAR,
— KVN Productions (@KvnProductions) March 26, 2026
This name creates CHAOS.
The name is KAALA BHAIRAVA. @KicchaSudeep 🔥
Happy Ramanavami… Jai Shree ram🕉️🛕🪷 ✨#Kichhasudeepa #KichasudeepInKDTheDevil #Dhruvasarja #Prems#KDTheDevil @KvnProductions @DhruvaSarja @directorprems @duttsanjay… pic.twitter.com/uv1KGhsxmw
ಏಪ್ರಿಲ್ 30ಕ್ಕೆ ತೆರೆಗೆ ಬರಲಿದೆ ಕೆಡಿ
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಕೆಡಿ ಸಿನಿಮಾವನ್ನು ಜೋಗಿ ಪ್ರೇಮ್, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಏಪ್ರಿಲ್ 30ಕ್ಕೆ ಈ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಧ್ರುವ ಸರ್ಜಾ ಫ್ಯಾನ್ಸ್ ಸದ್ಯ ಕೆಡಿ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.