ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಧುರಂಧರ್‌ 2ʼ ಎದುರು ರಿಲೀಸ್‌ ಮಾಡಿ ಎಡವಿತೇ ʻಉಸ್ತಾದ್‌ ಭಗತ್‌ ಸಿಂಗ್‌ʼ ಟೀಮ್;‌ ಹೆಂಗಿದೆ ಪವನ್‌ ಕಲ್ಯಾಣ್‌ ಹೊಸ ಸಿನಿಮಾದ ಕಲೆಕ್ಷನ್?‌

ಮಾರ್ಚ್ 19ರ ಯುಗಾದಿ ಹಬ್ಬದಂದು ಬಿಡುಗಡೆಯಾದ ಉಸ್ತಾದ್‌ ಭಗತ್‌ ಸಿಂಗ್‌ ಚಿತ್ರವು ಮೊದಲ ದಿನ 34.75 ಕೋಟಿ ರೂ. ಗಳಿಸಿ ಭರ್ಜರಿ ಆರಂಭ ಪಡೆದಿದ್ದರೂ, ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಶೇ. 70ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಜಾಗತಿಕವಾಗಿ 700 ಕೋಟಿ ರೂ.ಗಳತ್ತ ದಾಪುಗಾಲು ಹಾಕುತ್ತಿದ್ದರೆ, ಪವನ್ ಕಲ್ಯಾಣ್ ಸಿನಿಮಾ ನಾಲ್ಕು ದಿನಕ್ಕೆ ಕೇವಲ 60.80 ಕೋಟಿ ರೂ. ಗಳಿಸಿ ತೆವಳುತ್ತಿದೆ.

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌: ದಿ ರಿವೆಂಜ್ʼ‌ ಸಿನಿಮಾವು ಅಕ್ಷರಶಃ ಬಾಕ್ಸ್‌ ಆಫೀಸ್‌ನಲ್ಲಿ ರುದ್ರತಾಂಡವ ಆಡುತ್ತಿದೆ. ಭರ್ಜರಿ ಗಳಿಕೆ ಮಾಡುತ್ತಾ, ಹಳೆಯ ದಾಖಲೆಗಳನ್ನೆಲ್ಲಾ ಚಿಂದಿ ಉಡಾಯಿಸುತ್ತಿದೆ. ಆದರೆ ಈ ಚಿತ್ರದ ಎದುರು ತೆಲುಗಿನಲ್ಲಿ ತೆರೆಕಂಡಿದ್ದ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್‌ ಕಲ್ಯಾಣ್‌ ಅವರ ʻಉಸ್ತಾದ್‌ ಭಗತ್‌ ಸಿಂಗ್ʼ‌ ಸಿನಿಮಾವು ತೆರೆಕಂಡಿತ್ತು. ಆದರೆ ಆ ಚಿತ್ರದ ಕಲೆಕ್ಷನ್‌ ಹೇಳಿಕೊಳ್ಳುವಂತಿಲ್ಲ!

ಎರಡನೇ ದಿನಕ್ಕೆ ಕಲೆಕ್ಷನ್‌ನಲ್ಲಿ ಕುಸಿತ

'ಧುರಂಧರ್ 2' ಅಬ್ಬರದ ನಡುವೆಯೂ ತೆರೆಕಂಡಿದ್ದ ಉಸ್ತಾದ್‌ ಭಗತ್‌ ಸಿಂಗ್‌ ಸಿನಿಮಾವು ಮೊದಲ ದಿನ (ಗುರುವಾರ) 34.75 ಕೋಟಿ ರೂ. ಗಳಿಸಿತ್ತು. ಆದರೆ ಎರಡನೇ ದಿನವೇ ಗಳಿಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು.

ದಿನ 1 (ಗುರುವಾರ): ₹ 34.75 ಕೋಟಿ ರೂ.

ದಿನ 2 (ಶುಕ್ರವಾರ): ₹ 9.00 ಕೋಟಿ ರೂ.

ದಿನ 3 (ಶನಿವಾರ): ₹ 9.05 ಕೋಟಿ ರೂ.

ದಿನ 4 (ಭಾನುವಾರ): ₹ 8.00 ಕೋಟಿ ರೂ.

ಒಟ್ಟು ಮೊದಲ ನಾಲ್ಕು ದಿನಗಳಿಗೆ 60.80 ಕೋಟಿ ರೂ. ಗಳಿಕೆ ಮಾಡಿದೆ. ಈ ಹಿಂದಿನ ಪವನ್‌ ಕಲ್ಯಾಣ್‌ ಅವರ ಓಜಿ ಸಿನಿಮಾದ ಗಳಿಕೆಗೆ ಹೋಲಿಸಿದರೆ, ತೀರಾ ಕಮ್ಮಿ ಆಗಿದೆ. ಆ ಚಿತ್ರವು ಮೊದಲ ದಿನ 45 ಕೋಟಿ ರೂ. ಗಳಿಸಿದರೆ, ನಂತರ ಕ್ರಮವಾಗಿ ನಾಲ್ಕು 28.50 ಕೋಟಿ ರೂ., 32 ಕೋಟಿ ರೂ., 14 ಕೋಟಿ ರೂ. ಗಳಿಸಿತ್ತು. ಆದರೆ, ಉಸ್ತಾದ್‌ ಭಗತ್‌ ಸಿಂಗ್‌ ಆ ಮಟ್ಟದ ಗಳಿಕೆ ಮಾಡುವಲ್ಲಿ ವಿಫಲವಾಗಿದೆ.

Dhurandhar 2: 'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

ರಿಲೀಸ್‌ ಡೇಟ್‌ನಿಂದಲೇ ಶುರುವಾಯ್ತಾ ಸಮಸ್ಯೆ?

'ಉಸ್ತಾದ್ ಭಗತ್ ಸಿಂಗ್' ಚಿತ್ರವು ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 19 ರಂದು ಧುರಂಧರ್‌ 2 ಎದುರು ತೆರೆಕಂಡಿತ್ತು. ಅಸಲಿಗೆ, ಈ ಸಿನಿಮಾವು ಮಾರ್ಚ್‌ 27ರಂದು ರಿಲೀಸ್‌ ಆಗಬೇಕಿತ್ತು. ಚಿತ್ರತಂಡ ಅದನ್ನ ಅಧಿಕೃತವಾಗಿ ಘೋಷಿಸಿತ್ತು ಕೂಡ. ಯಾವಾಗ ಟಾಕ್ಸಿಕ್‌ ಸಿನಿಮಾದ ರಿಲೀಸ್‌ ಡೇಟ್‌ ಅನ್ನು ಮಾರ್ಚ್‌ 19ರಿಂದ ಪೋಸ್ಟ್‌ಪೋನ್‌ ಆಯಿತೋ, ಕೂಡಲೇ ಒಂದು ವಾರ ಮೊದಲೇ ರಿಲೀಸ್‌ ಮಾಡುವುದಾಗಿ 'ಉಸ್ತಾದ್ ಭಗತ್ ಸಿಂಗ್' ಟೀಮ್‌ ಹೇಳಿತು. ಅದರ ಬದಲು, ಧುರಂಧರ್‌ 2 ಅಬ್ಬರ ಒಂಚೂರು ಕಮ್ಮಿಯಾದ ಮೇಲೆ ಮಾರ್ಚ್‌ 27ರಂದು 'ಉಸ್ತಾದ್ ಭಗತ್ ಸಿಂಗ್' ರಿಲೀಸ್‌ ಮಾಡಿದ್ದರೆ, ಗಳಿಕೆಯಲ್ಲಿ ಚೇತರಿಕೆ ಕಂಡುಬರುತ್ತಿತ್ತೇನೋ ಎಂಬ ಮಾತುಗಳು ಕೇಳಿಬಂದಿವೆ.

Dhurandhar 2 Twitter Review: ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ಸಿನಿಮಾ ನೋಡಿದವರು ಏನಂದ್ರು?

ಸಾಮಾನ್ಯವಾಗಿ ಒಂದು ಸಿನಿಮಾಗೆ ವೀಕೆಂಡ್‌ನಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇರುತ್ತದೆ, ಆದರೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಲೆಕ್ಷನ್‌ನಲ್ಲಿ ತೀವ್ರ ಕುಸಿತ ಕಾಣಿಸುತ್ತಿದೆ. ಸದ್ಯ ಎಲ್ಲರ ಕಣ್ಣು ಮೊದಲ ಸೋಮವಾರ ಉಸ್ತಾದ್‌ ಭಗತ್‌ ಸಿಂಗ್‌ ಸಿನಿಮಾ ಯಾವ ಪ್ರಮಾಣದಲ್ಲಿ ಗಳಿಕೆ ಮಾಡಬಹುದು ಎಂಬುದರ ಮೇಲೆ.