ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ಯಾನ್ ಏಷ್ಯಾ ಚಿತ್ರಕ್ಕೆ ಹೀರೋ ಆದ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್; ʻನನ್ನ ಅಸಲಿ ಸಿನಿಮಾ ಪಯಣ ಈಗ ಆರಂಭʼ ಎಂದ ನಟ!

ಸ್ಯಾಂಡಲ್‌ವುಡ್ ನಟ ರಾಜವರ್ಧನ್ ಈಗ ಅಂತರಾಷ್ಟ್ರೀಯ ಮಟ್ಟದ ಪ್ಯಾನ್ ಏಷ್ಯಾ ಸಿನಿಮಾದ ಮೂಲಕ ಹೊಸ ಪಯಣ ಆರಂಭಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಸದ್ದಿಲ್ಲದೆ ತಯಾರಿ ನಡೆಸಿದ್ದ ಚಿತ್ರತಂಡ, ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಿಸಿದೆ. ಈ ಚಿತ್ರಕ್ಕಾಗಿ ರಾಜವರ್ಧನ್ ಒಂದೂವರೆ ವರ್ಷ ನಟನೆಯಿಂದ ದೂರ ಉಳಿದು ಸಿದ್ಧತೆ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಸಿನಿಮಾ ಮೇಕರ್ಸ್ ದೊಡ್ಡ ಯೋಜನೆಗಳೊಂದಿಗೆ, ದೂರದೃಷ್ಟಿ ಇಟ್ಟುಕೊಂಡು ವಿಶ್ವ ದರ್ಜೆಯ ಸಿನಿಮಾಗಳನ್ನ ಮಾಡುವತ್ತ ಗಮನ ನೀಡುತ್ತಿದ್ದಾರೆ. ಅದಕ್ಕಾಗಿ ವರ್ಷಾನುಗಟ್ಟಲೇ ತಯಾರಿಯನ್ನು ಸಹ ಮಾಡಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಸ್ಯಾಂಡಲ್‌ವುಡ್‌ನ ಸಿನಿಮಾತಂಡವೊಂದು ಸೇರಿಕೊಳ್ಳಲಿದೆ. ಪ್ರಬಲ ಕ್ರಿಯಾಶೀಲ ತಂತ್ರಜ್ಞರ ತಂಡವೊಂದು ಪ್ಯಾನ್ ಏಷ್ಯಾ ಸಿನಿಮಾ ಮಾಡುವುದಕ್ಕೆ ಮುಂದಾಗಿದೆ. ಈ ಪ್ಯಾನ್ ಏಷ್ಯಾ ಸಿನಿಮಾದ ಹೀರೋ ಆಗಿ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ನಟ ರಾಜವರ್ಧನ್ ಈವರೆಗೂ 4 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದು, ಎಲ್ಲವೂ ಒಂದಕ್ಕಿಂತ ಒಂದು ಭಿನ್ನ ಪ್ರಯತ್ನಗಳೇ ಆಗಿವೆ. ರಾಜವರ್ಧನ್ ಅವರು ಈ ಹಿಂದಿನ ಸಿನಿಮಾಗಳ ಅನುಭವ ಮತ್ತು ದೊಡ್ಡ ಸಿನಿಮಾ ಕನಸಿನ ಹುಡುಕಾಟದ ಪ್ರತಿಫಲವಾಗಿ ಈ ಪ್ಯಾನ್ ಏಷ್ಯಾ ಮಟ್ಟದ ಸಿನಿಮಾ ಸೆಟ್ಟೇರಲು ಕಾರಣವಾಗಿದೆ. ಅಂದಹಾಗೆ, ಈ ಚಿತ್ರದ ಮುಹೂರ್ತ ಈಗಾಗಲೇ ನೇರವೇರಿದ್ದು, ಬೆಂಗಳೂರಿನ ಗಣಪತಿ ದೇವಸ್ಥಾನವೊಂದರಲ್ಲಿ ಚಿತ್ರದ ಮುಹೂರ್ತವನ್ನು ಮಾಡಲಾಗಿದೆ.

Actor Rajavardhan: ಪೈಲ್ವಾನ್ ಅವತಾರದಲ್ಲಿ ರಾಜವರ್ಧನ್; 'ಗಜರಾಮ' ಟ್ರೈಲರ್‌ ಔಟ್‌

ನಟ ರಾಜವರ್ಧನ್ ಈ ಬಾರಿ ಒಂದು ತಂಡವನ್ನ ಕಟ್ಟಿಕೊಂಡಿದ್ದಾರೆ. ಈ ತಂಡ ಸರಿ‌ಸುಮಾರು 5 ವರ್ಷಗಳಿಂದ ಸತತವಾಗಿ ಈ ಪ್ಯಾನ್ ಏಷ್ಯಾ ಸಿನಿಮಾಗಾಗಿ ತಯಾರಿ ಮಾಡಿಕೊಂಡಿದೆ. ಇದೀಗ ಅದು ಕೊನೆಯ ಹಂತ ತಲುಪಿದ್ದು, ಸದ್ಯದಲ್ಲೇ ಚಿತ್ರತಂಡ ಹಲವು ವಿಚಾರಗಳನ್ನ ಹಂಚಿಕೊಳ್ಳಲು ರೆಡಿಯಾಗಿದೆ. ಅಂದಹಾಗೆ, ಈ ಸಿನಿಮಾದ ತಯಾರಿಗಾಗಿಯೇ ಕಳೆದ ಒಂದೂವರೆ ವರ್ಷದಿಂದ ರಾಜವರ್ಧನ್ ನಟನೆಯಿಂದ ದೂರ ಉಳಿದಿದ್ದರಂತೆ.

ಈ ಚಿತ್ರದ ಬಗ್ಗೆ ರಾಜವರ್ಧನ್‌ ಏನಂತಾರೆ?

"ನನಗೆ 'ಬಿಚ್ಚುಗತ್ತಿ' ಚಿತ್ರದಿಂದ 'ಗಜರಾಮ'ದವರೆಗೂ ಮಾಡಿದ ಎಲ್ಲಾ ಸಿನಿಮಾಗಳು ಒಂದೊಂದು ಬಗೆಯಲ್ಲಿ ಪಾಠ ಹೇಳಿಕೊಟ್ಟಿವೆ. ಕಳೆದ ವರ್ಷ ನಾನು‌ ಕ್ರಿಯೇಟೀವ್ ಹೆಡ್ ಆಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದ 'ಕಮಲ್ ಶ್ರೀದೇವಿ' ಚಿತ್ರ ಸಿನಿಮಾದೊಳಗಿನ, ಹೊರಗಿನ

ಬೇಕು-ಬೇಡ ಮತ್ತು ವ್ಯವಹಾರಿಕ ಜ್ಞಾನವನ್ನ ಕಲಿಸಿದೆ. ನಾನೂ ಮೂಲತಃ ಚಿತ್ರಕಲಾ ವಿದ್ಯಾರ್ಥಿ‌. ಸಿನಿಮಾದೊಳಗೆ ಕೊನೆಯವರೆಗೂ ನಾನು ವಿದ್ಯಾರ್ಥಿನೇ. ಈವರೆಗೂ ನಾನು ಮಾಡಿದ ಚಿತ್ರಗಳೆಲ್ಲವೂ ಸಿನಿಮಾ ಕೆಲಸಗಳೆಲ್ಲವೂ ಕಲಿಕೆಯೇ" ಎಂದು ರಾಜವರ್ಧನ್‌ ಹೇಳಿದ್ದಾರೆ.

"ಈವರೆಗೂ ನಾನು ಏನೆಲ್ಲಾ ಮಾಡಿದ್ದೇನೋ ಅದೆಲ್ಲವೂ ಅನುಭವ ಅಷ್ಟೇ.. ನನ್ನ ಅಸಲಿ ಸಿನಿಮಾ ಪಯಣ ಇಲ್ಲಿಂದ ಆರಂಭ.. ನನ್ನ ಸಿನಿಮಾ ಕನಸು, ದಾರಿ, ಗುರಿ ಈ ಚಿತ್ರವಾಗಲಿದೆ ಅನ್ನೋದು ನನ್ನ ಭರವಸೆ. ಹೇಳಬೇಕು ಅಂದ್ರೆ ಇದೇ ನನಗೆ ಮೊದಲ‌ ಸಿನಿಮಾ ಅನ್ನಿಸುತ್ತಿದೆ. ಅಷ್ಟೊಂದು ತಯಾರಿಗಳನ್ನು ನಾವೆಲ್ಲಾ ಮಾಡಿಕೊಳ್ಳುತ್ತಿದ್ದೇವೆ. ಒಂದು ವಿಶ್ವ ದರ್ಜೆಯ ಸಿನಿಮಾ ಮಾಡೋ ಸಾಮರ್ಥ್ಯವನ್ನು ನಮ್ಮ ಪ್ರತಿಭಾವಂತರ ತಂಡ ಹೊಂದಿದೆ. ಸದ್ಯಕ್ಕೆ ಇಷ್ಟು ಮಾತ್ರ ನಾನು ಹೇಳಬಲ್ಲೇ.. ಉಳಿದ ವಿಷಯಗಳು ಒಂದೊಂದಾಗಿ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ" ಎಂದು ರಾಜವರ್ಧನ್‌ ಹೇಳಿದ್ದಾರೆ.