ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Disha Patani: ಮೌನಿ ರಾಯ್ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ? ಏನಿದು ಹೊಸ ಚರ್ಚೆ?

Disha Patani: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಶುರುವಾಗಿದ್ದು, ಮೌನಿ ರಾಯ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಡಿವೋರ್ಸ್ ವಿಷಯದಲ್ಲಿ ಮೌನಿ ರಾಯ್ ಅವರ ಆಪ್ತ ಗೆಳತಿ, ನಟಿ ದಿಶಾ ಪಟಾನಿ ಹೆಸರನ್ನು ಎಳೆದು ತಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಮೌನಿ ರಾಯ್ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ? ಏನಿದು ಹೊಸ ಚರ್ಚೆ?

ದಿಶಾ ಪಟಾನಿ -

Yashaswi Devadiga
Yashaswi Devadiga May 15, 2026 7:17 PM

ಮೌನಿ ರಾಯ್ (Mouni Roy ) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಅವರ ವಿಚ್ಛೇದನ ಘೋಷಣೆಯ ನಂತರ ಹೊಸ ವಿಚಾರವೊಂದು ಸಖತ್‌ ಚರ್ಚೆ ಆಗುತ್ತಿದೆ. ಈ ಜೋಡಿ ದೂರ ಆಗಲು ದಿಶಾ ಪಟಾನಿ ಕಾರಣ ಎಂದು ಹಲವರು ಆರೋಪಿಸುತ್ತಿದ್ದಾರೆ. ವಿಚ್ಛೇದನದ ಬಗ್ಗೆ ವದಂತಿಗಳು ಹರಡಲು ಪ್ರಾರಂಭಿಸಿದ ಅದೇ ಸಮಯದಲ್ಲಿ ದಿಶಾ ಪಟಾನಿ (Disha Patani) ಇನ್‌ಸ್ಟಾಗ್ರಾಮ್‌ನಲ್ಲಿ ಸೂರಜ್ ನಂಬಿಯಾರ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ.

ಭಾರಿ ಟ್ರೋಲ್

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಶುರುವಾಗಿದ್ದು, ಮೌನಿ ರಾಯ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಡಿವೋರ್ಸ್ ವಿಷಯದಲ್ಲಿ ಮೌನಿ ರಾಯ್ ಅವರ ಆಪ್ತ ಗೆಳತಿ, ನಟಿ ದಿಶಾ ಪಟಾನಿ ಹೆಸರನ್ನು ಎಳೆದು ತಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: Amruthadhaare Serial: ಬೇಬಿ ಮನೆಯಲ್ಲಿ ಜೈದೇವ್‌ ಕೆಲಸದಾಳು; ಮಕ್ಕಳನ್ನು ಸಂಭಾಳಿಸಲು ಗೌತಮ್‌-ಭೂಮಿ ಪರದಾಟ

ದಿಶಾ ಪಟಾನಿ ಮತ್ತು ವಿಚ್ಛೇದನಕ್ಕೆ ಯಾವುದೇ ಪುರಾವೆಗಳಿಲ್ಲ. ನಟಿ ಮತ್ತು ಮೌನಿ ರಾಯ್ ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದಾರೆ ಮತ್ತು ಆಗಾಗ್ಗೆ ಒಟ್ಟಿಗೆ ರಜಾದಿನಗಳನ್ನು ಕಳೆಯುವುದು, ಪಾರ್ಟಿಗಳಲ್ಲಿ ಭಾಗವಹಿಸುವುದು ಮತ್ತು ಪರಸ್ಪರರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಾಣಬಹುದು.

ದಿಶಾ ಪಟಾನಿ ಅವರೇ ಈ ದಂಪತಿಯ ಸಂಸಾರ ಒಡೆಯಲು ಕಾರಣ ಎಂದು ನೆಟ್ಟಿಗರು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ. ಮೌನಿ ರಾಯ್ ಮತ್ತು ದಿಶಾ ಪಟಾನಿ ಅವರ ಸ್ನೇಹವನ್ನು ಕೆಲವರು ಸಲಿಂಗ ಕಾಮ ಇರಬಹುದು ಎಂದು ಕಮೆಂಟ್‌ ಮಾಡಿದ್ದಾರೆ. ತಮ್ಮ ಡಿವೋರ್ಸ್ ಪೋಸ್ಟ್‌ನಲ್ಲಿ ಅತಿಯಾದ ನೆಗೆಟಿವಿಟಿ ಮತ್ತು ಗೆಳತಿ ದಿಶಾ ಪಟಾನಿ ವಿರುದ್ಧ ಹರಿದು ಬರುತ್ತಿದ್ದ ಟ್ರೋಲ್‌ಗಳನ್ನು ತಡೆಯಲು ಮೌನಿ ರಾಯ್ ತಕ್ಷಣವೇ ಆ ಪೋಸ್ಟ್‌ನ ಕಮೆಂಟ್ಸ್ ಅನ್ನು ಆಫ್ ಮಾಡಿದರು.

ಮೌನಮುರಿದ ಮೌನಿ ರಾಯ್!‌

ಇದಕ್ಕೂ ಮುಂಚೆ ನಟಿ ಪೋಸ್ಟ್‌ನಲ್ಲಿ, ನಮ್ಮ ಸ್ನೇಹವನ್ನು ಗೌರವಿಸಲು ಪ್ರಯತ್ನಿಸುತ್ತೇವೆ "ಈ ಹಂತದಲ್ಲಿ, ನಾವು ಈ ಪರಿಸ್ಥಿತಿಯನ್ನು ವಿವೇಕಯುತವಾಗಿ ಮತ್ತು ಖಾಸಗಿಯಾಗಿ ನಿಭಾಯಿಸುವತ್ತ ಗಮನಹರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸ್ನೇಹವನ್ನು ಗೌರವಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ತಿಳುವಳಿಕೆ, ನಮ್ಮ ಖಾಸಗಿತನಕ್ಕೆ ನೀವು ನೀಡುವ ಗೌರವ ಮತ್ತು ಈ ಸಮಯದಲ್ಲಿ ನಮಗೆ ನೀಡುತ್ತಿರುವ ನಿರಂತರ ಬೆಂಬಲವನ್ನು ನಾವು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ" ಎಂದು ಮೌನಿ ರಾಯ್‌ ತಿಳಿಸಿದ್ದಾರೆ. ಈ ಪೋಸ್ಟ್‌ ಅನ್ನು ಅವರ ಮಾಜಿ ಪತಿ ಸೂರಜ್‌ ನಂಬಿಯಾರ್‌ ಕೂಡ ಹಂಚಿಕೊಂಡಿದ್ದಾರೆ.

"ದಯವಿಟ್ಟು ನಮ್ಮ ಖಾಸಗಿತನ ಮತ್ತು ಗೌರವವನ್ನು ನೀಡಬೇಕೆಂದು ಹಾಗೂ ನನ್ನ ಅಥವಾ ಸೂರಜ್ ಬಗ್ಗೆ ಯಾವುದೇ ಸುಳ್ಳು ಸುದ್ದಿಗಳನ್ನ ಹಬ್ಬಿಸಬಾರದೆಂದು ಎಲ್ಲರಲ್ಲೂ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.

ಇದನ್ನೂ ಓದಿ: Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

ಈ ಕಷ್ಟದ ಸಮಯದಲ್ಲಿ ನೀವೆಲ್ಲರೂ ನಮಗೆ ಖಾಸಗಿತನವನ್ನು ನೀಡುತ್ತೀರಿ ಎಂದು ಭಾವಿಸುತ್ತೇನೆ. ದಯವಿಟ್ಟು ಇದನ್ನು ನಿಲ್ಲಿಸಿ ಎಂದು ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ವಿನಮ್ರ ವಿನಂತಿ ಮಾಡಿಕೊಳ್ಳುತ್ತಿದ್ದೇನೆ" ಎಂದು ಮೌನಿ ರಾಯ್‌ ಮನವಿ ಮಾಡಿಕೊಂಡಿದ್ದಾರೆ.