ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Athulya arrested: ಖ್ಯಾತ ನಟಿ ಅತುಲ್ಯ ಅರೆಸ್ಟ್; ಏನಿದು ಪ್ರಕರಣ?

Athulya actress: ವೈದ್ಯರೊಬ್ಬರನ್ನು ಚಿಕಿತ್ಸೆ ನೀಡುವ ನೆಪದಲ್ಲಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು, ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದ ಮೇಲೆ ನಟಿ ಹಾಗೂ ವಕೀಲೆ ಅತುಲ್ಯಾ ಚಂದ್ರನ್ (Athulya arrested) ಸೇರಿದಂತೆ ಮೂವರನ್ನು ಪೊಲೀಸರು (Police arrested) ಬಂಧಿಸಿದ್ದಾರೆ. ಘಟನೆಯು ಕಳೆದ ಮಂಗಳವಾರ ಕೊಚ್ಚಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ವೈದ್ಯರಿಗೆ 41 ವರ್ಷ ವಯಸ್ಸಾಗಿದ್ದು, ಅತುಲ್ಯಾ ಚಂದ್ರನ್ ಮತ್ತು ವೈದ್ಯರು ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಅತುಲ್ಯಾ ಚಂದ್ರನ್

ವೈದ್ಯರೊಬ್ಬರನ್ನು ಚಿಕಿತ್ಸೆ ನೀಡುವ ನೆಪದಲ್ಲಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು, ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದ ಮೇಲೆ ನಟಿ ಹಾಗೂ ವಕೀಲೆ ಅತುಲ್ಯಾ ಚಂದ್ರನ್ (Athulya arrested) ಸೇರಿದಂತೆ ಮೂವರನ್ನು ಪೊಲೀಸರು (Police arrested) ಬಂಧಿಸಿದ್ದಾರೆ. ಘಟನೆಯು ಕಳೆದ ಮಂಗಳವಾರ ಕೊಚ್ಚಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ವೈದ್ಯರಿಗೆ 41 ವರ್ಷ ವಯಸ್ಸಾಗಿದ್ದು, ಅತುಲ್ಯಾ ಚಂದ್ರನ್ ಮತ್ತು ವೈದ್ಯರು ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅತುಲ್ಯಾ ಅವರು ವೈದ್ಯರಿಗೆ ಫೋನ್ ಮಾಡಿ, ತಮ್ಮ ತಾಯಿಯ ತಂಗಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿ ಅಪಾರ್ಟ್‌ಮೆಂಟ್‌ಗೆ ಬರುವಂತೆ ಕೋರಿದ್ದರು. ಅದರಂತೆ ವೈದ್ಯರು ಪೊನ್ನೂರುನ್ನಿ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಗೆ ತೆರಳಿದ್ದರು.

ಇದನ್ನೂ ಓದಿ: Bigg Boss Kannada 13: ಕಿರಣ್ ಶಾಸ್ತ್ರಿ ಕೀಳು ಮಟ್ಟದ ಆಟ; ವೀಕ್ಷಕರ ಆಕ್ರೋಶ

ವೈದ್ಯರು ಅಪಾರ್ಟ್‌ಮೆಂಟ್‌ಗೆ ತಲುಪಿದಾಗ ಅಲ್ಲಿ ನಟಿ ಸೇರಿದಂತೆ ಒಟ್ಟು 12 ಮಂದಿ ಇದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಮೊದಲ ಆರೋಪಿಯಾಗಿರುವ ಬಿಬಿನ್ ಸೇರಿದಂತೆ ಗುಂಪಿನ ಸದಸ್ಯರು ವೈದ್ಯರನ್ನು ಕುರ್ಚಿಯಲ್ಲಿ ಕೂರಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ವೈದ್ಯರ ಮೊಬೈಲ್ ಫೋನ್, ಕೈಗಡಿಯಾರ ಸೇರಿದಂತೆ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅತುಲ್ಯಾ ಚಂದ್ರನ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಒಂಬತ್ತು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ಕ್ಯಾಪ್ಟನ್ಸಿ ಓಟಕ್ಕೆ ಅಡ್ಡಗಾಲು; ಧನುಷ್‌-ಗಾನವಿ ನಡುವೆ ಮಾರಾಮಾರಿ!

ಕಡವಂತ್ರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಹನಿಟ್ರ್ಯಾಪ್‌ನ ಆಯಾಮವೂ ಇರಬಹುದೆಂದು ಪೊಲೀಸರು ಶಂಕಿಸಿದ್ದು, ಎಲ್ಲ ಆಯಾಮಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ.

Yashaswi Devadiga

View all posts by this author