ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಧುರಂಧರ್‌ʼ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದ ನಟ ರಣವೀರ್‌ ಸಿಂಗ್‌ಗೆ ಶಾಕ್‌ ನೀಡಿದ ಬಾಲಿವುಡ್‌ ಡೈರೆಕ್ಟರ್!‌ ಅಷ್ಟಕ್ಕೂ ಏನಿದು ವಿವಾದ?

ಬಾಲಿವುಡ್ ನಟ ರಣವೀರ್ ಸಿಂಗ್ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳಿಂದಾಗಿ 'ಡಾನ್ 3' ಚಿತ್ರದಿಂದ ಹೊರನಡೆದಿದ್ದು, ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಒಕ್ಕೂಟಕ್ಕೆ ದೂರು ನೀಡಿದ್ದಾರೆ. ರಣವೀರ್ ಅವರ ಹಠಾತ್ ನಿರ್ಧಾರದಿಂದ ಶೂಟಿಂಗ್ ಅಸ್ತವ್ಯಸ್ತಗೊಂಡು 40 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ನಿರ್ಮಾಣ ಸಂಸ್ಥೆ ಆಕ್ರೋಶ ಹೊರಹಾಕಿದೆ.

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಧುರಂಧರ್‌ ಸಿನಿಮಾಗಳ ಸಕ್ಸಸ್‌ನ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ ಈ ಮಧ್ಯೆ ನಟ, ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಶಾಕ್‌ ನೀಡಿದ್ದಾರೆ. ತಮ್ಮ 'ಡಾನ್ 3' ಚಿತ್ರದಿಂದ ಹೊರನಡೆದಿದ್ದಾರೆ ಎಂದು ರಣವೀರ್ ಸಿಂಗ್ ವಿರುದ್ಧ 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಸಂಸ್ಥೆಗೆ ದೂರು ನೀಡಿದ್ದಾರೆ.

ಪ್ರೆಸ್‌ ಮೀಟ್‌ ಮಾಡಲಿರುವ ಚಲನಚಿತ್ರ ನೌಕರರ ಒಕ್ಕೂಟ

ಡಾನ್‌ 3 ಸಿನಿಮಾಕ್ಕೆ ನಾಯಕನಾಗಿ ನಟಿಸಲು ರಣವೀರ್ ಸಿಂಗ್ ಒಪ್ಪಿಕೊಂಡಿದ್ದರು. ಆದರೆ, ಆನಂತರ ಚಿತ್ರತಂಡದ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಚಿತ್ರ ಸದ್ಯಕ್ಕೆ ಸ್ಥಗಿತಗೊಂಡಿದೆ. ಸದ್ಯ ದೂರನ್ನು ಸ್ವೀಕರಿಸಿರುವ ಚಲನಚಿತ್ರ ನೌಕರರ ಒಕ್ಕೂಟವು ಮೇ 25 ರಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತನ್ನ ಅಧಿಕೃತ ನಿರ್ಧಾರವನ್ನು ಪ್ರಕಟಿಸಲು ಸಜ್ಜಾಗಿದೆ. ತನ್ನ ಅಧಿಕೃತ ಹೇಳಿಕೆಯಲ್ಲಿ ಆ ಪತ್ರಿಕಾಗೋಷ್ಠಿಯಲ್ಲಿ ರಣವೀರ್ ಸಿಂಗ್ ಚಿತ್ರದಿಂದ ಹಿಂದೆ ಸರಿದಿರುವ ಬಗ್ಗೆ ಫರ್ಹಾನ್ ಅಖ್ತರ್ ನೀಡಿರುವ ದೂರನ್ನು ಪ್ರಸ್ತಾಪಿಸುವುದಾಗಿ ತಿಳಿಸಿದೆ.

ಫರ್ಹಾನ್ ಅಖ್ತರ್ ಸದಸ್ಯರಾಗಿರುವ ತನ್ನ ಅಂಗಸಂಸ್ಥೆಯಾದ 'ಇಂಡಿಯನ್ ಫಿಲ್ಮ್ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್' (IFTDA) ಮೂಲಕ ಈ ದೂರು ಬಂದಿದೆ ಎಂದು ಫೆಡರೇಶನ್ ತಿಳಿಸಿದೆ. ದೂರು ಮತ್ತು ಅದಕ್ಕೆ ಸಂಬಂಧಿಸಿದ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ ತನ್ನ ನಿಲುವನ್ನು ತಿಳಿಸುವುದಾಗಿ ಚಲನಚಿತ್ರ ನೌಕರರ ಒಕ್ಕೂಟ ಹೇಳಿದೆ.

Deepika Padukone: ಹೀಗಿದ್ದಾಳೆ ನೋಡಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್‌

ಏನಿದು 'ಡಾನ್ 3' ವಿವಾದ?

ಶಾರುಖ್ ಖಾನ್ ಬಳಿಕ ‘ಡಾನ್’ ಸರಣಿಯ ಹೊಸ ನಾಯಕನಾಗಿ ರಣವೀರ್ ಸಿಂಗ್ ಅವರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು ಮತ್ತು ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ತಿಂಗಳುಗಳಿಂದ ಭರದಿಂದ ನಡೆಯುತ್ತಿದ್ದವು. ಆದರೆ, ಸ್ಕ್ರಿಪ್ಟ್ ಮತ್ತು ಚಿತ್ರದ ನಿರ್ದೇಶನದ ವಿಷಯದಲ್ಲಿ ಮೂಡಿದ ಕೆಲವು ಕ್ರಿಯೇಟಿವ್ ಭಿನ್ನಾಭಿಪ್ರಾಯಗಳಿಂದಾಗಿ ರಣವೀರ್ ಸಿಂಗ್ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಈ ದಿಢೀರ್ ಬೆಳವಣಿಗೆಯ ಬಗ್ಗೆ ರಣವೀರ್ ಸಿಂಗ್ ಆಗಲಿ ಅಥವಾ ನಿರ್ಮಾಣ ಸಂಸ್ಥೆ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಆಗಲಿ ಇದುವರೆಗೆ ಯಾವುದೇ ಬಹಿರಂಗ ಹೇಳಿಕೆ ನೀಡಿರಲಿಲ್ಲ.

40 ಕೋಟಿ ರೂ. ನಷ್ಟ ಪರಿಹಾರಕ್ಕೆ ಒತ್ತಾಯ!

ವರದಿಗಳ ಪ್ರಕಾರ, ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ರಣವೀರ್ ಸಿಂಗ್ ಅವರನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮತ್ತು ಪೂರ್ವಸಿದ್ಧತಾ ಕೆಲಸಗಳಿಗಾಗಿ ಈಗಾಗಲೇ ಭಾರಿ ಹಣ ಹೂಡಿಕೆ ಮಾಡಿದೆ. ‌ರಣವೀರ್‌ ಸಿಂಗ್‌ ಅವರ ಈ ಹಠಾತ್ ನಿರ್ಧಾರದಿಂದ ಶೂಟಿಂಗ್‌ ಶೆಡ್ಯೂಲ್‌ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನಿರ್ಮಾಣ ಸಂಸ್ಥೆಗೆ ಸುಮಾರು 40 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಸದರಿ ನಷ್ಟದ ಮೊತ್ತವನ್ನು ರಣವೀರ್ ಅವರಿಂದಲೇ ವಸೂಲಿ ಮಾಡಲು ಫರ್ಹಾನ್ ಅಖ್ತರ್ ಕಾನೂನು ಹೋರಾಟದ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.

ಎರಡನೇ ಬಾರಿಗೆ ಪೋಷಕರಾಗಲಿರುವ ದೀಪಿಕಾ ಪಡುಕೋಣೆ- ರಣವೀರ್‌ ಸಿಂಗ್‌; ಕ್ಯೂಟ್‌ ಫೋಟೋ ಹಂಚಿಕೊಂಡ ಜೋಡಿ

ಚಿತ್ರದ ಸುತ್ತಲಿನ ವದಂತಿಗಳು ಬೆಳೆಯುತ್ತಿದ್ದಂತೆ, ಈ ಸಮಸ್ಯೆಯನ್ನು ಬಗೆಹರಿಸಲು 'ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ' ಮಧ್ಯಸ್ಥಿಕೆ ವಹಿಸುವ ಮಾತುಗಳೂ ಕೇಳಿಬಂದವು. ಮತ್ತೊಂದೆಡೆ, ವಿವಾದ ಇತ್ಯರ್ಥದ ಭಾಗವಾಗಿ ರಣವೀರ್ ಸಿಂಗ್ ತಾವು ಪಡೆದಿದ್ದ ಮುಂಗಡ ಹಣವನ್ನು ಮರಳಿ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸದ್ಯ ಸೋಮವಾರ ನಡೆಯಲಿರುವ ಪತ್ರಿಕಾಗೋಷ್ಠಿಯ ಬಳಿಕವೇ 'ಡಾನ್ 3' ಚಿತ್ರದ ಭವಿಷ್ಯ ಹಾಗೂ ರಣವೀರ್ ಸಿಂಗ್ ಅವರ ಮುಂದಿನ ನಡೆ ಏನು ಎಂಬುದು ಅಧಿಕೃತವಾಗಿ ತಿಳಿಯಲಿದೆ.

ರಣವೀರ್‌ ಸಿಂಗ್‌ & ಫರ್ಹಾನ್‌ ವಿವಾದ!



ಆಮಿರ್‌ ಖಾನ್‌ ಎಂಟ್ರಿ ಕೊಟ್ಟಿದ್ರಾ?

ಈ ಮಧ್ಯೆ ಎದುರಾಗಿರುವ ಡಾನ್‌ 3 ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಡೆದ ತೆರೆಮರೆಯ ಚರ್ಚೆಗಳಲ್ಲಿ ನಟ ಆಮಿರ್‌ ಖಾನ್ ಭಾಗಿಯಾಗಿದ್ದಾರೆ ಎಂಬ ವದಂತಿಗಳೂ ಹರಡಿದ್ದವು. ಆದರೆ ನಂತರ ಆಮಿರ್‌, ಇದಕ್ಕೂ ನನಗೂ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದರು.