ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Rajkumar Birthday: ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್; ವಿಡಿಯೋ ವೈರಲ್‌

Mohanlal : ಎರಡು ವರ್ಷಗಳ ಹಿಂದೆ ಮೋಹನ್ ಲಾಲ್ 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಹಾಡು ಸಖತ್ ವೈರಲ್ ಆಗಿತ್ತು. ಈ ಬಾರಿಯಂತೂ ಮೋಹನ್ ಲಾಲ್ ಅವರು ಸಾಹಿತ್ಯವನ್ನು ನೋಡದೆಯೇ ಹಾಡಿದ್ದಾರೆ. ಈ ವಿಶೇಷ ದಿನದಂದು ಒಂದು ವಿಡಿಯೋವೊಂದು ಭರ್ಜರಿ ಸೌಂಡ್‌ ಮಾಡುತ್ತಿದೆ.

ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್!

ಮೋಹನ್ ಲಾಲ್ -

Yashaswi Devadiga
Yashaswi Devadiga Apr 24, 2026 8:25 AM

ಇಂದು ಡಾ. ರಾಜ್‌ಕುಮಾರ್ ಜನ್ಮದಿನ (Rajkumar Birthday). ರಾಜ್​​ಕುಮಾರ್ ಅವರು ಇಂತಹ ಪಾತ್ರ ಮಾಡಿಲ್ಲ ಎಂದಿಲ್ಲ. ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ತಲುಪಿಸುವ ಚಿತ್ರಗಳನ್ನು ಮಾಡಿದರು. ಈ ವಿಶೇಷ ದಿನದಂದು ಒಂದು ವಿಡಿಯೋವೊಂದು ಭರ್ಜರಿ ಸೌಂಡ್‌ ಮಾಡುತ್ತಿದೆ. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohan Lal) ಅವರು ‘ಎಂದೆಂದೂ ನಿನ್ನನು ಮರೆತು’ ಗೀತೆಯನ್ನು ಹಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಗೀತೆಗೆ ರಾಜ್‌ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ವಿಡಿಯೋ ವೈರಲ್

ಇತ್ತೀಚೆಗೆ ಮೋಹನ್ ಲಾಲ್ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ತಮ್ಮದೇ 'ನಾರನ್' ಚಿತ್ರದ 'ವೇಲ್ ಮುರುಗ' ಎಂಬ ಹಾಡನ್ನು ಅವರು ಹಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮದಲ್ಲೇ ಮೋಹನ್ ಲಾಲ್ ಹಾಡಿರುವ 'ಎರಡು ಕನಸು' ಚಿತ್ರದ ಹಾಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಮೋಹನ್ ಲಾಲ್ ಕನ್ನಡ 'ಮೈತ್ರಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದರು. 'ಮೈತ್ರಿ' ಸಿನಿಮಾ ವೇಳೆ ಡಾ. ರಾಜ್‌ಕುಮಾರ್ ಬಗ್ಗೆ ಮೋಹನ್ ಲಾಲ್ ಮಾತನಾಡಿದ್ದರು. ನಾನು ರಾಜ್‌ಕುಮಾರ್ ಸರ್ ಅವರಿಗೆ ಆತ್ಮೀಯನಾಗಿದ್ದೆ. ನನಗೆ ಅವರೊಟ್ಟಿಗೆ ನಟಿಸುವ ಆಸೆ ಇತ್ತು ಎಂದಿದ್ದರು.

ಇದನ್ನೂ ಓದಿ: Dhurandhar Movie: ಲೈವ್ ಶೋ ವೇಳೆ ಮೈ ಮೇಲೆ ನೀರು ಸುರಿದುಕೊಂಡ ಗಾಯಕಿ; ಭಾರಿ ಟ್ರೋಲ್



ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ಎಂದೆಂದೂ ನಿನ್ನನು ಮರೆತು..’ ಹಾಡು ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಈ ಗೀತೆಗೆ ಧ್ವನಿ ನೀಡಿದ್ದರು. 1974ರಲ್ಲಿ ‘ಎರಡು ಕನಸು’ ಸಿನಿಮಾ ಬಿಡುಗಡೆ ಆಗಿತ್ತು.

ಇದನ್ನೂ ಓದಿ: Akshay Kumar: ನಕಲಿ ಮೀಸೆ ಅಂಟಿಸಿಕೊಂಡು ಟ್ರೋಲ್; ಕ್ಷಮೆ ಕೇಳಿದ ಅಕ್ಷಯ್ ಕುಮಾರ್

'ದೃಶ್ಯಂ- 3' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಲಾಲೆಟ್ಟನ್ ಸಜ್ಜಾಗಿದ್ದಾರೆ. ಈ ವರ್ಷ 5 ಸಿನಿಮಾಗಳು ಮೋಹನ್ ಲಾಲ್ ಕೈಯಲ್ಲಿವೆ. ಮಮ್ಮುಟ್ಟಿ ಜೊತೆ ನಟಿಸಿರುವ 'ಪೆಟ್ರಿಯಾಟ್' ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ಇನ್ನು ಬಹುನಿರೀಕ್ಷಿತ 'ದೃಶ್ಯಂ- 3' ಸಿನಿಮಾ ಮೇ 21ರಂದು ಬಿಡುಗಡೆ ಆಗಲಿದೆ.