ಇಂದು (ಫೆ. 12) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ಡಾ.ಜಯಮಾಲ (dr Jayamala) ಅವರನ್ನು ಡಾ.ವಿಷ್ಣು ಸೇನಾ ಸಮಿತಿ (Dr Vishnu Sena Samiti) ವತಿಯಿಂದ ಅಭಿನಂದಿಸಲಾಗಿದೆ. ಜಯಮಾಲ ನಾಯಕತ್ವದ ಸಂದರ್ಭದಲ್ಲೆಲ್ಲಾ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆಗಳು ಮತ್ತು ಸಕಾರಾತ್ಮಕ ಕಾರ್ಯಕ್ರಮಗಳು ನಡೆದಿವೆ. ಈ ಬಾರಿ ಸಹ ಅದೇ ರೀತಿಯ ಉತ್ತಮ ಕಾರ್ಯಗಳು ನೆರವೇರಲಿ ಮತ್ತು ಕನ್ನಡ ಚಿತ್ರರಂಗದ (Sandalwood) ಪ್ರಸ್ತುತ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರಗಳನ್ನು ಕಂಡುಕೊಳ್ಳುವಂತಾಗಲೆಂದು ವೀರಕಪುತ್ರ ಶ್ರೀನಿವಾಸ ಆಶಯ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ಇದೇ ವೇಳೆ ವೀರಕಪುತ್ರ ಶ್ರೀನಿವಾಸ (veerakaputra srinivas) ಅವರು, ಡಾ.ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದಂತೆ ಈ ಎರಡು ಮನವಿಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: Aruna Irani: ಆ ನಟ ನನ್ನ ಜೀವನ ಹಾಳು ಮಾಡಿದ; ‘ಅಣ್ಣಯ್ಯ’ ನಟಿ
ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಅದ್ಧೂರಿ ಸಮಾರಂಭ
ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಣೆಯಾಗಿದೆ. ಆದರೆ ಆರು ತಿಂಗಳು ಕಳೆದರೂ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಆದ್ದರಿಂದ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅದ್ಧೂರಿ ಸಮಾರಂಭವನ್ನು ಆಯೋಜಿಸುವಂತೆ ಸರ್ಕಾರವನ್ನು ವಿನಂತಿಸಬೇಕೆಂದು ಕೋರಿದರು.
ಈ ಕಾರ್ಯಕ್ರಮವು ಕನ್ನಡ ಚಿತ್ರರಂಗಕ್ಕೆ ಹೊಸ ಉತ್ತೇಜನ ನೀಡುವ ರೀತಿಯಲ್ಲಿ ಆಯೋಜಿಸಬೇಕೆಂದು ವಿನಂತಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಐವತ್ತು ಸಾವಿರದಷ್ಟು ಡಾ.ವಿಷ್ಣು ಸೇನಾನಿಗಳನ್ನು ಸಂಘಟಿಸುವ ಜವಬ್ದಾರಿಯನ್ನು ಸಹ ಹೊತ್ತುಕೊಂಡಿದ್ದಾರೆ.

ಅಭಿಮಾನ ಸ್ಟುಡಿಯೋ ವಿಚಾರ
ಅಭಿಮಾನ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ತೆರವುಗೊಳಿಸಲಾಗಿದೆ. ಅದು ಈ ನಾಡಿನ ಇತಿಹಾಸದಲ್ಲೊಂದು ಕಪ್ಪುಚುಕ್ಕೆಯಾಗಿ ದಾಖಲಾಗಿದೆ. ಸಾವಿನಲ್ಲೂ ಶಾಂತಿ ನೀಡದ ನಮ್ಮ ವ್ಯವಸ್ಥೆ ಬಗ್ಗೆ ನಮಗೆ ಅನುಕಂಪವಿದೆ.
ಮೇರುನಟನ ಸ್ಮಾರಕವನ್ನೇ ತೆರುವುಗೊಳಿಸಿದ ಜಾಗದಲ್ಲಿ ಖಾಸಗಿ ಕಟ್ಟಡವೋ, ಮಾಲ್, ಕಾಂಪ್ಲೆಕ್ಸ್ ಬಂದರೆ ಅದು ಇನ್ನೂ ಅವಮಾನಕರ ಸಂಗತಿ. ಆದ್ದರಿಂದ ಆ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದೆ, ಮೂಲ ಉದ್ದೇಶಕ್ಕಾಗಿ ಮಾತ್ರವೇ ಬಳಸುವಂತೆ ಮಾಡಲು ವಾಣಿಜ್ಯ ಮಂಡಳಿಯು ಮುಂಜಾಗೃತೆಯನ್ನು ವಹಿಸಬೇಕೆಂದು ಕೋರಿದರು.
ಇದನ್ನೂ ಓದಿ: Mrunal Thakur: ಧನುಷ್ ಜೊತೆಗೆ ಮದುವೆ ವದಂತಿ; ಕೊನೆಗೂ ಮೌನ ಮುರಿದ ನಟಿ ಮೃಣಾಲ್
ಈ ಸಂದರ್ಭದಲ್ಲಿ ಡಾ.ವಿಷ್ಣು ಸೇನಾ ಸಮಿತಿಯ ಆನಂದ ರಾಜ್, ಮಲ್ಲಿಕಾರ್ಜುನ್, ಎಸ್.ರಘು, ಮೂರ್ತಿ ಮೊದಲಾದವರು ಹಾಜರಿದ್ದರು.